
CHITRADURGA NEWS | 13 AUGUST 2025
ಚಿತ್ರದುರ್ಗ: ಜಿಲ್ಲಾ ಯಾದವ(ಗೊಲ್ಲ) ಸಂಘದ ಅಧ್ಯಕ್ಷನಾಗಿ ನಾನು ಹಣ ದುರುಪಯೋಗ ಮಾಡಿಕೊಂಡಿದ್ದು ಸಾಬೀತಾದರೆ ದುರುಪಯೋಗ ಆಗಿರುವ ಹಣಕ್ಕೆ ಎರಡು ಪಟ್ಟು ಹಣ ಪಾವತಿ ಮಾಡಿ ಬಹಿರಂಗವಾಗಿ ಸಮಾಜದ ಕ್ಷಮೆ ಕೋರುತ್ತೇನೆ. ಆದರೆ, ದುರುಪಯೋಗ ಆಗಿಲ್ಲ ಎಂದಾದರೆ ನನ್ನ ಮೇಲೆ ಆಪಾದನೆ ಮಾಡಿದವರು ಯಾವ ಶಿಕ್ಷೆಗೆ ಗುರಿಯಾಗುತೀರಿ ಎಂದು ಜಿಪಂ ಮಾಜಿ ಅಧ್ಯಕ್ಷ ಯಾದವ (ಗೊಲ್ಲ)ರ ಸಂಘದ ಅಧ್ಯಕ್ಷರಾಗಿದ್ದ ಸಿ.ಮಹಾಲಿಂಗಪ್ಪ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಶರಣಸಂಸ್ಕೃತಿ ಉತ್ಸವ | ಆಗಸ್ಟ್ 17 ರಂದು ಪೂರ್ವಸಿದ್ಧತಾ ಸಭೆ
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊಲ್ಲ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕಳೆದ 40 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನ್ನ ಏಳಿಗೆಯನ್ನು ಸಹಿಸದ ಮಾಜಿ ಶಾಸಕ ಎ.ವಿ.ಉಮಾಪತಿ ಇನ್ನಿತರರು ನನ್ನನ್ನು ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಹೋರಾಟ ನಡೆಸಿದ ಫಲವಾಗಿ ವಿದ್ಯಾರ್ಥಿ ನಿಲಯ ಸಿಕ್ಕಿದೆ. ಗೊಲ್ಲ ಜನಾಂಗವನ್ನು ಎಸ್ಟಿಗೆ ಸೇರಿಸಲು ಹೋರಾಟ ನಡೆಸಿ ಜೈಲು ವಾಸ ಕೂಡ ಅನುಭವಿಸಿದ್ದೇನೆ.
ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಸಮುದಾಯ ಭವನ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅನುದಾನ ಮಂಜೂರು ಮಾಡಿಸಿದ್ದೇನೆ. ಸಂಘದ ಕಟ್ಟಡದ ಬಾಡಿಗೆ ಹಣದಲ್ಲಿ ವಿದ್ಯಾನಗರದಲ್ಲಿ 52 ಲಕ್ಷದ 90 ಸಾವಿರದ 333 ರೂ.ಗಳ ಚಲನ್ ಕಟ್ಟಿ ಸಿಎ ನಿವೇಶನ ಖರೀಧಿಸಿದ್ದೇವೆ. ಇದನ್ನು ದುರಪಯೋಗ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು?
ಇದನ್ನೂ ಓದಿ: ಹಿಂದುಳಿದ ವರ್ಗದ ಪತ್ರಕರ್ತರಿಗೆ ಮೀಡಿಯಾ ಕಿಟ್ | ಅರ್ಜಿ ಆಹ್ವಾನ
ವಿನಾ ಕಾರಣ ನನ್ನ ಮೇಲೆ ಆಪಾದನೆ ಹೊರಿಸುತ್ತಿರುವುದರಿಂದ ಸಂಘದ ಅಭಿವೃದ್ದಿಗೆ ಹಿನ್ನೆಡೆಯಾಗುತ್ತಿದೆ. ಇದರಿಂದ ಇನ್ನು ಮುಂದೆ ನಮ್ಮ ಸಂಘಕ್ಕೆ ಯಾವ ಜನಪ್ರತಿನಿಧಿಯೂ ಅನುದಾನ ನೀಡಲು ಅನುಮಾನ ಪಡುವಂತಾಗುತ್ತದೆ.
