CHITRADURGA NEWS | 10 NOVEMBER 2025
ಚಿತ್ರದುರ್ಗ: ಜೀವನದಲ್ಲಿ ನಿಂದನೆ, ಕಷ್ಟ, ಅವಮಾನ, ಬರುತ್ತಿವೆ ಅದನ್ನು ಮೀರಿ ನಡೆದಾಗ ಮಾತ್ರ ಸನ್ಮಾನಗಳು ಸಿಗಲು ಸಾಧ್ಯವಿದೆ ಎಂದು ಕಬೀರಾನಂದಾಶ್ರಮದ ಆಶ್ರಮದ ಶಿವಲಿಂಗಾನಂದ ಶ್ರೀಗಳು ಹೇಳಿದರು.

ಇದನ್ನೂ ಓದಿ: ಶಿವಮೂರ್ತಿ ಮುರುಘಾ ಶರಣರ ಪರ ಸಿ.ವಿ.ನಾಗೇಶ್‌ವಾದ ಮಂಡನೆ
ದಾವಣಗೆರೆ ವಿಶ್ವವಿದ್ಯಾನಿಲಯ, ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದವತಿಯಿಂದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ, ಹತ್ತು ಬೆಳದಿಂಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ,
ಜೀವನ ನಿಂತ ನೀರಲ್ಲ ಅದು ಹರಿಯುವ ನೀರಾಗಿದೆ. ಬಂದ ಎಲ್ಲಾ ಕಷ್ಟಗಳನ್ನು ಎದುರಿಸಿ ನಡೆದಾಗ ಮಾತ್ರ ಜಯ ಸಿಗಲು ಸಾಧ್ಯವಿದೆ. ಜೀವನ ಎನ್ನುವುದು ಸುಖ-ದುಃಖದ ಸಾಗರವಾಗಿದೆ, ತಮ್ಮ ಜೀವನವನ್ನು ಮುಗಿಸುವ ಸಮಯದಲ್ಲಿ ಉತ್ತಮವಾದ ಕೆಲಸವನ್ನು ಮಾಡಬೇಕಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಕಾಯ ಮುಖ್ಯಸ್ಥ ಡಾ.ಕೆ.ವೆಂಕಟೇಶ್ ಮಾತನಾಡಿ, ಬಿ.ಇಡಿನಲ್ಲಿ ಸರಿಯಾದ ರೀತಿಯಲ್ಲಿ ಕಲಿಯುವುದರ ಮೂಲಕ ನಿಮ್ಮ ಮುಂದಿನ ಜೀವನವನ್ನು ಸರಿಯಾದ ರೀತಿಯಲ್ಲಿ ಕಳೆಯಬಹುದಾಗಿದೆ, ಇಲ್ಲಿ ಕಲಿಕೆಯ ಜೊತೆಗೆ ಕೌಶಲ್ಯವನ್ನು ಸಹಾ ಹೊಂದುವ ಅಗತ್ಯ ಇದೆ ಎಂದರು.
ಇದನ್ನೂ ಓದಿ: ಯುವನಿಧಿ ಯೋಜನೆ | ಸ್ವಯಂ ಘೋಷಣೆ ಪ್ರತಿ ತಿಂಗಳು ಕಡ್ಡಾಯ
ಬಿಇಡಿಯನ್ನು ಓದಲು ಬರುವವರು ರೈತ ಹಾಗೂ ಮಧ್ಯಮ ವರ್ಗದವರಾಗಿದ್ದಾರೆ. ಶ್ರೀಮಂತರಾಗಿದ್ದರೆ ಅವರು ಇಂಜಿನಿಯರ್, ಡಾಕ್ಟರ್ ಓದುತ್ತಿದ್ದರು, ಇದು ಎಲ್ಲಾ ವೃತಿಗಿಂತ ಪವಿತ್ರವಾದ ವೃತ್ತಿಯಾಗಿದೆ. ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವ ಹೊಣೆಯನ್ನು ಹೊತ್ತವರು ಶಿಕ್ಷಕರಾಗಿದ್ದಾರೆ. ರೈತ ಮತ್ತು ಸೈನಿಕ ಇವರ ಸಾಮಥ್ರ್ಯ ಯಾರಿಗೂ ಸಹಾ ಬರುವುದಿಲ್ಲ. ಇವರು ದೇಶ, ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಾರೆ ಎಂದರು.
ಸರ್ ಎಂ. ವಿಶ್ವೇಶ್ವರಯ್ಯ ವಿದ್ಯಾ ಮಂದಿರದ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆಯ ನಿವೃತ್ತ ವಿಷಯ ಪರಿವೀಕ್ಷಕ ಹೆಚ್.ಎಂ.ಬಸವರಾಜ ಮಾತನಾಡಿ, ನಿಮ್ಮ ಪೋಷಕರು ಕಷ್ಟ ಪಟ್ಟು ನಿಮ್ಮನ್ನು ಕಾಲೇಜಿಗೆ ಕಳುಹಿಸಿದ್ದಾರೆ. ಅವರು ನಿಮ್ಮ ಮೇಲೆ ವಿವಿಧ ರೀತಿಯ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಅವುಗಳನ್ನು ಹುಸಿ ಮಾಡಬೇಡಿ ಸಕಾರಗೊಳಿಸಿ, ಮುಂದಿನ ದಿನದಲ್ಲಿ ಶಿಕ್ಷಕರಾಗುವ ನಿಮ್ಮ ಭೋಧನೆ ಬೇರೆಯವರಿಗೆ ಮನ ಮುಟ್ಟುವಂತೆ ಇರಬೇಕಿದೆ.
ಮಕ್ಕಳನ್ನು ನಿಮ್ಮ ಭೋಧನೆಯ ಮೂಲಕ ಆಕರ್ಷಿಸುವಂತ ವಾತಾವರಣ ನಿರ್ಮಾಣ ಮಾಡಬೇಕು. ಮುಂದಿನ ದಿನದಲ್ಲಿ ನಿಮ್ಮ ಕಾಲ್ಮೇಲೆ ನಿಲ್ಲುವಂತ ವಾತಾವರಣ ಸೃಷ್ಟಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ಇದನ್ನೂ ಓದಿ: ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಶೇ.50 ರಿಯಾಯಿತಿ ದರಗಳಲ್ಲಿ ಲಭ್ಯ
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ, ಪ್ರಸ್ತಾವಿಕವಾಗಿ ಮಾತನಾಡಿದರು. ಬಾಪೂಜಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಹನುಮಂತರೆಡ್ಡಿ, ಪತ್ರಕರ್ತರಾದ ಸುರೇಶ್ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
