ಮುಖ್ಯ ಸುದ್ದಿ
ಗೋವಿಂದ ಕಾರಜೋಳ ಕೊರಳಿಗೆ ವಿಜಯಮಾಲೆ | ಪೈಪೋಟಿಯಿಲ್ಲದೆ ಗೆದ್ದು ಬೀಗಿದ ಬಿಜೆಪಿ

CHITRADURGA NEWS | 04 JUNE 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಎರಡಂಕಿಯ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಪುನಃ ಮುನ್ನಡೆಯ ಹಾದಿ ತುಳಿಯಲಿಲ್ಲ. ಎರಡನೇ ಸುತ್ತಿನಿಂದ ಎಲ್ಲಿಯೂ ಕಮಲವನ್ನು ಮತದಾರ ಕೈ ಬಿಡಲಿಲ್ಲ. ಕೊನೆ 20,21 ಹಾಗೂ 22 ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮತಗಳ ಅಂತರ ಹೆಚ್ಚಿಸಿಕೊಂಡಿತು.
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 6,81,217ಮತಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 6,34,152 ಮತ ಪಡೆದಿದ್ದಾರೆ. 47,065 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 20 ನೇ ಸುತ್ತಿನಲ್ಲಿ 44,572, 21 ನೇ ಸುತ್ತಿನಲ್ಲಿ 47,240 ಹಾಗೂ 22 ನೇ ಸುತ್ತಿನಲ್ಲಿ 47,065 ಅಂತರ ಕಾಯ್ದುಕೊಂಡರು.

ಮೊದಲ ಸುತ್ತಿನಲ್ಲಿ ಕೇವಲ 75 ಮತಗಳ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಬಳಿಕ ಎರಡರಿಂದ 22ನೇಸುತ್ತಿನವರೆಗೂ ನಿರಂತರ ಹಿನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತ್ರ ಸುತ್ತಿನಿಂದ ಸುತ್ತಿಗೆ ಅಂತರವನ್ನು ಹೆಚ್ಚಿಸಿಕೊಳ್ಳುತ್ತ ಸಾಗಿದ್ದರು.
ಕ್ಲಿಕ್ ಮಾಡಿ ಓದಿ: ಕೋಟೆನಾಡಿನಲ್ಲಿ ಅರಳಿದ ಕಮಲ | ಗೆಲುವಿನ ಜಯಭೇರಿ ಬಾರಿಸಿದ ಗೋವಿಂದ ಕಾರಜೋಳ
ಬಿಜೆಪಿಯ ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಸೇರಿ 20 ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ನಡೆದಿತ್ತು. ವಿಜಯದ ಮಾಲೆ ಬಹುತೇಕ ಬಿಜೆಪಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಕೊರಳನ್ನು ಅಲಂಕರಿಸಿದೆ.
