
CHITRADURGA NEWS | 24 SEPTEMBER 2024
ಚಿತ್ರದುರ್ಗ: ಈ ವರ್ಷದ ಹಿಂದೂ ಮಹಾಗಣಪತಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಗುರುವಾರ (ಸೆ.26) ರಂದು ಬೈಕ್ ರ‍್ಯಾಲಿ, ಸೆ. 28 (ಶನಿವಾರ) ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಗುರುವಾರ ಕನಕ ವೃತ್ತದಿಂದ ಆರಂಭವಾಗುವ ಬೈಕ್ ರ‍್ಯಾಲಿಗೆ ವಿಎಚ್‌ಪಿ ರಾಜ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಹಾಗೂ ವಿವಿಧ ಮಠಾಧೀಶರು ಚಾಲನೆ ನೀಡಲಿದ್ದಾರೆ. ಹೊಳಲ್ಕೆರೆ ರಸ್ತೆಯಿಂದ ಗಾಂಧಿ ವೃತ್ತದ ಮಾರ್ಗವಾಗಿ ಹಳೇ ಮಾಧ್ಯಮಿಕ ಶಾಲಾ ಆವರಣ ಪ್ರವೇಶಿಸಲಿದೆ. ಸಾವಿರ ಬೈಕ್‌ಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿವೆ.
ಸೆ.28 ಕ್ಕೆ ಶೋಭಾಯಾತ್ರೆ ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದ್ದು, ನಗರದ ವೃತ್ತಗಳನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗುತ್ತಿದೆ. ಇಡೀ ನಗರದಲ್ಲಿ ಸುಮಾರು 400 ಕಾರ್ಯಕರ್ತರು ಕೇಸರಿ ಧ್ವಜ, ಬಂಟಿಂಗ್ಸ್ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಶೋಭಾಯಾತ್ರೆ ಉದ್ಘಾಟನೆ ಆಗಲಿದೆ. ಬಜರಂಗದಳ ರಾಷ್ಟ್ರೀಯ ಸಂಚಾಲಕ ನೀರಜ್ ದೊನೇರಿಯಾ ಆಗಮಿಸಲಿದ್ದಾರೆ. ಮಠಾಧೀಶರು ಸಾನಿಧ್ಯವಹಿಸಲಿದ್ದಾರೆ.
ರಾತ್ರಿ ಹತ್ತು ಗಂಟೆಗೆ ವಿಸರ್ಜನೆ ಮುಗಿಯುವ ನಿರೀಕ್ಷೆ ಇದೆ. ಚಂಡೆ, ಟ್ರ್ಯಾಶ್, ಉರುಮೆ ಸೇರಿದಂತೆ ಸುಮಾರು ಹತ್ತು ಕಲಾತಂಡಗಳು ಭಾಗವಹಿಸಲಿವೆ. ಶೊಭಾಯಾತ್ರೆಯಲ್ಲಿ ಸುಮಾರು 5-6 ಲಕ್ಷಜನ ಭಾಗವಹಿಸುವ ನಿರೀಕ್ಷೆ ಇದೆ.
ವಿಎಚ್‌ಪಿ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಹಿಂದೂಮಹಾಗಣಪತಿ ಸಮಿತಿ ಅಧ್ಯಕ್ಷ ನಯನ್, ಉತ್ಸವ ಸಮಿತಿ ಮಾರ್ಗದರ್ಶಕ ಟಿ.ಬದರೀನಾಥ, ಉಪಾಧ್ಯಕ್ಷ ಚೇತನ್ ಬಾಬು, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್, ಸದಸ್ಯರಾದ ಕೆ.ಎನ್.ವಿಶ್ವನಾಥಯ್ಯ, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಉಮೇಶ ಕಾರಜೋಳ ತಂಡ ಮಾಹಿತಿ ನೀಡಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
