By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ರೈತ ಭವನದಲ್ಲಿ ರಾಜ್ಯ ಸಮಿತಿ ಸಭೆ
    ವಾಣಿಜ್ಯ ಒಪ್ಪಂದದಿಂದ ಕೃಷಿಗೆ ಮಾರಕ | ಕೇಂದ್ರ ಸರ್ಕಾರ ಹಿಂದೆ ಸರಿಯದಿದ್ದರೆ ಜಿಲ್ಲಾ ಕೇಂದ್ರಗಳಲ್ಲಿ ಚಳುವಳಿ | ರಾಜ್ಯಾಧ್ಯಕ್ಷ ಬಸವರಾಜಪ್ಪ
    7 hours ago
    ಎಂ.ಸೌಮ್ಯ, ಸಿ.ಆರ್.ಚಿನ್ನು, ಎಂ.ಸತೀಶ್
    ಚಿತ್ರಹಳ್ಳಿ MDRS ಪಿಯು ಕಾಲೇಜಿಗೆ ಶೇ.97 ಫಲಿತಾಂಶ
    7 hours ago
    JDS ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
    JDS ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ 
    20 hours ago
    ಡಯಟ್‌ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
    ಡಯಟ್‌ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
    22 hours ago
    ವೈದ್ಯಕೀಯ ಕಾಲೇಜುಯಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ
    ದಲಿತರು, ಶೋಷಿತರಿಗೆ ಪ್ರಜಾಸತ್ತಾತ್ಮಕ ಹಕ್ಕು ನೀಡಿದವರು ಅಂಬೇಡ್ಕರ್ | ಡಾ.ಯುವರಾಜ್
    22 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    1 day ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    1 week ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    2 weeks ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    2 weeks ago
    BAMS LIKHITHA
    ಬಿಎಎಂಎಸ್‌ ವಿದ್ಯಾರ್ಥಿನಿ ಆತ್ಮಹತ್ಯೆ | ಹೊಳಲ್ಕೆರೆಯಲ್ಲಿ ಘಟನೆ
    2 weeks ago
  • ತಾಲೂಕು
    ತಾಲೂಕುShow More
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    3 days ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    5 days ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    7 days ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    2 weeks ago
    HOSADURGA BJP LEADERS PRESS MEET
    ಹೊಸದುರ್ಗ ಬಿಜೆಪಿಯಲ್ಲಿ ಗೊಂದಲ | ತಾಲೂಕು ಅಧ್ಯಕ್ಷರ ವಿರುದ್ಧ ಅಸಮಧಾನ ಬಹಿರಂಗ | ಮಾಜಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್‌ ಅತೃಪ್ತಿ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
    2 days ago
    arecanut price list
    ಅಡಿಕೆ ಧಾರಣೆ | 10 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌ ?
    5 days ago
    arecanut price list
    ಅಡಿಕೆ ಧಾರಣೆ | 9 ಏಪ್ರಿಲ್‌ | ಸಾಗರ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಏರಿಕೆ
    6 days ago
    arecanut price list
    ಅಡಿಕೆ ಧಾರಣೆ | 7 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌
    1 week ago
    ARECANUT RATE
    ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆ
    1 week ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 15 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಆದಾಯಕ್ಕಿಂತ ಖರ್ಚು ಹೆಚ್ಚು
    10 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 14 | ಹಠಾತ್ ಆರ್ಥಿಕ ಲಾಭ, ಆರೋಗ್ಯದಲ್ಲಿ ಎಚ್ಚರ
    1 day ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 13 | ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹಗಳು, ಹೊಸ ವಾಹನ ಖರೀದಿ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 12 | ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ದೂರದ ಪ್ರಯಾಣ ಬೇಡ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 11 | ವ್ಯರ್ಥ ಖರ್ಚುಗಳು, ವ್ಯವಹಾರ ಮತ್ತು ಉದ್ಯೋಗದಲ್ಲಿ ಗೊಂದಲದ ವಾತಾವರಣ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 15 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
    1 hour ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 13 | ಮೆಕ್ಕೆಜೋಳ ರೇಟ್…
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 11 | ಹತ್ತಿ ರೇಟ್…
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 10 | ರಾಗಿ, ಮೆಕ್ಕೆಜೋಳ, ಶೇಂಗಾ ರೇಟ್…
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 09 | ಹತ್ತಿ ರೇಟ್ ಎಷ್ಟಿದೆ?
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    3 days ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 weeks ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    3 weeks ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    4 weeks ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    1 month ago
  • ಹಿರಿಯೂರು
    ಹಿರಿಯೂರುShow More
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    2 days ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    2 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    2 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    2 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    2 months ago
  • ಹೊಸದುರ್ಗ
    ಹೊಸದುರ್ಗShow More
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    3 days ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    5 days ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    7 days ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    2 weeks ago
    HOSADURGA BJP LEADERS PRESS MEET
    ಹೊಸದುರ್ಗ ಬಿಜೆಪಿಯಲ್ಲಿ ಗೊಂದಲ | ತಾಲೂಕು ಅಧ್ಯಕ್ಷರ ವಿರುದ್ಧ ಅಸಮಧಾನ ಬಹಿರಂಗ | ಮಾಜಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್‌ ಅತೃಪ್ತಿ
    3 weeks ago
  • Life Style
    Life StyleShow More
    Dark spots on the neck
    ಕುತ್ತಿಗೆಯ ಮೇಲಿನ ಕಪ್ಪು ಕಲೆಗಳು ಈ ರೋಗಗಳ ಸಂಕೇತವಂತೆ
    9 hours ago
    Image of fish
    ಮನೆಯ ಗೋಡೆಯ ಮೇಲೆ ಈ ಮೀನುಗಳ ಚಿತ್ರವನ್ನು ಹಾಕುವುದರಿಂದ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆಯಂತೆ
    10 hours ago
    Liver disease
    ನಿಮ್ಮ ಕೈಗಳಲ್ಲಿ ಕಂಡುಬರುವ ಈ ಲಕ್ಷಣಗಳು ಲಿವರ್‍ನ ಕಾಯಿಲೆಯ ಸಂಕೇತವಂತೆ
    1 day ago
    The nerves in the body are weak
    ದೇಹದಲ್ಲಿ ನರಗಳು ದುರ್ಬಲಗೊಳ್ಳುತ್ತಿದ್ದರೆ ಈ ಲಕ್ಷಣಗಳು ಕಂಡುಬರುತ್ತವೆಯಂತೆ
    1 day ago
    green and red capsicum
    ಹಸಿರು ಮತ್ತು ಕೆಂಪು ಕ್ಯಾಪ್ಸಿಕಂನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ?
    2 days ago
Reading: Kannada Novel: 25. ಉತ್ತರೆ ಮಳೆ ಸುರಿಯಿತು
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಸಂಡೆ ಸ್ಪಷಲ್

Kannada Novel: 25. ಉತ್ತರೆ ಮಳೆ ಸುರಿಯಿತು

News Desk Chitradurga News
Last updated: 23 March 2025 11:08
News Desk Chitradurga News
1 year ago
Share
Habbida Malemadhyadolage
ಹಬ್ಬಿದಾ ಮಲೆಮಧ್ಯದೊಳಗೆ
SHARE

CHITRADURGA NEWS | 23 MARCH 2025

ಬಸವನ ಹಬ್ಬ ಆಚರಿಸಿ ಹದಿನೈದು ದಿನವಾಗಿತ್ತು. ಐಯ್ಯಗಳ ಹೊಸಾ ಮನೆಗಳ ಕಡೆ ಗೌಡರಾಗಲಿ, ಗೊಂಚಿಕಾರರಾಗಲಿ ಅಥವಾ ಯಜಮಾನ ಕಾಮಜ್ಜರಾಗಲಿ ಸುಳಿದಿರಲಿಲ್ಲ. ಅವರಿಗೆ ಐಗಳ ಹೊಸಾ ಮನೆಗಳಿಗೆ ಬಾಗಿಲ ಕದಗಳನ್ನು ಮಾಡಿಸಲು ಹಲಗೆಗಳು ಸಿಕ್ಕಿರಲಿಲ್ಲ. ಆದ್ದರಿಂದ ಮರಕೊಯ್ಯುವವರನ್ನು ವಿಚಾರಿಸಿ ನೋಡೋಣ ಎಂದು ಗೌಡರು, ಯಜಮಾನಪ್ಪ ಮತ್ತೆ ಗೊಂಚಿಗಾರರು ನಾಕುಣಿಸೆ ಮರಗಳ ಬಳಿಗೆ ಬಂದರು.

ಹಿಂದಿನ‌ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

ಅಲ್ಲಿ ಊರಿನ ಅರ್ಧಂಬರ್ಧ ಯುವಕರು ಸೇರಿ ಮರ ಕೊಯ್ಯುವುದನ್ನು ನೋಡುತ್ತಾ ಅದೂ ಇದೂ ಮಾತಾಡುತ್ತಿದ್ದರು ಅವರು ಬಂದುದನ್ನು ಗಮನಿಸಿದ ಪಾಂಡುರಂಗ ಮರ ಕೊಯ್ಯುವುದನ್ನು ನಿಲ್ಲಿಸಿ ‘ನಮಸ್ಕಾರ’ ಅನ್ನುತ್ತಾ ಕೈ ಎತ್ತಿದ.

ಆಗ ಗೌಡರು “ಪಾಂಡಣ್ಣಾ, ಐಗಳ ಹೊಸಾ ಮನೆ ಬಾಗಿಲಿಗೆ ಕದಕ್ಕೆ ಹಲಗೆ ಸಿಗ್ತಾ ಇಲ್ಲ. ನಮ್ಮೂರಾಗೆ ಯಾರಾಗೂ ಒಣಗಿದ ಹಲಸಿನ ಮರ ಇಲ್ಲ. ಹೆಂಗ್ ಮಾಡಾದು” ಎಂದು ವಿಷಯ ಪ್ರಸ್ತಾಪಿಸಿದರು. ಅಲ್ಲಿ ಸೇರಿದ್ದ ಊರಿನ ಯುವಕರು ಮಕ ಮಕಾ ನೋಡಿ ಕೊಂಡರು. ಯಾರಲ್ಲಿಯೂ ಒಣಗಿದ ಹಲಸಿನ ಮರದ ದಿಮ್ಮಿ ಇರಲಿಲ್ಲ.

