
CHITRADURGA NEWS | 28 JUNE 2025
ಹೊಸದುರ್ಗ: ಕುಡಿಯುವ ನೀರಿನ ವಿಚಾರಕ್ಕೆ ಕರೆ ಕೊಟ್ಟಿದ್ದ ಹೊಸದುರ್ಗ ಬಂದ್ ನಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡುತ್ತಾ, ಹೊಸದುರ್ಗ ತಾಲೂಕಿನ ಪರಿಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ ಎನ್ನುವಂತಾಗಿದೆ ಎಂದರು.
Also Read: ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ವಿವಿ ಸಾಗರದ ಸಂಪೂರ್ಣ ಹಿನ್ನೀರು ಹೊಸದುರ್ಗ ತಾಲೂಕಿನಲ್ಲಿದೆ. ಆದರೆ, ಈ ತಾಲೂಕಿಗೆ ನೀರಿಲ್ಕ. ಮುಂದಿನ ತಾಲೂಕಿಗೆ ನೀರು ಕೊಡಲು ಭೂಮಿ ತ್ಯಾಗ ಮಾಡಿದವರು ಈ ತಾಲೂಕಿನ ಜನತೆ. ಮಹಾರಾಜರು ಡ್ಯಾಂ ಕಟ್ಟುವಾಗ ಯಾವ ರೈತರು ತಡೆಯಲಿಲ್ಲ ಎಂದರು.
ವಿವಿ ಸಾಗರ ಡ್ಯಾಂ ತುಂಬಿದಾಗ ಈಗಲೂ ಆ ಭಾಗದ ರೈತರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಇಷ್ಟಾದರೂ ಒಬ್ಬ ರೈತ ಕೂಡಾ ಬೇರೆ ತಾಲೂಕಿಗೆ ನೀರು ಕೊಡಬೇಡಿ ಎಂದು ಪ್ರತಿಭಟಿಸಲಿಲ್ಲ. ಇಂತಹ ತಾಲೂಕಿಗೆ ಕುಡಿಯುವ ನೀರು ಕೊಡುವಾಗ ದಾವಣಗೆರೆಯ ಕೆಲ ನಿರುದ್ಯೋಗಿ ರಾಜಕಾರಣಿಗಳು ರೈತರ ಸೋಗಿನಲ್ಲಿ ರಾಜಕೀಯ ಬೇಳೆ ಬೇಯಿಸಲು ಪ್ರತಿಭಟಿಸುತ್ತಿದ್ದಾರೆ. ದಾವಣಗೆರೆ ಅಖಂಡ ಚಿತ್ರದುರ್ಗ ಜಿಲ್ಲೆಯ ಭಾಗ. ಆ ರೈತರ ಸೋಗಿನಲ್ಲಿ ಕೆಲಸ ಇಲ್ಲದ ರಾಜಕಾರಣಿಗಳು ಹೋರಾಟ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಆಗ್ರಹಿಸಿದರು.
ದಶಕಗಳಿಂದ ಹೊಸದುರ್ಗ ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕು ಎಂಬ ಕಾರಣಕ್ಕೆ ಸರ್ಕಾರ ಭದ್ರಾ ಜಲಾಶಯದಿಂದ ನೀರು ತರಲು ಯೋಜನೆ ರೂಪಿಸಿದೆ. ಜನ ಕೂಡಾ ಕೆಲ ದಿನಗಳಲ್ಲಿ ನೀರಿನ ಬವಣೆ ತಪ್ಪಲಿದೆ ಎಂದು ಭಾವಿಸಿದ್ದರು. ಆದರೆ, ದಾವಣಗೆರೆಯಲ್ಲಿ ಕೆಲವರು ರೈತರ ಸೋಗಿನಲ್ಲಿ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದರು.
Also Read: ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ ತಾಲೂಕಿನ ಜನರ ಪರವಾಗಿ ಬಿಜೆಪಿ ಇದೆ. ಈ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸುವುದಿಲ್ಲ ಎಂದು ಹೇಳಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