ಸಿ.ಮಹಲಿಂಗಪ್ಪನವರನ್ನು ಓಡಿಸಿ ಗೊಲ್ಲರ ಸಂಘವನ್ನು ಉಳಿಸಿ ಎಂದು ಕರಪತ್ರಗಳನ್ನು ಮುದ್ರಿಸಿ ಹಂಚಿಕೆ ಮಾಡಿರುವುದು ನನ್ನ ಮಾನಹಾನಿಯಾಗಿದೆ. ಸಂಘದಲ್ಲಿ ಕೋಟಿಗಟ್ಟಲೆ ಹಣ ದುರುಪಯೋಗವಾಗಿದೆ ಎಂದು ಸಮಾಜದ ಬಂಧುಗಳಲ್ಲಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿದ್ದಾರೆ. ನಾನು ತಪ್ಪು ಮಾಡಿದ್ದರೆ ತನಿಖೆ ಮಾಡಿಸಲಿ. ಅವರ ವಿರುದ್ದ ನಾನೂ ಕೂಡ ಇಡಿಯಲ್ಲಿ ಪ್ರಶ್ನಿಸುತ್ತೇನೆಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷನಾದಾಗಿನಿಂದಲೂ ಇದುವರೆವಿಗೂ ಸಂಘದಲ್ಲಿ ನಡೆದ ಎಲ್ಲಾ ಹಣಕಾಸಿನ ವಹಿವಾಟುಗಳು ಆದಾಯ ಮತ್ತು ಖರ್ಚುಗಳನ್ನು ಪಾರದರ್ಶಕವಾಗಿ ಆಡಿಟ್ ಮಾಡಿಸಿ ದಾಖಲೆಗಳನ್ನು ಇಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಆ.21 ರಂದು ಅಣಬೆ ಬೇಸಾಯ ತರಬೇತಿ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯಾದವ ಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದಪ್ಪ, ಉಪಾಧ್ಯಕ್ಷ ಕಿರಣ್‍ಕುಮಾರ್, ವೆಂಕಟೇಶ್ ಯಾದವ್, ಡಿ.ಜಿ.ಗೋವಿಂದಪ್ಪ, ರಂಗಸ್ವಾಮಿ, ಪ್ರಕಾಶ್ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

ಭದ್ರಾವತಿ ತಾಲೂಕು ಅರಬಿಳಚಿ ಗ್ರಾಮದ ಶರಣ ಶ್ರೀ ಎಸ್ ನಂಜುಂಡಸ್ವಾಮಿ ವಿಶ್ರಾಂತ ಇಂಜಿನಿಯರ್ ಇವರ ತಾಯಿಯವರು ದಿನಾಂಕ 13.08.2025 ರಂದು ರಾತ್ರಿ 8.30 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ ಅಮೃತರ ಅಂತ್ಯಕ್ರಿಯೆಯನ್ನು ಅರಬಿಳಿತಿಯಲ್ಲಿ ಈ ದಿನ ಮಧ್ಯಾಹ್ನ 2 ಗಂಟೆಗೆ ನೆರವೇರಿಸಲಾಗುವುದೆಂದು ಬಂಧು ಬಳಗದ ಸಮಾಜದ ಎಲ್ಲಾ ಬಾಂಧವರಿಗೆ ಮಾಹಿತಿಗಾಗಿ ಈ ಮೂಲಕ ಸಲ್ಲಿಸಿದೆ..