Connect with us

    ಯಾವ ತಾಲೂಕಿನಲ್ಲಿ ಎಷ್ಟು ಮತ ಸಿಕ್ಕಿವೆ | ಬಿಜೆಪಿ ಕೈ ಹಿಡಿದ ವಿಧಾನಸಭಾ ಕ್ಷೇತ್ರಗಳೆಷ್ಟು..?

    ಮುಖ್ಯ ಸುದ್ದಿ

    ಯಾವ ತಾಲೂಕಿನಲ್ಲಿ ಎಷ್ಟು ಮತ ಸಿಕ್ಕಿವೆ | ಬಿಜೆಪಿ ಕೈ ಹಿಡಿದ ವಿಧಾನಸಭಾ ಕ್ಷೇತ್ರಗಳೆಷ್ಟು..?

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 04 JUNE 2024

    ಚಿತ್ರದುರ್ಗ: ರೋಚಕ ಹಣಾಹಣಿಗೆ ಕಾರಣವಾಗಿದ್ದ ಚಿತ್ರದುರ್ಗ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

    ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 48121 ಮತಗಳ ಅಂತರದಿಂದ ಗೆಲ್ಲುವ ಮೂಲಕ ಚಿತ್ರದುರ್ಗ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಲ್ಲೇ ಉಳಿಸಿಕೊಂಡಿದ್ದಾರೆ.

    ಇದನ್ನೂ ಓದಿ: BREAKING NEWS ಚಿತ್ರದುರ್ಗದಲ್ಲಿ ಬಿಜೆಪಿಗೆ ರೋಚಕ ಗೆಲುವು | ಗೋವಿಂದ ಕಾರಜೋಳ ಕೈ ಹಿಡಿದ ದುರ್ಗದ ಮತದಾರ

    ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ, ಶಿರಾ ಹಾಗೂ ಪಾವಗಡ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್ ಪಡೆದುಕೊಂಡಿದೆ.

    ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಲೀಡ್ ಪಡೆದುಕೊಳ್ಳುವ ಮೂಲಕ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರಾಭವಗೊಂಡಿದ್ದಾರೆ.

    ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 104262, ಬಿಜೆಪಿ 78137 ಮತ ಪಡೆದುಕೊಂಡಿದ್ದು, ಇಲ್ಲಿ ಕಾಂಗ್ರೆಸ್ 26125 ಮತಗಳ ಲೀಡ್ ಪಡೆದುಕೊಂಡಿದೆ.

    ಇದನ್ನೂ ಓದಿ: ಕೋಟೆನಾಡಿನಲ್ಲಿ ಅರಳಿದ ಕಮಲ | ಗೆಲುವಿನ ಜಯಭೇರಿ ಬಾರಿಸಿದ ಗೋವಿಂದ ಕಾರಜೋಳ

    ಚಳ್ಳಕೆರೆಯಲ್ಲಿ ಕಾಂಗ್ರೆಸ್ 80499 ಮತ ಪಡೆದರೆ, ಬಿಜೆಪಿ 76974 ಮತ ಗಳಿಸಿದ್ದು, ಕಾಂಗ್ರೆಸ್ 3525 ಮತಗಳ ಅಂತರ ಪಡೆದುಕೊಂಡಿದೆ.

    ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 83547 ಮತ ಪಡೆದರೆ, ಬಿಜೆಪಿ 101430 ಮತ ಪಡೆದುಕೊಳ್ಳುವ ಮೂಲಕ 17883 ಮತಗಳ ಲೀಡ್ ಪಡೆದುಕೊಂಡಿದೆ.

    ಹೊಳಲ್ಕೆರೆಯಲ್ಲಿ ಕಾಂಗ್ರೆಸ್ 78210 ಮತ, ಬಿಜೆಪಿ 95991 ಮತ ಪಡೆದಿದ್ದು, ಬಿಜೆಪಿ 17781 ಮತಗಳ ಲೀಡ್ ಪಡೆದಿದೆ.

    ಇದನ್ನೂ ಓದಿ: ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುತ್ತೇನೆ | ಗೋವಿಂದ ಕಾರಜೋಳ

    ಹೊಸದುರ್ಗದಲ್ಲಿ ಕಾಂಗ್ರೆಸ್ 66565, ಬಿಜೆಪಿ 76252 ಮತ ಪಡೆದಿದ್ದು, ಬಿಜೆಪಿ 9687 ಮತಗಳ ಲೀಡ್ ಪಡೆದುಕೊಂಡಿದೆ.

    ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 82597 ಮತ ಪಡೆದರೆ, ಬಿಜೆಪಿ 88794 ಪಡೆದುಕೊಂಡಿದೆ. ಇಲ್ಲಿಯೂ ಬಿಜೆಪಿ 6197 ಮತಗಳ ಲೀಡ್ ಪಡೆದಿದೆ.

    ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 77353 ಮತ, ಬಿಜೆಪಿ 89847 ಮತ ಪಡೆದಿದ್ದು, ಇಲ್ಲಿಯೂ ಬಿಜೆಪಿ 12494 ಮತಗಳ ಅಂತರ ಪಡೆದುಕೊಂಡಿದೆ

    ಇದನ್ನೂ ಓದಿ: ಗೋವಿಂದ ಕಾರಜೋಳ ಕೊರಳಿಗೆ ವಿಜಯಮಾಲೆ | ಪೈಪೋಟಿಯಿಲ್ಲದೆ ಗೆದ್ದು ಬೀಗಿದ ಬಿಜೆಪಿ

    ಉಳಿದಂತೆ ಪಾವಗಡ ಕ್ಷೇತ್ರದಲ್ಲಿ ಕಾಂಗ್ರೆಸ್ 61119 ಮತ ಪಡೆದರೆ, ಬಿಜೆಪಿ 75792 ಮತ ಪಡೆದಿದ್ದು, ಬಿಜೆಪಿ 14673 ಮತಗಳ ಲೀಡ್ ಪಡೆದಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top