ಆಗ ಪಾಂಡು “ಹಲಸಿನ ಮರದ ಹಲಗೆ ಇದೆ ಬಾಳ ಸಂದಾಕಿರತಿತ್ತು, ಬಾಗಿಲ ಕದಕ್ಕೆ ಹೊನ್ನೆ, ಮರದ ಚಟ್ಟ ಹಲಸಿನ ಮರದ ಹಲಗೆ ಬಾಳ ಚಲೋ ಇರುತ್ತೆ. ಆಯ್ತು ನಿಮ್ಮಲ್ಲಿ ಸೆಂದಾಕೆ ಒಣಗಿದ ಮಾವಿನ ಮರದ ದಿಮ್ಮಿ ಇದ್ರೆ ನಡಿಯುತ್ತೆ” ಅಂದು ಎಲ್ಲರ ಮುಖ ನೋಡಿದ. ಮತ್ತೆಲ್ಲರೂ ಮೌನವಾದರು.

ಹಿಂದಿನ‌ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

ಆಗ ಗೊಂಚಿಗಾರು ಮೌನ ಮುರಿದು “ಬಸವನ ಹಳ್ಳಾಗೇನನ ಸಿಕ್ಕೀತೆ? ಎಲ್ಲೋ ಯಾರನಾ ಕಡಿದಿರೋ ಮರದ ದಿಮ್ಮಿ ನೀರಿನ ಸೆಳವಿಗೆ ತೇಲ್ಕಂಡ್

ಬಂದು ಯಾವುದನಾ ಪೆಳೆಗೆ ಸಿಕ್ಕಂಡಿದ್ರೂ ಇರಬೌದು” ಅಂದು ತಮ್ಮ ಅಭಿಪ್ರಾಯವನ್ನು ತೇಲಿ ಬಿಟ್ಟು ಎಲ್ಲರ ಮುಖ ನೋಡಿದರು. “ನಮ್ಮ ಅನುಬೋಗದಾಗೆ ಯಾತ್ಯಾತ್ರಾವೊ ಕಾಡು ಜಾತಿ ಮರ ಮುಟ್ಟು ನೀರಿನಾಗೆ ತೇಲ್ಕಂಡು ಬಂದಿದ್ದನ್ನ ಕಂಡಿದೀವಿ. ಮಾವಿನ ಮರದ ದಿಮ್ಮಿನಾಗ್ಲಿ, ರೆಂಬೆ ಕೊಂಬೆ ತೇಲ್ಕಂಡ್ ಬಂದಿದ್ದನ್ನ ನಾವು ಕಾಣಿವಿ” ಎಂದು ಅಲ್ಲಿದ್ದವರೊಬ್ಬರು ಪ್ರತಿಕ್ರಿಯಿಸಿದರು. “ಈವಜ್ಜ ಹಳ್ಳ ಸೋವ ಕೆಲ್ಸಾ ಹಚ್ಚಾನೆ.” ಅಂದುಕೊಂಡು ಕೆಲವು ಹುಡುಗರು ನಕ್ಕರು.

“ಎಲ್ಲೂ ಒಣಗಿದ ಮರ ಸಿಗಲ್ಲ ಅಂದರೆ ಒಂದು ವಯಸ್ಸಾಗಿರೋ ಹಲಸಿನ ಮರನಾಗ್ಲಿ, ಮಾವಿನ ಮರನಾಗ್ಲಿ ಕಡೀಬೇಕು. ಅದು ಒಣಗಾಕೆ ಎಲ್ಲೋರಾ ಬೇಕಾಗುತ್ತೆ. ನೋಡ್ರಿ ಹೆಂಗ್ ಮಾಡ್ತಿರಾ” ಪಾಂಡುರಂಗ ತನ್ನ ಖಚಿತ ಅಭಿಪ್ರಾಯ ತಿಳಿಸಿದ. ಗೌಡ್ರು, ಗೊಂಚಿಕಾರ್ರೂ ಮತ್ತು ಯಜಮಾನ ಕಾಮಜ್ಜಾರಿಗೆ ಏನೂ ಹೊಳೆಯದಾಯ್ತು.

ಹಿಂದಿನ‌ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು

ಪಾಂಡು ತನ್ನ ಮರಕೊಯ್ಯುವ ಕೆಲಸ ಆರಂಭಿಸಿದ. ಯುವಕರು ಹುಣಿಸೆ ಮರದ ನೆರಳಲ್ಲಿ ಅಲ್ಲಲ್ಲಿ ಹೋಗಿ ಕುಳಿತರು. ಮೂರು ಜನ ಹಿರೇ ತಲೆಗಳು ಕೂಡಾ ಅತ್ತತ್ತ ಸರಿದು ಕುಳಿತು “ಸದ್ಯಕ್ಕೆ ನೆರಿಕೆಕದ ಮಾಡಿಕೊಟ್ಟಿದೀವಲ್ಲ ಅದರಾಗೆ ಕೆಲವುದಿನ ನೂಕಲಿ, ನೋಡನಾ ಎಲ್ಲದನ ಮಳೆ ಬಂದು ಜಮಾನುಗಳು ಬಿತ್ತಿಸ್ಸಂಡ್ರೆ, ಸುಗ್ಗಿ ಪಗ್ಗಿ ಮಾಡಿಕೆಂಡ್ ಹೊಸಾ ಕದಗಳ ಬಗ್ಗೆ ಯೋದ್ರೆ ಮಾಡಾನ” ಎಂಬ ತೀರಾನಕ್ಕೆ ಮೂರುಜನ ಒಪ್ಪಿದರು.

ಅಷ್ಟೊತ್ತಿಗೆ ಮಳಿಯಪ್ಪಯ್ಯ ಮತ್ತು ಮರುಳಯ್ಯ ಅಲ್ಲಿಗೆ ಆಗಮಿಸಿದರು. ಬಂದವರು ಊರಿನ ಹಿರಿಯರಿಗೆ ನಮಸ್ಕರಿಸಿದರು. “ಅಣ್ಣೋರೆ ಗೃಹ ಪ್ರವೇಶ ಮಾಡಿಕೊಟಿ ಅಮೇಲೆ ನೀವು ನೀವು ಕಟ್ಟಿಸಿದ ಹೊಸಾ ಮನೆಗಳ ಕಡೀಗೆ ಬಲ್ಲೇ ಇಲ್ಲ” ಮಳಿಯಪ್ಪಯ್ಯ ಮುಗಳಗುತ್ತಾ ಆಕ್ಷೇಪಿಸಿದರು. “ಹೊಸ ಮನಿಯಾಗ ಸುಕವಾಗಿ ನಿದ್ದೆ ಮಾಡಿದಿರಾ, ತಣ್ಣಗಿರುತ್ತೆ ಅದೇ ಮಾಳಿಗೆ ಮನೆ ವಿಶೇಷ” ಯಜಮಾನ ಕಾಮಣ್ಣ ಮಾತಾಡಿದರು.

ಹಿಂದಿನ‌ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

ಗೌಡ್ರು ಗೊಂಚಿಕಾರರ ತಲೆಯಲ್ಲಿ ಹೊಸಾ ಮನೆ ಬಾಗಿಲುಗಳಿಗೆ ಒಳ್ಳೇ ಕದಗಳನ್ನು ಜೋಡಿಸುವ ವಿಚಾರ ತುಂಬಿಕೊಂಡಿತ್ತು. “ಸ್ವಲ್ಪದಿನ ನೆರಿಕೆ ಕದಗಳೇ ಮುಚ್ಚಿ ತಗೀರಿ, ನೋಡೋನಾ ಒಳ್ಳೇ ದಿನ ಬಂದ್ರೆ ಒಳ್ಳೇ ಮುಟ್ಟಿನಾಗೆ ಕದಗಳ ಮಾಡಿಸನಾ” ಗೌಡ್ರು ನಿಧಾನವಾಗಿ ಮಾತಾಡಿ ಧೈಯ್ಯ ಹೇಳಿದರು. “ಇವೇ ಇಲ್ಲಿ ಬಿಡ್ರಿ, ಸದ್ಯಕ್ಕೆ ಸಂದಾಕಿದಾವೆ. ಕದ ಮುಚ್ಚಿ ಒಂದು ಅಡ್ಡ ಕೋಲ ಸರೀತೀವಿ ಏನೂ ತೊಂದ್ರೆ ಇಲ್ಲ” ಮರುಳಯ್ಯ ಸಮಾಧಾನದ ಮಾತಾಡಿದರು.

“ಈ ಮೂರ್‌ಜನ ಯಜಮಾನುಗಳು ಐನೋರ ಮನೆಗಳಿಗೆ ಕದಾ ಜೋಡಿಸಬೇಕು ಅಂತ ಯೋಚೆ ಮಾಡ್ತಿದಾರೆ. ಅಲ್ಲಿ ವಾಸಾ ಮಾಡೋರಿಗೆ ಅದರ ಚಿಂತೇನೇ ಇದ್ದಂಗಿಲ್ಲ” ಊರಿನ ಯುವಕರು ಮಾತಾಡಿಕೊಂಡ್ರು, “ಬಾಗಿಲ ಕದಕ್ಕೆ ಹಲಸಿನ ಮರದ್ದೇ ಹಲಗೆ ಬೇಕಾ” ಒಬ್ಬ ಯುವಕ ಮಾತಾಡಿದ್ದಕ್ಕೆ ಇನ್ನೊಬ್ಬ “ಹಲಸಿನ ಮರದ ಹಲಗೆ ಬಾಳ ನುಣ್ಣಗೆ ಚಂದಾಕಿದ್ದಾವೆ. ನಮ್ಮನೆ ಕದಗಳೆಲ್ಲಾ ಹಲಸಿನ ಮರವೇ ಇರಬೇಕು” ಅಂದು ತನ್ನ ಅಭಿಪ್ರಾಯ ತಿಳಿಸಿದ.

