CHITRADURGA NEWS | 20 JUNE 2026
ಚಿತ್ರದುರ್ಗ: ಹಿರಿಯ ಪತ್ರಕರ್ತರು, ರೈತಪರ, ಜನಪರ ಕಾಳಜಿಯ ಜೊತೆಗೆ ಹೋರಾಟದ ಮನೋಭಾವ ಹೊಂದಿದ್ದ ಕಥೆ, ಕವನ, ನಾಟಕ ರಚನೆ, ವಿಮರ್ಶೆ ಸೇರಿದಂತೆ ಬಹಮುಖ ವ್ಯಕ್ತಿತ್ವದ ಜಿ.ಎಸ್.ಉಜ್ಜಿನಪ್ಪ ಅವರು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಇದನ್ನೂ ಓದಿ: ಜಿ.ಎಸ್.ಉಜ್ಜಿನಪ್ಪಗೆ ನುಡಿನಮನ | ಅಂತಿಮ ದರ್ಶನ ಪಡೆದ ಗಣ್ಯರು
ಪೀಠದ ಜಯದೇವ ಮುರುಘರಾಜೇಂದ್ರ ಶ್ರೀಗಳಿಂದ ಹಿಡಿದು ಇಲ್ಲಿಯವರೆಗಿನ ಜಗದ್ಗುರುಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಅವರ ನಿಧನದಿಂದ ಸಮಾಜಕ್ಕೆ, ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿಂದಿನಿಂದಲೂ ಶ್ರೀಮಠದ ಜನಪರ ಕೆಲಸಗಳಿಗೆ ಬೆಂಬಲ ಸಲಹೆ ನೀಡುತ್ತ ಶ್ರೀಮಠವು ಹೊರತರುತ್ತಿದ್ದ ವಿಶೇಷ ಸಂಚಿಕೆಗಳು, ಪತ್ರಿಕೆಗಳು, ಗ್ರಂಥಗಳಿರಬಹುದು ಯಾವುದೇ ಇರಲಿ ಅಂತಹಗಳು ಸುಂದರವಾಗಿ ಹೊರಬರಲು ಕಾರಣಕರ್ತರಾಗಿದ್ದರು.
ಶ್ರೀಮಠದ ಸಭೆ ಸಮಾರಂಭಗಳಿಗೆ ಆಮಂತ್ರಣ ಇಲ್ಲವೆ ದೂರವಾಣಿ ಕರೆ ಹೋದರೂ ಎಲ್ಲರಿಗಿಂತ ಮುಂಚಿತವಾಗಿ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗಿ ಶೋಭೆ ತರುತ್ತಿದ್ದರು. ಇವರೊಬ್ಬ ಉತ್ತಮ ಕಂಠದ ಹವ್ಯಾಸಿ ಹಾಡುಗಾರರಾಗಿದ್ದರು.
ಇದನ್ನೂ ಓದಿ: ಯೋಗ ನಡಿಗೆ ಜಾಥಾಕ್ಕೆ ADC ಕುಮಾರಸ್ವಾಮಿ ಚಾಲನೆ
ಕವನ, ರೈತಪರ ಗೀತೆ, ವಚನ, ಭಾವಗೀತೆಗಳನ್ನು ಹಾಡಿ ಮುದಗೊಳಿಸುತ್ತಿದ್ದರು. ಶ್ರೀಮಠದ ಎಷ್ಟೋ ಸಭೆಗಳಲ್ಲಿ ಪ್ರಾರ್ಥನಾ ಗೀತೆ ಹಾಡಿದ್ದಿದೆ. ಇವರು ಕೊನೆಯವರೆಗೂ ಪತ್ರಿಕಾ ರಂಗದೊಂದಿಗೆ ಇದ್ದು ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದ ಇವರ ಸಮಾಜಮುಖಿ ಬರಹಗಳು ಜನಮೆಚ್ಚುಗೆ ಪಡೆದಿವೆ.
ಇಂತಹವರ ಅಗಲಿಕೆಯಿಂದ ಆಗಿರುವ ನೋವನ್ನು ಅವರ ಕುಟುಂಬ ವರ್ಗದವರು, ಅಭಿಮಾನಿಗಳು, ಬಂಧುಗಳು, ಸ್ನೇಹಿತರಿಗೆ ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಶರಣರು ಹಾಗೂ ಮುರುಘೇಶರು ನೀಡಲಿ ಎಂದು ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಡಾ.ಪಿ.ಎಸ್.ಶಂಕರ್, ಎಸ್.ಎನ್.ಚಂದ್ರಶೇಖರ್ ಅವರುಗಳು ಸಂತಾಪ ಸೂಚಿಸಿದ್ದಾರೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

