
CHITRADURGA NEWS | 10 AUGUST 2025
ಹೊಳಲ್ಕೆರೆ: ತಾಲ್ಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಹಾಲುಕೊಳ್ಳದ ಜಂಗಮೇಶ್ವರಸ್ವಾಮಿಯ ಪುನರ್ ನಿರ್ಮಾಣ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಯಿತು.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಚಿತ್ರದುರ್ಗ ಮೂಲದ ದಂಪತಿಗಳಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ
ಈ ವೇಳೆ ಶಾಸಕ ಎಂ.ಚಂದ್ರಪ್ಪ ಭಾಗವಹಿಸಿ ಮಾತನಾಡಿ, ಮೂರನೆ ಬಾರಿ ಹೊಳಲ್ಕೆರೆಯಲ್ಲಿ ಶಾಸಕನಾಗಿದ್ದೇನೆ. ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಅಧಿಕಾರವಿದ್ದಾಗ ಜನರಿಗೆ ಉಪಕಾರ ಮಾಡಬೇಕೆಂಬ ಮನೋಭಿಲಾಷೆ ನನ್ನದು ಎಂದು ಹೇಳಿದರು.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಮಹಾಸ್ವಾಮೀಜಿ ಮಾತನಾಡಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರು ಪಕ್ಷಾತೀತವಾಗಿದ್ದಾರೆ. ಬೇರೆ ಪಕ್ಷದವರೆಂದು ಯಾರನ್ನು ಕಡೆಗಣಿಸುವುದಿಲ್ಲ. ಇಂತಹ ಶಾಸಕರು ನಿಮಗೆ ಸಿಕ್ಕಿರುವುದು ಪುಣ್ಯ. ಗ್ರಾಮಕ್ಕೆ ಏನೇನು ಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಂಡು ಶಾಸಕರಿಂದ ಅನುಕೂಲ ಪಡೆದುಕೊಳ್ಳಿ.
ಇನ್ನು ಮೂರು ತಿಂಗಳೊಳಗೆ ಭದ್ರಾ ಜಲಾಶಯದಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದಾಗಿ ಮಾತು ಕೊಟ್ಟಿದ್ದಾರೆ. ಅವರಲ್ಲಿ ಬದ್ದತೆಯಿದೆ. ಹೇಳಿದ ಕೆಲಸವನ್ನು ಮಾಡಿ ಮುಗಿಸುವ ಸಾಮಥ್ರ್ಯವಿದೆ.
ಇದನ್ನೂ ಓದಿ: ರಂಗ ಕಲೆಗಳ ಪುನಶ್ಚೇತನಕ್ಕೆ ಯೋಚನೆ | ಸತೀಶ ತಿಪಟೂರು
ಹೊಸಕೆರೆ ಮತ್ತು ಹಳೆಕೆರೆಯ ಹೂಳೆತ್ತುವಂತೆ ಶಾಸಕರಲ್ಲಿ ಬೇಡಿಕೆಯಿಟ್ಟ ಸ್ವಾಮೀಜಿ ಶಾಸಕ ಡಾ.ಎಂ.ಚಂದ್ರಪ್ಪನವರಿಗೆ ನೀವುಗಳೆಲ್ಲಾ ಸಹಕಾರ ಕೊಡಿ ಎಂದು ತಾಳಿಕಟ್ಟೆ ಗ್ರಾಮದ ಹಾಲುಮತಸ್ಥರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಗೋವಿಂದಪ್ಪ, ಚಿಕ್ಕಪ್ಪ, ಹಳ್ಳಪ್ಪ, ಯಲ್ಲಪ್ಪ, ಚಂದ್ರಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