ಹಿಂದಿನ‌ ಸಂಚಿಕೆ: 5. ಕೆನ್ನಳ್ಳಿಯ ದುರಂತ

ಹೊತ್ತು ವಾಲುತ್ತಿತ್ತು. ಪಡುವಲ ದಿಕ್ಕು ನೋಡಿ “ನೀರು ತರಬೇಕು ಬಪ್ಪಾ” ಎಂದು ಮೂರು ಜನಯುವಕರು ಎದ್ದು ತಮ್ಮ ಮನೆ ಕಡೆ ಹೊರಟರು. ಜೊತೆಗೆ ಕೂಡಿಕೊಂಡ ಅಯ್ಯನೋರಿಗೆ “ಯಜಮಾನು ನಿಮ್ಮನೆಗೇ ಬಾಗಿಲ ಕದ ಮಾಡಿಸಬೇಕು. ಒಣಗಿದ ಹಲಸಿನ ಮರದ ಹಲಗೆ ಸಿಗ್ತಾ ಇಲ್ಲ. ಹೆಂಗ್ ಮಾಡೋದು” ಅಂತ ಯೋಚೆ ಮಾಡಿದಾರೆ” ಎಂದೊಬ್ಬ ಯುವಕ ಜಂಗಮಯ್ಯರ ಜತೆ ಹೇಳಿಕೊಂಡ.

ಅದನ್ನು ಕೇಳಿಸಿಕೊಂಡ ಮಳಿಯಪ್ಪಯ್ಯ ಮತ್ತು ಮರುಳಯ್ಯರು ಊರಿನ ಯಜಮಾನರ ಬಗ್ಗೆ ಅಭಿಮಾನ, ಗೌರವ ತಾಳಿದರು. “ಈಗ ನೆರಿಕೆ ಕದ ಮಾಡಿಕೊಟ್ಟಿದಾರಲ್ಲ. ಅದರಾಗೆ ಏನೂ ತೊಂದ್ರೆ ಇಲ್ಲ. ಒಳ್ಳೇ ಮುಟ್ಟಿನ ಕದ ಇದ್ರೆ ಮನೆಗೆ ಭೂಷಣ. ಆವ್ರ ಹೇಳಿದಾರೆ ಮುಂದೆ ಕಾಲ ಕೂಡಿ ಬಂದಾಗ ಒಳ್ಳೇ ಹಲಗೆ ಹಾಕಿ ಕದ మాడనా ఆమె, ఒట్టి మళి బందు బిల్ బోళిడిమకరి ಹಲಗೆ ಕೊಂಡುಕೊಂಡು ಬಾಗಿಲ ಕದ ಮಾಡಿಸ್‌ಬೌದು” ಮಳಿಯಪ್ಪಯ್ಯ ಮನಸ್ಸಿನಲ್ಲೇ ಅಂದುಕೊಂಡರು.

ಹಿಂದಿನ‌ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು

ಮರಕೊಯ್ಯುವವರಿಗೆ ಒಣಗಿದ ಅಥವಾ ಅರ್ಧ ಒಣಗಿದ ಮರಮುಟ್ಟು ಸಿಗಲಿಲ್ಲ. ಪಾಂಡು ಮತ್ತು ಅವನ ಸಂಗಡಿಗರು ಗೌನಳ್ಳಿಗೆ ಬಂದು ನಾಲ್ಕು ತಿಂಗಳ ಮೇಲಾಗಿತ್ತು. ಮಳೆಗಾಲದಲ್ಲೂ ಮಳೆ ಸುರಿಯದೇ ಬಿಸಿಲ ತಾಪಮಾನ ಹೆಚ್ಚಾಗಿತ್ತು. ಅದಕ್ಕಿಂತ ಮುಖ್ಯವಾಗಿ ಗೌನಳ್ಳಿ ರೈತರ ಹುಲ್ಲಿನ ಬಣವೆಗಳು ಅರ್ಧಧ್ರ ಖಾಲಿಯಾಗಿದ್ದವು. ಹಗಲಲ್ಲಿ ಎಮ್ಮೆದನಗಳ ಜತೆಗೆ ಬೇಸಾಯದ ಎತ್ತುಗಳನ್ನು ಅಡವಿಗೆ ಹೊಡೆದೊಯ್ದು ಒಣಗಿದ ಕರಡ ಮತ್ತಿತರ ಹುಲ್ಲು ಸೊಪ್ಪು ಮೇಯಿಸಬೇಕಾಗಿತ್ತು. ಹೀಗಾಗಿ ಮರಕೊಯ್ಯುವವರ ಬಳಿಗೆ ಊರಜನ ಬಂದು ಕೂತು ಮಾತಾಡುವುದು ಕಡಿಮೆಯಾಗಿತ್ತು.

ಪಾಂಡು, ಗೌಡ್ರು ಮತ್ತು ಗೊಂಚಿಕಾರರ ಬಳಿ ತಮ್ಮ ತಂಡ ಊರಿಗೆ ಮರಳುವ ತೀರಾನವನ್ನು ತಿಳಿಸಿದ. ಅವರು “ಯಾರಿಂದಲಾದರೂ ಮರ ಕೊಯ್ದ ಕೂಲಿ ಬಾಕಿ ಇದೆಯಾ” ಎಂದು ವಿಚಾರಿಸಿ “ನೀವು ನಮ್ಮೂರಿನೋರ ಜತೆ ಬಾಳ ಸಂದಾಕಿ ಹೊಂದಿಕೊಂಡಿದ್ರಿ. ಬೇಕಾದಾಗ ನಿಮ್ಮನ್ನ ಕರೀತೀವಿ” ಎಂದು ತಿಳಿಸಿ ಅವರಿಗೆ ಸಿಹಿ ಊಟ ನೀಡಿ ತಲಾ ಒಂದೊಂದು ಒಲ್ಲಿಯನ್ನು ಹೊದೆಸಿ ಓಣಿ ಬಾಯಿಗೆ ತಲುಪಿಸಿ ಬಂದರು. ಮಾರನೇ ದಿನದಿಂದ ನಾಕುಣಿಸೆ ಮರದ ಬಳಿ ಊರ ಜನ ಸುಳಿಯದಾದರು.

ಹಿಂದಿನ‌ ಸಂಚಿಕೆ: 7. ಊರು ತೊರೆದು ಬಂದವರು

ಊರಿನ ಯಜಮಾನುಗಳಿಗೆ “ಉತ್ರೆ ಮಳೆ ರೈತನಿಗೆ ಭಾಷೆ ಕೊಟ್ಟಿ-ರೋ ಮಳೆ ಅಂಟ್ಕಂಡಿದೀವಿ. ಅದು ಬಂದ್ರೆ ಸಣ್ಣ ಫಸಲಿಗೆ ಬೀಜಾನಾದ್ರೂ ಬಿತ್ತಬೌದು. ಮಳಿಯಪ್ಪಯ್ಯ “ಉತ್ರೆ ಮಳೆ ಬಂದ್ರೆ ಬರುತ್ತೆ ಅಂದಿದ್ರು. ಯಾರಾನಾ ಹುಡುಗರ ಕರೀರಪ್ಪಾ. ಹೋಗಿ ಐನೋರ ಪಂಚಾಂಗ ತಗಂಡು ಬರಾಕೆ ಹೇಳಿ” ಯಜಮಾನಪ್ಪ ಮನೆಯೊಳಗೆ ತಲೆ ಹಾಕಿ ಹೇಳಿದ್ರು, ಆಗ ಹುಡುಗರು ಯಾರೂ ಇರಲಿಲ್ಲ. ಮನೆಯ ಹೆಂಗಸರು ಹೊರಗೆ ಬಂದು ಹತ್ತಿರದಲ್ಲಿ ಗೋಲಿ ಆಟ ಆಡುತ್ತಿದ್ದ ಹುಡುಗರಲ್ಲಿ ದೊಡ್ಡವನಿಗೆ ವಿಷಯ ತಿಳಿಸಿ ಐಗಳ ಮನೆ ಕಡೆ ಕಳಿಸಿದ್ದರು.

ಸ್ವಲ್ಪ ಹೊತ್ತಿನಲ್ಲಿ ಮಳಿಯಪ್ಪಯ್ಯ ಆಗಮಿಸಿದರು. “ಬರ್ರಿ ಗೌಡ್ರ .ಅಟ್‌ಮಾಳಿಗೆ ಕಡೆ ಹೋಗಾನಾ” ಎಂದು ಅವರ ಜತೆ ಯಜಮಾನಪ್ಪ ನಡೆದರು. ಇವರೆಣಿಕೆಯಂತೆ ಅಲ್ಲಿ ಗೌಡ್ರು ಮತ್ತು ಗೊಂಚಿಕಾರರು ಗೋಡೆಗೆ ಒರಗಿಕೊಂಡು ಯೋಚನಾಗ್ರಸ್ತರಾಗಿದ್ದರು. “ಬರ್ರಿ ಬರ್ರಿ ನಾವೂನೂ ನಿಮಿಗೆ ಹೇಳಿ ಕಳಿಸಬೇಕು ಅಂದ್ಯಂಡಿದ್ವಿ, ಹೇಳಿಕರೆಸಿಗಂಡಂಗೇ ಬಂದಿದೀರ,” ಗೌಡರು ಇವರನ್ನು ಸ್ವಾಗತಿಸಿದರು.

“ಕೈಯಾಗೆ ಪಂಚಾಂಗ ಹಿಡಕಂಡೇ ಬಂದಿದಾರೆ ಸ್ವಾಮೇರು. ಹೇಳಪ್ಪಾ ಉತ್ರೆ ಮಳೆ ಬರುತ್ತೋ ಹೆಂಗೋ” ಗೊಂಚಿಗಾರರು ಪ್ರಸ್ತಾಪಿಸಿದರು. ಮಳಿಯಪ್ಪಯ್ಯ ಇವರು ತನ್ನನ್ನೇ ವಿಚಾರಿಸುತ್ತಿದ್ದಾರೆ. ಅಂ-ದುಕೊಂಡು ಪಂಚಾಂಗವನ್ನು ತೆರೆದು ಅದರ ಪುಟಗಳ ಮೇಲೆ ಕಣ್ಣಾಡಿಸಿ ಮನಸ್ಸಿನಲ್ಲೇ ಲೆಕ್ಕಹಾಕಿ. “ಇದು ಸರಿಪಾದದಿಂದ ಖಂಡಿತಾ ಬರುತ್ತೆ ಕಣಪ್ಪಾ” ಅಂದರು.

