
CHITRADURGA NEWS | 17 JUNE 2024
ಚಿತ್ರದುರ್ಗ: ನಗರದ ಎಸ್.ಆರ್.ಬಿ.ಎಂ.ಎಸ್.ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿಗೆ ಆಯ್ಕೆಯಾದ ರೋಟರಿ ಕ್ಲಬ್ ಚಿನ್ಮೂಲಾದ್ರಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಮಂಜುನಾಥ್ ಭಾಗವತ್ ಅಧಿಕಾರ ಸ್ವೀಕಾರ ಮಾಡಿದರು.

ಇದನ್ನೂ ಓದಿ: ಸಾಣೇಹಳ್ಳಿ ಮಠಕ್ಕೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಭೇಟಿ
ಈ ವೇಳೆ ಮಾತನಾಡಿದ ಅವರು, ಅರ್ಹತೆ, ಅವಕಾಶ ಮತ್ತು ಅನುಗ್ರಹ ಇದ್ದಾಗ ಮಾತ್ರ ಇಂತಹ ಹುದ್ದೆಗಳು ದೂರಕಲು ಸಾಧ್ಯವಿದೆ, ಈ ಅರ್ಹತೆ ನನ್ನಲ್ಲಿ ಇದ್ದೇಯೂ ಇಲ್ಲವೂ ಗೋತ್ತಿಲ್ಲ ಆದರೂ ಸಹಾ ಅಧ್ಯಕ್ಷ ಸ್ಥಾನ ಬಂದಿದೆ. ನನ್ನ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಕ್ಲಬ್‍ನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ರೋಟರಿಕ್ಲಬ್ ಚಿನ್ಮೂಲಾದ್ರಿಯ ಮಾಜಿ ಅಧ್ಯಕ್ಷ ಶಂಕರಪ್ಪ ಮಾತನಾಡಿ, ರೋಟರಿ ಎನ್ನುವುದು ಒಂದು ಕುಟುಂಬ ಇದ್ದಂತೆ, ಇಲ್ಲಿ ಎಲ್ಲರು ಸೇರಿ ಸಮಾಜದ ಏಳ್ಗೆಗಾಗಿ ಕೆಲಸವನ್ನು ಮಾಡಬೇಕಿದೆ, ಬೇರೆಯವರಿಗೆ ಸಹಾಯವನ್ನು ಮಾಡುವುದರ ಮೂಲಕ ಸಮಾಜ ಸೇವೆಯನ್ನು ಮಾಡಬೇಕಿದೆ.
ನನ್ನ ಒಂದು ವರ್ಷ ಯಾವ ರೀತಿ ಕಳೆಯಿತು ಎನ್ನುವುದು ಗೊತ್ತಾಗಿಲ್ಲ, ಈ ಕ್ಲಬ್‍ನಲ್ಲಿ ಕೆಲಸವನ್ನು ಮಾಡುವುದರ ಮೂಲಕ ನನ್ನ ಮಾನಸಿಕ ನೆಮ್ಮದಿಯೂ ಸಹಾ ಹೆಚ್ಚಾಗಿದೆ. ಸಂತೋಷವನ್ನು ತಂದಿದೆ. ನಮ್ಮ ತಂಡವೂ ಸಹಾ ನನಗೆ ಹೆಚ್ಚಿನ ರೀತಿಯಲ್ಲಿ ನೆರವನ್ನು ನೀಡಿದೆ ಇದರಿಂದ ಉತ್ತಮವಾದ ಕಾರ್ಯವನ್ನು ಮಾಡಿದ ತೃಪ್ತಿ ನನಗೆ ಇದೆ ಎಂದರು.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ‘ಡಿ’ ಬಾಸ್ ಗ್ಯಾಂಗ್ !
ವೇದಿಕೆಯಲ್ಲಿ ರೋಟೇರಿಯನ್ ಡಿ.ಜಿ. ರವೀಂದ್ರ, ಮಧುಪ್ರಸಾದ್, ರೋಟರಿಕ್ಲಬ್ ಚಿನ್ಮೂಲಾದ್ರಿನ ಕಾರ್ಯದರ್ಶಿಗಳಾದ ಶಿವರಾಂ, ಗೌರ್ನರ್ ಉಮ್ಮೇಶ್ ತುಪ್ಪದ್, ಸುದರ್ಶನ್ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
