ಹೊಳಲ್ಕೆರೆ
ದಗ್ಗೆಯಲ್ಲಿ ಮನೆ ಮನೆಗೆ ಅಯೋಧ್ಯೆಯ ಮಂತ್ರಾಕ್ಷತೆ

CHITRADURGA NEWS | 13 JANUARY 2024
ಹೊಳಲ್ಕೆರೆ: ಅಯೋಧ್ಯೆಯಲ್ಲಿ ಜನವರಿ 22 ರಂದು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳದಲ್ಲಿ ಶ್ರೀ ಬಾಲ ರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ಆ ದಿನ ಎಲ್ಲ ಮನೆಗಳಲ್ಲಿ ಅಯೋಧ್ಯೆ ಕಡೆಗೆ ಉತ್ತರ ದಿಕ್ಕಿಗೆ 5 ದೀಪಗಳನ್ನು ಬೆಳಗಿಸುವಂತೆ ಹೊಳಲ್ಕೆರೆ ತಾಲೂಕು ಬ್ರಹ್ಮಪುರ(ದಗ್ಗೆ) ಗ್ರಾಮದಲ್ಲಿ ಮನವಿ ಮಾಡಲಾಯಿತು.
ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪೂಜಿಸಿ, ಮನೆ ಮನೆಗಳಿಗೆ ಕರಪತ್ರ, ಮಂತ್ರಾಕ್ಷತೆ ವಿತರಣೆಗೆ ಚಾಲನೆ ನೀಡಿದ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಶ್ರೀರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೀಪಾವಳಿಯಂತೆ ಆಚರಣೆ ಮಾಡಲು ಮನವಿ ಮಾಡಿದರು.
ಇದನ್ನೂ ಓದಿ: ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ
ಹಿಂದೂಗಳ ಆರಾಧ್ಯ ದೈವ ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಅಯೋಧ್ಯೆಯಲ್ಲಿ ಕರ ಸೇವೆ ಸಲ್ಲಿಸಿದವರನ್ನು ಈ ಶುಭ ಸಂದರ್ಭದಲ್ಲಿ ಕಡ್ಢಾಯವಾಗಿ ಎಲ್ಲರೂ ಸ್ಮರಿಸಲೇಬೇಕು.
ಶ್ರೀರಾಮ ಪ್ರಾಣ ಪ್ರತಿμÁ್ಠಪನೆಯಲ್ಲಿ ಭಾಗವಹಿಸಲು ಆಗದಿದ್ದರೂ ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಸೌಭಾಗ್ಯ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಹಾಗಾಗಿ ಪ್ರಾಣ ಪ್ರತಿμÁ್ಠಪನೆಯಂದು ಎಲ್ಲರೂ ಶ್ರೀರಾಮನನ್ನು ಜಪಿಸುವ ಮೂಲಕ ಭಕ್ತಿ ಸಮರ್ಪಿಸಬೇಕೆಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಗ್ರಾಮಸ್ಥರಲ್ಲಿ ವಿನಂತಿಸಿದರು.
ಇದನ್ನೂ ಓದಿ: ಶ್ರೀರಾಮನ ಭವ್ಯ ಮೆರವಣಿಗೆ | ನಾಯಕನಹಟ್ಟಿಯಲ್ಲಿ ಮುಸ್ಟೂರು ಶ್ರೀಗಳಿಂದ ಚಾಲನೆ
ಜ.22 ರಂದು ಪ್ರತಿ ಮಂಡಲಗಳ ಆಯಾ ದೇವಸ್ಥಾನಗಳಲ್ಲಿ ಸ್ವಚ್ಚತೆ ಕೈಗೊಳ್ಳುವ ಮೂಲಕ ಪ್ರಧಾನಿ ಮೋದಿರವರ ಕನಸಿಗೆ ಕೈಜೋಡಿಸುವಂತೆ ಮನವಿ ಮಾಡಿದ ದಗ್ಗೆ ಶಿವಪ್ರಕಾಶ್ ಇದೊಂದು ಅಭೂತಪೂರ್ವ ಸಂದರ್ಭ ಆಗಿರುವುದರಿಂದ ಎಲ್ಲರೂ ಪ್ರಾಣ ಪ್ರತಿμÁ್ಠಪನೆಯಂದು ದೀಪಗಳನ್ನು ಬೆಳಗಿ ಗೌರವಿಸಬೇಕೆಂದರು.
ಪ್ರಧಾನಿ ನರೇಂದ್ರಮೋದಿ ಅವರಂತಹ ಭಕ್ತನನ್ನು ಸ್ವತಃ ರಾಮನೇ ಅಯೋಧ್ಯೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಭೂಮಿಗೆ ಕಳಿಸಿದ್ದಾನೆ. ಪ್ರತಿಯೊಬ್ಬ ಭಾರತೀಯ ಪ್ರತಿನಿಧಿಯಾಗಿ ಶ್ರೀರಾಮನ ಪ್ರಾಣ ಪ್ರತಿμÁ್ಠಪನೆ ನೆರವೇರಿಸಲಿದ್ದಾರೆ ಎಂದು ದಗ್ಗೆ ಶಿವಪ್ರಕಾಶ್ ಹೇಳಿದರು.
ಇದನ್ನೂ ಓದಿ: ವೇದಗಳಷ್ಟೇ ಪ್ರಾಮುಖ್ಯತೆ ಶ್ರೀರಾಮಾಯಣಕ್ಕಿದೆ
ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಎಚ್.ಕುಬೇಂದ್ರಪ್ಪ, ಎಂ.ಎಸ್.ಲೋಕೇಶ್ವರಪ್ಪ, ಮಿಲಿಟರಿ ನಾಗರಾಜಪ್ಪ, ಯರಗುಂಟಪ್ಪ, ಸಿ.ತಿಪ್ಪೇಸ್ವಾಮಿ, ಚೇರ್ಮನ್ ರುದ್ರಪ್ಪ, ದಗ್ಗೆ ದೇವೇಂದ್ರಪ್ಪ, ಸಿದ್ದಲಿಂಗಪ್ಪ, ಭೈರೇಶ್, ಸುಧಮ್ಮ, ತಗಡೂರು ರಾಜಮ್ಮ, ಮೀನಾಕ್ಷಮ್ಮ, ತಳವಾರ್ ರಾಜಪ್ಪ, ತಗಡು ಗೌರಮ್ಮ, ಅಮೂಲ್ಯ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