ಹಿಂದಿನ‌ ಸಂಚಿಕೆ: 8. ಮೋಜಣಿಕೆ ಮಾಡಿದರು

“ಸರಿಪಾದ ಅಂದ್ರೆ ಇನ್ನ ನಾಕು ದಿನ. ಹಗಲೊತ್ತಿನಾಗ ಹೊರಾಕೆ ಹೊಳಾಕಾಗಲ್ಲ ಅಂಥಾ ಬಿಸ್ಸು. ದನಾಕರು ಎಲ್ಲಾ ಮರದ ನೆಳ್ಳು ಬಿಟ್ಟು ಅಲುಗಾಡಲ್ಲ. ಭಗವಂತ ಕಣ್ಣುಬಿಟ್ರೆ ಏನು ಬೇಕಾದ್ರೂ ಆಗುತ್ತೆ” ಯಜಮಾನ ಕಾಮಜ್ಜ ಮಾತಾಡಿದರು. ಗೌಡ್ರು. ಗೊಂಚಿಕಾರು “ಸ್ವಾಮೇರೇಳಿದಂಗೆ ಸರಿಪಾದದಿಂದ ಮಳೆ ಬಂದ್ರೆ ಬದುಕು ಕಟ್ಟಿಗಳೀವಿ. ದನಕರಾ, ಎತ್ತು ಎಮ್ಮೆ, ಕುರಿ ಮ್ಯಾಕೆ, ಹಕ್ಕಿಪಕ್ಕಿ ಎಲ್ಲಾ ಬದುಕತ್ತಾವೆ”. ಗೌಡರು ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಅಡವೀಲಿ ಹುಲ್ಲು ಸೊಪ್ಪು ಮೇಯುತ್ತಿದ್ದ ದನಕರು, ಕುರಿ, ಆಡು ಮುಂತಾದುವು ಹೆದರಿ ಬೆಕ್ಕಸ ಬೆರಗಾಗಿ ದೂರದೂರ ಓಡುವಂಥಾ ಗುಡುಗು ಗುಡುಗಿತ್ತು. ಹಿಂದೆಯೇ ಹಗಲಿನ ಬೆಳಕನ್ನೂ ಮರೆಮಾಚುವಂಥಾ ಮಿಂಚು ಮಿಂಚಿ ಕಣ್ಣುಗಳಿಗೆ ಕತ್ತಲೆ ಬರಿಸಿತ್ತು. ಮನೆಯೊಳಗಿದ್ದವರೆಲ್ಲಾ ಹೊರಗೋಡಿ ಬಂದು ಅದೇನು ಗುಡುಗೋ ಸಿಡಿಲೋ ಎಂದು ಅಚ್ಚರಿಪಟ್ಟಿದ್ದರು.

ಹಿಂದಿನ‌ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ

ತಿಮ್ಮಪ್ಪನ ಗುಡ್ಡದ ಕಡೆಯಿಂದ ಮರೋ ಎಂಬ ಬಿರುಗಾಳಿ ಬೀಸಿ ಜನ జానువారుగళన్ను దిశ్ను తట్టనీకు ఒందయం గుడుగు మించి ಅರ್ಭಟದಿಂದ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಮಳೆ ಸುರಿಯತೊಡಗಿತ್ತು. ವಯಸ್ಸಾಗಿದ್ದ ಹಿರಿಯ ಜೀವಗಳು ಎದೆ ಮುಟ್ಟಿ ನೋಡಿಕೊಳ್ಳುವಂಥಾ ಗುಡುಗು ಮಿಂಚುಗಳ ಜತೆಗೆ ಉತ್ತರೆ ಮಳೆ ಸು ರಿಯತೊಡಗಿತು.

ಗುಡಿಸಲವಾಸಿಗಳು ಇಂಥ ರಭಸದ ಮಳೆಯನ್ನು ನೋಡಿರಲಿಲ್ಲ. ಅನೇಕ ಗುಡಿಸಲ ಬಾದೆ ಹುಲ್ಲು ಗಾಳಿಗೆ ಹಾರಿ ಹೋಗಿತ್ತು. ಜೀವಭಯದಿಂದ ಗುಡಿಸಲವಾಸಿಗಳು ನಡುಗಿದ್ದರು. ಅಕ್ಕಸಾಲಿ ಗುಂಡಾಚಾರಿಯ ಕೆಲಸದ ಮಾಡು ಗಾಳಿಗೆ ಎದ್ದೆದ್ದು ಕೂಡುತ್ತಿತ್ತು. ಅವನ ಗುಡಿಸಲು ಅಕ್ಕಪಕ್ಕ ಇದ್ದ ಮಾಳಿಗೆ ಮನೆಗಳ ರಕ್ಷಣೆಯಲ್ಲಿ ಸುರಕ್ಷಿತವಾಗಿತ್ತು. ಜಂಗಮಯ್ಯಗಳ ಹೊಸಮನೆಗಳು ಮಾಳಿಗೆ ಮೇಲಿನ ನೀರು ಸೋರಿಕೆಯಿಂದ ಮನೆಯೊಳಗೆ ರಾಡಿಯಾಗಿತ್ತು.

ಗೌನಳ್ಳಿಯ ಮೂರು ಹಿರಿ ಜೀವಗಳಾಗಿದ್ದ ಯಜಮಾನ ಕಾಮಜ್ಜ, ಚಿಕ್ಕಪ್ಪಗೌಡ ಮತ್ತು ಸಿದ್ದಯ್ಯ ಗೊಂಚಿಕಾರರು ‘ಮಳಿಯಪ್ಪಯ್ಯ ಉತ್ತರೆ ಮಳೆ ಸರಿ ಪಾದದಿಂದ ಬರುತ್ತೆ’ ಎಂದು ಹೇಳಿದ್ದು ಅವರ ಪಂಚಾಂಗದ ಲೆಕ್ಕಾಚಾರವನ್ನು ಮೆಚ್ಚಿಕೊಂಡಿದ್ದರು. ಮೂರುಜನ ತಮ್ಮ ತಮ್ಮ ಮನೆಗಳ ಹಜಾರಗಳಲ್ಲಿ ಕುಳಿತುಕೊಂಡಿದ್ದವರು ಗುಡುಗು, ಮಳೆಗಾಳಿಗೆ ಹೆದರಿ ಮನೆಯೊಳಗೆ ನಡೆದು ಪಡಸಾಲೆಗಳಲ್ಲಿ ಆಶ್ರಯಪಡೆದಿದ್ದರು.

ಹಿಂದಿನ‌ ಸಂಚಿಕೆ: 10. ಹೊಸ ಬಂಡಿಗಳ ಆಗಮನ

ರಭಸವಾಗಿ ಬೀಸುತ್ತಿದ್ದ ಗಾಳಿಯ ಹೊಡೆತಕ್ಕೆ ಅನೇಕ ಮರಮಂಡಿಗಳು ನೆಲಕ್ಕುರುಳಿದ್ದವು. ಎರಡು ಮೂರು ಜಾವ ಸುರಿದ ಮಳೆ ಕೊಂಚ ಬಿಡುವುಕೊಟ್ಟು ನೆನೆಮಳೆಯಾಗಿ ಬೀಳುತ್ತಿತ್ತು. ಹೊತ್ತು ಮುಳುಗೋ ಸಮಯಕ್ಕೆ ಮಳೆ ಬೀಳುವುದು ನಿಂತ ಬಳಿಕ ಪಡವಲ ಗುಡ್ಡ ಮತ್ತು ಮೂಡಲ ಗುಡ್ಡದ ಸರಗಳ ನೀರು ಮತ್ತೋ ಎಂದು ಸದ್ದು ಮಾಡುತ್ತಾ ಬಸವನಹಳ್ಳವನ್ನು ಸೇರುತ್ತಿತ್ತು.

ಮಳೆ ಬೀಳುವುದು ನಿಂತ ಬಳಿಕ ಊರಿನ ಜನ ಗಂಡಸರು, ಹೆಂಗಸರು ಕುಡಿಯವ ನೀರು ತರಲು ಊರ ಬಾವಿಯ ಕಡೆಗೆ ಹೊರಟಿದ್ದರು. ಹೊತ್ತು ಮುಳುಗಿ ಕತ್ತಲಾಗುವುದಕ್ಕೆ ಮಂಚೆ ಮನೆಗೆ ನೀರಡಕಬೇಕಾಗಿತ್ತು. ಹೀಗಾಗಿ ಹೆಣ್ಣು ಗಂಡು ಭೇದವಿಲ್ಲದೆ ಬಾವಿಯ ಮೆಟ್ಟಿಲಿಂದು ಹತ್ತಿ, ನೀರಿನ ಬಿಂದಿಗೆ ಗಡಿಗೆಗಳನ್ನು ಹೊತ್ತು ತಮ್ಮ ತಮ್ಮ ಮನೆಗಳ ಕಡೆ ನಡೆದಿದ್ದರು.

ಹಿಂದಿನ‌ ಸಂಚಿಕೆ: 11. ಬಂಡಿ ತಂದ ಬದಲಾವಣೆ

ರಾತ್ರಿ ಉಂಬೋ ಹೊತ್ತಿಗೆ ಹಳ್ಳ ತುಂಬಿ ಹರಿಯುತ್ತಿದೆ ಎಂದೂ ಊರ ಬಾವಿಯ ಸುತ್ತಲ ಮಣ್ಣಿನ ತಡೆಯನ್ನು ಮುಟ್ಟಿ ಹರಿಯುತ್ತಿದೆ ಎಂಬ ಸುದ್ದಿ ಪ್ರಚಾರವಾಗಿ ಊರ ಜನ ಗಂಡಸರು ಯುವಕರು ಓಡೋಡಿ ಊರಬಾವಿಯ ದಿನ್ನೆಯ ಮೇಲೆ ಜಮಾಯಿಸಿ ಫಳಕ್ಕನೆ ಮಿಂಚಿ ಕಾಣದಾಗುತ್ತಿದ್ದ ಬೆಳಕಿನಲ್ಲಿ ಹಳ್ಳದ ನೀರಿನ ಸೆಳೆತವನ್ನು ನೋಡಿದ್ದರು. ಅಲ್ಲಿಗೆ ಬಂದಿದ್ದವರಲ್ಲಿ ಅನೇಕ ಯೋಚನೆಗಳು ಹರಿದಾಡಿದ್ದವು. ಈ ಮಳೆಗೆ ಜಮಾನುಗಳು ಸಂಪೂರ್ಣ ನೆಂದಿವೆ.

