ಮುಖ್ಯ ಸುದ್ದಿ
Hindu Maha Ganapati: ದಶಾವತಾರ ಮಂಟಪದಲ್ಲಿ ಹಿಂದೂ ಮಹಾ ಗಣಪತಿ ವಿರಾಜಮಾನ | ಮೊಳಗಿದ ಹರ್ಷೋದ್ಘಾರ

CHITRADURGA NEWS |07 SEPTEMBER 2024
ಚಿತ್ರದುರ್ಗ: ಗೌರಿಪುತ್ರ, ಏಕದಂತ ವಿಘ್ನರಾಜನಿಗೆ ಕೋಟೆನಾಡಿನ ಭಕ್ತರು ಶನಿವಾರ ಭವ್ಯ ಸ್ವಾಗತ ಕೋರಿದ್ದಾರೆ. ಬಹು ನಿರೀಕ್ಷಿತ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗೊಂಡಿದ್ದು, ಜೈನಧಾಮದ ಆವರಣದಲ್ಲಿ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿದೆ.
ವಿಶ್ವ ಹಿಂದೂ ಪರಿಷತ್, ಭಜರಂಗದಳ ನೇತೃತ್ವದಲ್ಲಿ ಈ ಬಾರಿಯೂ ವೈಭವದಿಂದ ಮಹೋತ್ಸವ ಆಚರಿಸಲಾಗುತ್ತಿದೆ. 14 ಅಡಿ ಎತ್ತರದ ಗರುಡ ವಾಹನರೂಡ ಗಣಪತಿಗೆ ಶನಿವಾರ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿ ಕೇಸರಿ ಬಣ್ಣದ ಪರದೆ ಎಳೆಯುತ್ತಿದ್ದಂತೆ ಘೋಷಣೆಗಳು ಮೊಳಗಿದವು. ದಶಾವತಾರ ಬಿಂಬಿಸುವ ಪೆಂಡಾಲ್ ಆತ್ಯಾಕರ್ಷಕವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.
ಕ್ಲಿಕ್ ಮಾಡಿ ಓದಿ: ವಾಣಿವಿಲಾಸ ಜಲಾಶಯದತ್ತ ಎತ್ತಿನಹೊಳೆ


ಹಿಂದೂ ಮಹಾ ಗಣಪತಿ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಪೂಜಾ ಕಾರ್ಯದ ಸಾನಿಧ್ಯವಹಿಸಿದ್ದರು.
ಸಂಸದ ಗೋವಿಂದ ಎಂ.ಕಾರಜೋಳ, ಶಾಸಕರಾದ ಕೆ.ಸಿ.ವೀರೇಂದ್ರ, ಎಂ.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಭಾಗವಹಿಸಿದ್ದರು.