ಏನು ಬಿತ್ತಬೇಕು ಎಂಬುದೇ ಎಲ್ಲರ ಮನಸ್ಸಿನಲ್ಲಿ ಹರಿದಾಡಿದ ವಿಷಯವಾಗಿತ್ತು. “ಎತ್ತು ಎಮ್ಮೆ ದನಗಳಿಗೆ ಮೇವಿನ ಅಗತ್ಯವಿರುವುದರಿಂದ ಬಿಳಿಜೋಳ ಮತ್ತು ಕೇಸರಿ ಜೋಳದ ಬೀಜವನ್ನ ಬಿತ್ತೋಣ” ಎಂಬ ವಿದೇಶ ಬಹಳ ಜನರಲ್ಲಿ ಮೂಡಿತ್ತು. ಕುಸುಮೆ ಮತ್ತು ಸಜ್ಜೆಯ ಬೀಜಗಳನ್ನು ಬಿತ್ತಬೇದಲ್ಲ ಎಂಬ ಆಲೋಚನೆಯೂ ಮೂಡಿತ್ತು.

ಜಂಗಮಯ್ಯರ ಹೊಸ ಮನೆಗಳಲ್ಲಿ ಸೋರಿದ್ದ ನೀರನ್ನ ಹೊರಗಡೆ ಚೆಲ್ಲಿ ಬೆಳಿಗ್ಗೆ ಮಾಳಿಗೆ ಹತ್ತಿ ಎಲ್ಲಿ ಮಂಗೆ ಅಥವಾ ದೊಕರು ಬಿದ್ದಿದ್ರೆ ನೋಡಬೇಕು.

ಹಿಂದಿನ‌ ಸಂಚಿಕೆ: 12. ಜಂಗಮಯ್ಯರ ಆಗಮನ

ಅಲ್ಲಣಿಗೆ ಏನಾದರೂ ಮೇಲಾಗಿದೆಯೋ ಬೆಳಿಗ್ಗೆ ನೋಡೋಣ ಎಂದು ಮಳೆಯಪ್ಪಯ್ಯ ಮತ್ತು ಮರುಳಯ್ಯ ಯೋಚಿಸಿದರೆ ಶಿವಲಿಂಗಯ್ಯ ತನ್ನ ಗುಡಿಸಿಲಿನಲ್ಲಿ ಪತ್ನಿಯ ಜೊತೆ ಹೆಚ್ಚಗೆ ಮಲಗಿದ್ದ. ಮಾದಿಗರ ಹಟ್ಟಿಗೆ ಊರಿನ ನೀರು ನುಗ್ಗಿ ಸ್ವಲ್ಪ ಕಾಲ ಅವರಿಗೆ ದಿಕ್ಕುಗೆಡಿಸಿತ್ತು.

ಬೆಳಕು ಹರಿದಿತ್ತು, ಒಂದು ಹೊಸಾ ಲೋಕವನ್ನೇ ಸೃಷ್ಟಿಸಿತ್ತು. ಸಂಜೆ ಸುರಿದ ಮಳೆಗೆ ಎಲ್ಲರ ಮುಖದಲ್ಲೂ ಸಂತಸ ಸಮಾಧಾನಗಳು ಕಂಡಿದ್ದವು.

ಊರಿನ ಹಿರಿತಲೆಗಳು ಊರ ಬಾವಿ ಬಳಿಗೆ ನಡೆದು ಹಳ್ಳದ ನೀರೇನಾದರೂ ಬಾವಿಯೊಳಗೆ ನುಗ್ಗಿ ಅವಾಂತರ ಮಾಡಿದೆಯೋ ಎಂದು ಆತಂಕದಿಂದ ನೋಡಿದ್ದರು, ಬಸವನಹಳ್ಳದ ನೀರು ಊರಿನ ಕರುವುಗಲ್ಲು ತಾಕಿಸಿಕೊಂಡು ನಾಕುಣಿಸೆ ಮರಗಳನ್ನು ಸವರಿಕೊಂಡು ಹೋಗಿತ್ತು. ಆದರೂ ಊರಬಾವಿಯ ಸುತ್ತಲಿನ ಮಣ್ಣನ್ನು ತಾಕಿಸಿಕೊಂಡು ನೀರು ಹರಿದಿತ್ತೇ ವಿನಹ, ಮಣ್ಣಿನ ಮೇಲಕ್ಕೆ ನೀರು ಹತ್ತಿರಲಿಲ್ಲ. ನಾಕುಣಿಸೆ ಮರದಡಿಯಲ್ಲಿ ಮರಕೊಯ್ಯಲು ಡಿದ್ದ ಗುಂಡಿ ಕುಂಬ ನಿಕ್ಕಿಂ ಕುಂಬಂಡಕು, ಗೋಡು, ಗಂಡ ಹೃದಯ ಮುಜ್ಜಿಬಡ್ ಯಾರಾಡು ಮರ್ಷಳು ಆಟ ಆಡುತ್ತ ಗುಂಡಿಯಲ್ಲಿ ಮುಳುಗಿಹೋದರು” ಎಂದು ತಮ್ಮ ಮನೆಯ ಯುವಕರಿಗೆ ತಾಕೀತು ಮಾಡಿದರು.

ಹಿಂದಿನ‌ ಸಂಚಿಕೆ: 13. ಮತ್ತೆರಡು ಬಂಡಿ ತಂದರು

ಹತ್ತಿರದಲ್ಲಿ ಇದ್ದ ಮಾದಿಗರ ಹಟ್ಟಿಯ ಜನಕ್ಕೆ ಮಕ್ಕಳನ್ನು ನಾಕುಣಿ ಮರದ ಕಡೆ ಬಿಡಬೇಡಿರೆಂದು ಎಚ್ಚರಿಕೆ ಹೇಳಿದ್ದರು.

ಗೌಡ್ರ, ಗೊಂಚಿಗಾರರ ಮತ್ತು ಯಜಮಾನ ಕಾಮಜ್ಜರ ಕಟ್ಟೆಗಳ ತುಂಬಾ ನೀರು ನಿಂತಿತ್ತು. ನೀರು ಇಂಗಿ ಹೊಲಗಳು ಬೇಸಾಯಕ್ಕೆ ಬರಲು ಇನ್ನೂ ಹದಿನೈದು ದಿನ ಬೇಕಾಗುತ್ತೆ. ಅಷ್ಟೊತ್ತಿಗೆ ಹದ ಬೆದೆ ಇರುತ್ತೋ ಇಲ್ಲವೋ ಎಂಬ ಆತಂಕವೂ ತಲೆದೋರಿತ್ತು.

ಈ ಮಧ್ಯೆ ಬೆದ್ದು ಭೂಮಿಗಳ ತೇವ ಆರಿ ಗೆಯ್ಕೆ ಮಾಡಲು ನಾಕೈದು ದಿನಬೇಕಾಗುತ್ತದೆ. ಆದ್ದರಿಂದ ಐಗಳ ಜಮಾನುಗಳಲ್ಲಿ ಬೀಜ ಬಿತ್ತಬೌದು. ಗೌಡ್ರ, ಗೊಂಚಿಕಾರರ ಮತ್ತು ಯಜಮಾನಪ್ಪರ ಏಳೆಂಟು ಗಳೇವುಗಳು ಉತ್ತು ಬಿತ್ತಿಕೊಡಬೌದು ಎಂಬಾ ಆಲೋಚನೆ ಊರಿನ ಹಿರಿತಲೆಗಳಲ್ಲಿ ಮೂಡಿತ್ತು. ಇದೇ ಸಮಯಕ್ಕೆ ಗೌಡರ ಮನೆಗೆ ಆಗಮಿಸಿದ ಮಳಿಯಪ್ಪಯ್ಯ “ಯಜಮಾನೆ ನಮ್ಮ ಜಮನ್ನಾಗೆ ಯಾತ್ತನಾ ‘ಬಿತ್ತಬೌದೆ’ ಎಂದು ವಿಚಾರಿಸದ್ದರು.

ಹಿಂದಿನ‌ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ

ಒಳ್ಳೆ ಹದ ಬೆದಿಯಾಗೆ ನಿಮ್ಮ ಹೊಲಗಳು ಬಿತ್ತಿಸಮಾವೆ. ಹೆಂಗೆ ಮಾಡ್ತೀರಾ? ಯಾರನಾದ್ರೂ ಕೋರೀಗ್ ಮಾಡ್ತಿರಾ ಅತ್ತ ಕೇಳಿದೀರಾ?” ಗೌಡರು ಐಗಳನ್ನು ವಿಚಾರಿಸಿದರು. ಯಜಮಾನಪ್ಪ ಗೊಂಚಿಗಾರರು ಮುಖಾಮುಖ ನೋಡಿ-ಕೊಂಡಿದ್ದರು. “ದಿಢೀರನೆ ಉತ್ತೆ ಮಳೆ ಸುರಿಯುತ್ತೆ ಅಮ್ಮ ಯಾರಿಗೊತ್ತಿತ್ತು. ನೀವೆ ನಮಿಗೆ ದಾರಿ ತೋರಿಸ್ಟೇಕು” ಮಳಿಯಪ್ಪಯ್ಯ ಏನೂ ಅರಿಯದವರಂತೆ ಮಾತಾಡಿದ್ದರು.

“ಯಾತ್ತು ಬಿತ್ತುತೀರಾ ನಿಮ್ಮತ್ರ ಬೀಜ ಇಲ್ಲ ಗೊಬ್ರ ಇಲ್ಲ. ನಾಕ್ ದಿನ ತಡೀರಿ. ಜಮಾನುಗಳು ತ್ಯಾವ ಆರಿ ಬ್ಯಾಸಾಯ ಮಾಡೋಕೆ ಬತ್ತಾವೆ. ಆವಾಗ ಮೊದ್ಲು ನೇಗಿಲು ಹೊಡ್ಡು ಕಳೆ ಎಲ್ಲಾ ಆರಿಸಿ ಜ್ವಾಳ ಬಿತ್ತನ” ಗೌಡ್ರು ದೃಢ ಸ್ವರದಲ್ಲಿ ಹೇಳಿದರು. ಮಳಿಯಯ್ಯರಿಗೆ ಸಂತೋಷವೂ, ಧೈರವೂ ಏಕಕಾಲದಲ್ಲಿ ಆಗಿದ್ದವು.

ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು

ಗೌಡರ, ಗೊಂಚಿಕಾರರ, ಯಜಮಾನಪ್ಪರ ಮತ್ತು ಇತರೆ ಮೂರು ಜನರ ಬ್ಯಾಸಾಯದ ಎಂಟು ಗಳೇವುಗಳು ಐಗಳ ಎರಡೂ ಜಮಾನುಗಳನ್ನು ಗೆ-ಯ್ದು, ಬಿಳಿಜೋಳ ಸಜ್ಜೆಯ ಬೀಜಗಳನ್ನು ಬಿತ್ತಿ ಹೊಲದ ಸುತ್ತಾ ಕುಸುಮೆ ಬೀಜ ಬಿತ್ತಿದರು. ಇಡೀ ಊರಿನ ಜನ ಹದ ಬೆದೆಗಳು ಮುಗಿಯುವುದಕ್ಕೆ ಮುಂಚೆ ಜಮಾನುಗಳನ್ನು ಗೆಯ್ದು, ಮುಳ್ಳು ಕಂಪೆ ಎಲ್ಲಾ ಆರಿಸಿ ಬಿಳಿಜೋಳ, ಕೇಸರಿಜೋಳ, ಸಜ್ಜೆ, ಕುಸುಮೆ ಮುಂತಾದುವುಗಳ ಬೀಜಗಳನ್ನು ಬಿತ್ತಲು ಚಡಪಡಿಸುತ್ತಿದ್ದರು.

ಯಾರಿಗೂ ಪುರಸೊತ್ತು ಇರಲಿಲ್ಲ. ಊರ ಜನ ಬೆಳಿಗೆ ಎದ್ದು ಹೊಲಗಳ ಕಡೆ ನಡೆದರೆ, ಸಂಜೆಗೆ ಹಿಂತಿರುಗುತ್ತಿದ್ದರು. ಕಮ್ಮಾರಟ್ಟಿ ತಿಮ್ಮನಿಗೆ ಬಿಡುವಿಲ್ಲದ ಕೆಲಸ. ಅವನ ಮನೆ ಮಂದಿ ಮಳೆಯ ರಭಸಕ್ಕೆ ನಡುಗಿ ಹೋಗಿದ್ದ ಗುಡಿಸಲು ಭದ್ರಪಡಿಸಿಕೊಳ್ಳಲು ಬಂದ್ರೆ ಸೊಪ್ಪು, ಈಚಲಕಟ್ಟು ದಬ್ಬೆಗಳನ್ನು ಜೋಡಿಸಿಕೊಳ್ಳಲು ಪರದಾಡುತ್ತಿದ್ದರು. ಮಾದಿಗರಹಟ್ಟಿ ಜನರೂ ಸ್ವಲ್ಪ ಸ್ವಲ್ಪ ಜಮಿನು ಮಾಡಿಕೊಂಡಿದ್ದರು. ಆದರೆ ಸರಿಯಾಗಿ ಹಸನು ಮಾಡಿಕೊಂಡಿರಲಿಲ್ಲ. ಹೀಗಾಗಿ ಅವರ ಹೊಲಗಳನ್ನು ಉತ್ತು ಬಿತ್ತಿಕೊಡಲು ಎತ್ತುಕರ ಇದ್ದವರನ್ನು ಕೇಳುವ ಉಮೇದು ಇರಲಿಲ್ಲ ಅವರಿಗೆ.

ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ

ಬೋವಿಜನರೂ ಅಲ್ಪಸ್ವಲ್ಪ ಜಮಿಾನು ಹಸನು ಮಾಡಿಕೊಂಡಿದ್ದರು. ಆದರೆ ಯಾರ ಬಳಿಯೂ ಎತ್ತುಕರ ಇರಲಿಲ್ಲ. ಆದರೂ ತಮ್ಮ ಹೊಲಗಳಲ್ಲಿ ಬೀಜ ಬಿತ್ತಿಕೊಡಲು ಇದ್ದವರನ್ನು ಕೇಳಿ ಕೆಲವರು ಯಶಸ್ವಿಯಾಗಿದ್ದರು. ಐಗಳ ಜಮಾನಿನಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಸಣ್ಣ ಸಸಿಗಳು ಕಾಣಿಸಿಕೊಂಡರೂ ಗೌಡರ ಮತ್ತು ಗೊಂಚಿಕಾರರ ಕಟ್ಟೆ ನೆಲಗಳು ಸಂಪೂರ್ಣ ಆರಿರಲಿಲ್ಲ. ಹೀಗಾಗಿ ಅವರು ಪ್ರತಿದಿನ ತಮ್ಮ ಕಟ್ಟೆ ನೆಲಗಳಲ್ಲಿ ಸುತ್ತಾಡಿದ್ದರು.

ಬಿದ್ದು ಜಮಿಾನುಗಳಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆಯುವ ಸಮಯಕ್ಕೆ ಗೌಡರ ಮತ್ತು ಗೊಂಚಿಕಾರರ ದಿನ್ನೆಯ ಹೊಲಗಳು ಆರಿ ಉಳುಮೆ ಮಾಡಲು ಸಿದ್ಧವಾಗುತ್ತಿದ್ದವು. ಗೌಡರು ಮತ್ತು ಗೊಂಚಿಕಾರರು ಹೊಲಗಳಲ್ಲಿ ಸುತ್ತಾಡಿ, ಎರಡು ದಿನ ತಡೆದು ಉಳುಮೆ ಆರಂಭಿಸಲು ತಿಳಿಸಿದ್ದರು. “ತ್ಯಾವದಾಗೆ ಗೆಯ್ಯಕೋದ್ರೆ ಎತ್ತುಗಳು ತುಳಿದು ಹೊಲ ಗಡುಸಾಗ್ತಾವೆ. ಎಳ್ಳು ದಿನ ತಡೀರಿ” ಎಂದು ಸೂಚಿಸಿದ್ದರು. ಅವರ ಅದೃಷ್ಟಕ್ಕೆ ಊರಿನ ಜನರ ಹತ್ತು ಹನ್ನೆರಡು ಗಳೇವುಗಳವರು ನೆರವಿಗೆ ಬಂದು ಕಟ್ಟೆ ಮಾರುಗಳನ್ನು ಗೆಯ್ದು, ಬೀಜ ಬಿತ್ತಲು ನೆರವಾಗಿದ್ದರು. ‘ಕುಡಿಯಾಕೆ ನೀರ ಕೊಟ್ಟ ಪುಣ್ಯಾತ್ಮರಿಗೆ ಸಹಾಯ ಆಗದಿದ್ರೆ ಇನ್ಯಾರಿಗೆ ಸಹಾಯ ಮಾಡಾನ’ ಎಂಬ ವಿವೇಕ ಅವರಲ್ಲಿ ಮೂಡಿತ್ತು.

ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು

ಅಂತೂ ಇಡಿ ಗೌನಳ್ಳಿಯ ಜನ ನೆಮ್ಮದಿಯಿಂದ ನಳನಳಿಸುತ್ತಿದ್ದ ಬಿಳಿ ಜೋಳ, ಸಜ್ಜೆಯ ಪೈರುಗಳನ್ನು ದಿನವಿಡೀ ವೀಕ್ಷಿಸುತ್ತಿದ್ದರು. ಮಳೆ ಬಿದ್ದ ತಿಂಗಳಿಗೆ ಹುಲ್ಲು ಬೀಜಗಳೆಲ್ಲಾ ಮೊಳಕೆಯೊಡೆದು ಗೇಣುದ್ದದ ಹುಲ್ಲು ಬೆಳೆದಿತ್ತು. ಆದರೆ ಕುಡುಗೋಲಲ್ಲಿ ಕೊಯ್ಯಲು ಸಾಧ್ಯವಿರಲಿಲ್ಲ. ದನಕರು, ಎತ್ತು, ಎಮ್ಮೆ ಆಕಳುಗಳು ರಾಪಾಡಿಕೊಂಡು ಹಸಿರು ಹುಲ್ಲನ್ನು ಮೇಯ್ಯುತ್ತಿದ್ದವು. ಇದರಿಂದ ಕರಾವು ಸುಧಾರಿಸಿತ್ತು.

ಜಂಗಮಯ್ಯರು ಹಗಲಿನ ಹೆಚ್ಚು ಸಮಯವನ್ನು ಹೊಲಗಳಲ್ಲಿಯೇ ಕಳೆಯುತ್ತಿದ್ದರು. ನಳನಳಿಸಿ ಬೆಳೆಯುತ್ತಿದ್ದ ಬಿಳಿ ಜೋಳ, ಸಜ್ಜೆಯ ಪೈರನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. “ನಮ್ಮ ಹಣೆಬರ ಹಿಂಗೇ ಬರದಿತ್ತೇನೋ ಟೆಂಕಲ ಸೀಮ್ಯಾಗಿಂದ ಈ ಬಡಗಲ ಸೀಮೆಗೆ ಬಂದು ಜೀವನ ಭದ್ರ ಮಾಡಿಕ್ಯಂಡ್ರಿ, ಇಂಗಿಂಗೇ ಬರದೈತೇನೋ” ಎಂದು ಮಳಿಯಪ್ಪಯ್ಯ ಮರುಳಯ್ಯ ಮಾತಾಡಿಕೊಂಡಿದ್ದರು.

ಶಿವಲಿಂಗಯ್ಯ ಎರಡೂ ಹೊಲಗಳಲ್ಲಿ ಸುತ್ತಾಡುವುದೂ ಮುರುಟಿದ್ದ ಹುಣಿಸಿ ಸಸಿಗಳ ಗುಂಡಿಗಳಲ್ಲಿ ಕುರ್ಜಿಗೆಯಲ್ಲಿ ಗಿಡದ ಸುತ್ತಾ ಕೆದರಿ ಮಣ್ಣನ್ನು ಸಡಿಲಗೊಳಿಸುತ್ತಿದ್ದ. ಸಂಜೆಗೆ ಮನೆಗೆ ಹಿಂತಿರುಗಿ ತಣ್ಣೀರಲ್ಲಿ ಮಿಂದು ಮೈ ಅಳಾರ ಮಾಡಿಕೊಳ್ಳುತ್ತಿದ್ದ.

ಹಿಂದಿನ ಸಂಚಿಕೆ ಓದಿ: 18. ಜಂಗಮಯ್ಯರಿಗೆ ಪುತ್ರೋತ್ಸವ

ಇಡೀ ಊರಿನಲ್ಲಿ ಜನ ಲವಲವಿಕೆಯಿಂದ ತಮ್ಮ ತಮ್ಮ ಉದ್ಯೋಗ ಮಾಡಿಕೊಂಡು ನಿರುಮ್ಮಳವಾಗಿದ್ದರು. ಬಿಳಿಜೋಳ, ಸಜ್ಜೆ, ಕುಸುಮೆ, ಹುಚ್ಚೆಳ್ಳು ಮುಂತಾದ ಫಸಲುಗಳು ಇನ್ನೇನು ಹೊಡೆ ಹೊಡೆಯಬೇಕು ಅನ್ನುವ ಸಮಯಕ್ಕೆ ಸ್ವಾತಿ, ವಿಶಾಖ ಮಳೆಗಳು ಹನಿಯಾಡಿ ಪೈರಿಗೆ ಚೇತನ ತಂದಿದ್ದವು.

ಮೂಡಲ ಗುಡ್ಡ ಪಡುವಲ ಗುಡ್ಡಗಳು ಹಸಿರಾಗಿ, ಬೇಸಾಯ ಬಿಟ್ಟ ಎತ್ತುಗಳು ದನಕರು, ಎಮ್ಮೆ, ಕುರಿ, ಆಡು ಮುಂತಾದವು ಮದ್ಯಾನ್ನಕ್ಕೆಲ್ಲಾ ಹೊಟ್ಟೆ ತುಂಬಾ ಮೇವು, ಮೇಯ್ದು ಕೆಲವು ಅಲ್ಲಲ್ಲಿ ಮಲಗಿ ಮೆಲುಕು ಹಾಕುತ್ತಿದ್ದರೆ, ಮತ್ತೆ ಕೆಲವು ಬಾಯಾರಿಕೆಯಾಗಿ ತಮ್ಮಷ್ಟಕ್ಕೆ ತಾವೇ ಗುಡ್ಡ ಇಳಿದು ಸರುಗಳಲ್ಲಿ ಅಲ್ಲಲ್ಲಿ ಸಣ್ಣಗೆ ಹರಿಯುತ್ತಿದ್ದ ಗುಡ್ಡದ ಜೋಪಿನ ನೀರನ್ನು ಕುಡಿದು ನಿಂತು-ಕೊಂಡು ಮೆಲುಕು ಹಾಕುತ್ತಿದ್ದವು. ಅವುಗಳ ಪಾಲಕರು ಮುಟ್ಟಾಟ ಆಡುವುದು ಮತ್ತು ಪಿಳ್ಳಂಗೋವಿ ನುಡಿಸುತ್ತಾ ತಲ್ಲೀನರಾಗಿರುತ್ತಿದ್ದರು.

ಇಂಥಾ ದೃಶ್ಯ ದೇಶದ ಯಾವ ಹಳ್ಳಿಯಲ್ಲಿ ಕಾಣಸಿಗುತ್ತಿತ್ತೋ ಯಾರು ಬಲ್ಲರು. ಗೌನಳ್ಳಿಯ ಈ ಬದುಕು ಅದರಲ್ಲೇ ಮಿಳಿತಗೊಂಡಿದ್ದ ಜನ ಮತ್ತೆಲ್ಲಿಯೂ ಕಾಣಸಿಗುತ್ತಿರಲಿಲ್ಲವೆಂದರೆ ಅತಿಶಯೋಕ್ತಿಯಾಗಿರಲಿಲ್ಲ.

ಹಿಂದಿನ ಸಂಚಿಕೆ ಓದಿ: 19. ಊರ ಬಾವಿ ತೋಡಿದರು

ಹೊಡೆ ತುಂಬಿದ ತೆನೆಗಳು ಭಾರದಿಂದ ಬಾಗಿದ್ದವು. ಕೆಲವು ಹೊಲಗಳಲ್ಲಿ ಜೋಳದ ದಂಟು ನೆಲಕ್ಕೆ ತಾಗುವಂತೆ ಬಾಗಿದ್ದರೆ ಸಜ್ಜೆದಂಟು ಮಾತ್ರ ತುಸುಬಾಗಿ, ಗಾಳಿಗೆ ತೊನೆಯುತ್ತಿದ್ದವು. ರೈತರ ಸುಖಕ್ಕೆ ಮಿತಿಯೇ ಇರಲಿಲ್ಲ. ಮುಂದೆ ಬರುವ ಸುಗ್ಗಿಯ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾ “ಏಳುಕೋಟಿ ಮೈಲಾರ ಲಿಂಗ ಎಲ್ಲಾ ನಿನ್ನ ಕೃಪೆ ಕಣಪ್ಪಾ” ಎಂದು ದೀರ್ಘ ಉಸಿರರೆಯುತ್ತಿದ್ದರು.

ತೆನೆಗಳಲ್ಲಿನ ಕಾಳು ಬಲಿತು ದಂಟುಗಳು ಬಾಡುತ್ತಾ ಪೈರು ಕಟಾವಿಗೆ ಬಂದಿತೆಂದು ಮುನ್ಸೂಚನೆ ಕೊಡುತ್ತಿದ್ದವು. ರೈತರೆಲ್ಲಾ ಕಣಗಳನ್ನು ಸಿದ್ಧಪಡಿಸಿಕೊಳ್ಳಲು ಕೆಲವರು ಸಗಣಿ ಬಗ್ಗಡದಿಂದ ಸಾರಿಸಿ ಸಿದ್ಧಗೊಳಿಸಿದರೆ ಮತ್ತೆ ಕೆಲವರು ಎತ್ತುದನಗಳನ್ನು ಮೇಟಿ ಗೂಟದ ಸುತ್ತಾ ತಿರುಗಿಸಿ ನೆಲಗಟ್ಟಿ ಮಾಡಿಕೊಂಡು ಸಗಣಿ ಬಗ್ಗಡದಿಂದ ಸಾರಿಸಿ ಸಿದ್ದಪಡಿಸಿಕೊಂಡರು.

ಯಾರು ಮುಂಚೆ ಕೊಯ್ದು ಆರಂಭಿಸುತ್ತಾರೆ ಎಂದು ನಿರೀಕ್ಷೆ ಮಾಡುತ್ತಿದ್ದವರಿಗೆ ಬೇಲೂರಪ್ಪ ಹೆಸರಿನ ರೈತ ತನ್ನ ಎರೆಕಟ್ಟೆಯ ಜೋಳ ಮತ್ತು ಪಕ್ಕದ ಹೊಲದ ಸಜ್ಜೆ ತೆನೆಗಳನ್ನು ಕೊಯ್ಯಲು ಕೂಲಿಯಾಳುಗಳನ್ನು ಜತೆ ಮಾಡಿ ಕೊಯ್ದು ಆರಂಭಿಸಿದ. ಗಾಡಿ ಹೊಂದಿದ್ದವರಿಗೆ ಬೇಡಿಕೆ ಬಂದಿತ್ತು. ಹತ್ತಿರದ ಹೊಲಗಳವರು ಬಿದಿರಿನ ಮತ್ತು ಈಚಲಕಡ್ಡಿಯ ಜಲ್ಲೆಗಳಲ್ಲಿ ತೆನೆ ತುಂಬಿ ತಲೆ ಮೇಲೆ ಹೊತ್ತು ಕಣಕ್ಕೆ ಸಾಗಿಸಿದರೆ ತುಸು ದೂರದ ಹೊಲದವರು ಗಾಡಿಗಳಲ್ಲಿ ತುಂಬಿ ಕಣಕ್ಕೆ ಹೇರಿಕೊಂಡರು.

ಹಿಂದಿನ ಸಂಚಿಕೆ ಓದಿ: 20. ಕಾಮಜ್ಜ ಒಡ್ಡು ಕಟ್ಟಿದ

ಜಂಗಮೈಗಳಿಗೆ ಹೊಲ ಕೊಯ್ಯುವ ಸಂಭ್ರಮ ಅವರಾಗಲಿ ಅವರ ಹೆಣ್ಣು ಮಕ್ಕಳಾಗಲಿ ಎಂದೂ ತೆನೆ ಬುಡಕೊಯ್ದವರಲ್ಲ, ಹೀಗಾಗಿ ಯಾರ ಯಾರ ಮನೆಯಿಂದ ಕುಡುಗೋಲು ಸಂಪಾದಿಸಿ ಊರ ಬಳಿಯ ಹೊಲದ ಜೋಳ ಮತ್ತು ಸಜ್ಜೆಯ ತೆನೆಗಳನ್ನು ಕೊಯ್ಯಲು ಆರಂಭಿಸಿದ್ದರು. ಸೊಂಟಕ್ಕೆ ಮಡಿಲು ಕಟ್ಟಿಕೊಂಡು ಕೊಯ್ದ ತೆನೆಗಳನ್ನು ಅದರಲ್ಲಿ ಹಾಕಿಕೊಳ್ಳುತ್ತಾ ಮದ್ಯಾನ್ನದ ಹೊತ್ತಿಗೆ ಕಾಲುಭಾಗದಷ್ಟು ಹೊಲದ ತೆನೆಗಳನ್ನು ಕೊಯ್ದಿದ್ದರು. ಯಾರ ಕಣಕ್ಕೆ ಹೊತ್ತೊಯ್ಯಬೇಕು ಎಂಬ ಸಮಸ್ಯೆ ತಲೆದೋರಿದಾಗ ಯಜಮಾನಪ್ಪರೇ ತಮ್ಮ ಕಣಕ್ಕೆ ಸಾಗಿಸಿರೆಂದು ಪರಿಹಾರ ಸೂಚಿಸಿದ್ದರು. ಸಂಜೆಯ ಹೊತ್ತಿಗೆ ಬಸವಳಿದ ಅವರೆಲ್ಲಾ ಮನೆಗೆ ಹಿಂತಿರುಗಿ ತಣ್ಣೀರಲ್ಲಿ ಮಿಂದು ದಣಿವಾರಿಸಿಕೊಂಡಿದ್ದರು.

ಯಜಮಾನ ಕಾಮಜ್ಜನ ಮಗ ಸಿದ್ದಿಂಗಪ್ಪ ಕಣದಲ್ಲಿ ತೆನೆಗಳನ್ನು ಒಣಗಲು ಹರಡಿ, ಐಗಳ ತೆನೆಗಳನ್ನು ಅಲಾದಿಯಾಗಿ ಹರಡಿದ್ದ. “ತೆನೆಗಳು ಪೂರಾ ಒಣಗಿದ ಬಳಿಕ ರೋಣುಗಲ್ಲಿನಲ್ಲಿ ತೆನೆಯ ಕಾಳು ಕಂಕಿ ಬೇರಡಿಸಬೇಕು. ಮೊದಲು ತೆನೆ ಕೊಯ್ಯುವುದೆಲ್ಲ ಮುಗಿಯಲಿ ಆಮೇಲೆ ನೋಡೋಣ” ಎಂದು ಸಲಹೆ ನೀಡಿದ್ದ. ಆತನ ಸಲಹೆಯಂತೆ ಐಗಳು ತಮ್ಮ ಹೆಂಡಂದಿರ ಜತೆ ಐದು ದಿನ ಊರ ಹತ್ತಿರದ ಹೊಲದ ತೆನೆಕೊಯ್ದು ಮುಗಿಸಿದರು. ಅದಾದ ಬಳಿಕ ಊರ ಬಡಗಲ ದಿಕ್ಕಿನ ಹೊಲದ ತೆನೆ ಕೊಯ್ಯಲು ತೊಡಗಿಕೊಂಡರು.

ಹಿಂದಿನ ಸಂಚಿಕೆ ಓದಿ: 21. ದುಷ್ಟನಿಂದ ದೂರ ಹೋದವರು

ತೆನೆ ತುಂಬಿದ ಜಲ್ಲೆಯನ್ನು ದೂರದಲ್ಲಿದ್ದ ಯಜಮಾನ ಕಾಮಜ್ವರ ಕಣಕ್ಕೆ ಹೊತ್ತೊಯ್ಯುವುದು ಕಷ್ಟಕರವಾಗಿತ್ತು. ಅರ್ಧ ಜಲ್ಲೆ ತೆನೆ ತುಂಬಿ ಹೊತ್ತೊಯ್ಯವ ಉಪಾಯವನ್ನು ಶಿವಲಿಂಗಯ್ಯ, ಮರುಳಯ್ಯ ಕಂಡು-ಕೊಂಡರು. ಅಂತೂ ಸಂಜೆಯ ಹೊತ್ತಿಗೆ ಕಾಲುಭಾಗದಷ್ಟು ತೆನೆಕೊಯ್ದು ಹೈರಾಣಾದರು. ಎರಡು ದಿನ ಕೊಯ್ಯುವ ಹೊಲವನ್ನು ಐದಾರು ದಿನ ಕೊಯ್ದು ಸಮಾಧಾನ ಪಟ್ಟುಕೊಂಡರು.

ಇಡೀ ಊರಲ್ಲಿನ ಜನ ತಮ್ಮ ಕೊಯ್ದು ಕೆಲಸದಲ್ಲಿ ಎಷ್ಟು ತೊಡಗಿಸಿಕೊಂಡಿದ್ದರೆಂದರೆ ಬೆಳಕು ಹರಿಯುವ ಮುನ್ನವೇ ಊರ ಬಾವಿಯಿಂದ ನೀರು ತಂದು ಗಂಡಸರು, ಕೆಲವರು ಹೆಂಗಸರು ತೆನೆಕೊಯ್ಯಲು ತೆರಳಿದರೆ, ಮನೆಯಲ್ಲಿ ಉಳಿದವರು ಅಡಿಗೆ ಮಾಡಿಕೊಂಡು ಬುತ್ತಿ ಒಯ್ಯುತ್ತಿದ್ದರು. ಇವರೂ ಸೇರಿಕೊಂಡು ಸಂಜೆಯ ತನಕ ತೆನೆಕೊಯ್ದು ಗಾಡಿಗಳಲ್ಲೋ ತಲೆಯಮೇಲೋ ಹೊತ್ತೊಯ್ದು ಕಣಕ್ಕೆ ತಲುಪಿಸುತ್ತಿದ್ದರು.

ಊರಲ್ಲಿ ಉಳಿದು ಅಡ್ಡಾಡುತ್ತಿದ್ದವರೆಂದರೆ ಗುಂಡಾಚಾರಿ, ಆತನ ಪತ್ನಿ, ಕೆಲವು ಮಾದಿಗರು ಮತ್ತು ಕಮ್ಮಾರರು ಮಾತ್ರ. ಕೆಲವು ಮನೆಗಳಲ್ಲಿನ ಮುದುಕರು ಮುದುಕಿಯರು. ಅವರೂ ಕೂಡಾ ಧಾನ್ಯ ಹಸನು ಮಾಡುವುದು, ಕರುಗಳಿಗೆ ಹುಲ್ಲು ನೀರು ನೋಡಿಕೊಳ್ಳುವುದು ಮಾಡುತ್ತಿದ್ದರು. ಇದು ದಶಕಗಳಿಂದ ಆಚರಿಸಿಕೊಂಡು ಬಂದ ಪದ್ಧತಿಯಾಗಿತ್ತು. ಮನೆಯಲ್ಲಿ ದವಸ ಮುಗಿದಿರುವವರು ಕಾಳು ತುಳಿಸಿಕೊಂಡರೆ ಪಳತ ಕಣಜಗಳಲ್ಲಿ ಧಾನ್ಯ ಇದ್ದವರು ಜೋಳದ ಮತ್ತು ಸಜ್ಜೆಯ ತೆನೆಗಳನ್ನು ಮನೆಗೆ ಹೇರಿಕೊಂಡು ಹಜಾರದಲ್ಲಿ ಗಾಳಿಯಾಡುವಂತೆ ನೆರಿಕೆ ಕಟ್ಟಿ ಅದರಲ್ಲಿ ಒಟ್ಟಿಕೊಂಡರು.

ಹಿಂದಿನ ಸಂಚಿಕೆ‌ ಓದಿ: 22.ಜಂಗಮಯ್ಯರಲ್ಲಿ ಬಿಕ್ಕಟ್ಟು

ಇದಾದ ಕೆಲವುದಿನಗಳಲ್ಲಿ ತೆನೆಕೊಯ್ದ ದಂಟುಗಳು ಪೂರಾ ಒಣಗಿದ ಬಳಿಕ ಬೆಳಗಿನ ತಂಪುಹೊತ್ತಿನಲ್ಲಿ ಅವುಗಳನ್ನು ಬುಡಕ್ಕೆ ಕೊಯ್ದು ಸಿವುಡು ಕಟ್ಟಿದರು. ಆನಂತರ ಕಣಕ್ಕೆ ಸಾಗಿಸಿ ದಪ್ಪನೆಯ ಕಲ್ಲುಗುಂಡುಗಳ ಮೇಲೆ ಅಟ್ಟುಕಟ್ಟಿ ಅದರ ಮೇಲೆ ದಬ್ಬೆಗಳನ್ನು ಹರಡಿ ಹುಲ್ಲು ಸೊಪ್ಪೆಯನ್ನು ಒಟ್ಟಿಕೊಂಡರು.

ಐಗಳ ಹೊಲದ ಜೋಳದ ಮತ್ತು ಸಜ್ಜೆ ತೆನೆಗಳು ಪೂರಾ ಒಣಗಿದ ಬಳಿಕ ಸಿಲ್ಲಿಂಗಪ್ಪ ರೋಣುಗಲ್ಲು ಹೊಡೆದಿದ್ದ ಮರುಳಯ್ಯ, ಶಿವಲಿಂಗಯ್ಯ ಮೇಲುಬ್ಬುಲು ತೆಗೆದ ಬಳಿಕ ಕಾಣಿಸಿಕೊಂಡಿದ್ದ ಬಿಳಿಮುತ್ತಿನಂಥ ಜೋಳದ ಕಾಳುಗಳನ್ನು ಅಂಗೈ ತುಂಬಾ ಹಿಡಿದುಕೊಂಡು ಕಂಬನಿದುಂಬಿಕೊಂಡಿದ್ದರು.

ಸಂಜೆಯ ಹೊತ್ತಿಗೆ ರಾಸಿ ಪೂಜೆ ಮಾಡಿ ಎಂಟು ಪಲ್ಲಾ ಅಳೆದಿದ್ದರು. ಯಜಮಾನಪ್ಪರು, ಮಳಿಯಪ್ಪಯ್ಯ, ಮರುಳಯ್ಯರಿಗೆ ತಲಾ ಮೂರು ಮೂರು ಪಲ್ಲಾ ಅಳೆದು ಅವರ ಮನೆಗಳಿಗೆ ತಲುಪಿಸಿದರು. ಶಿವಲಿಂಗಯ್ಯನ ಮನೆಗೆ ಎರಡು ಪಲ್ಲಾ ತಲುಪಿಸಿದರು.

ಹಿಂದಿನ ಸಂಚಿಕೆ‌ ಓದಿ: 23.ಜಂಗಮಯ್ಯರ ಗೃಹ ನಿರ್ಮಾಣ

ಐಗಳ ಮನೆಗಳಲ್ಲಿ ಧಾನ್ಯ ತುಂಬಿಕೊಳ್ಳಲು ಏನೊಂದು ವ್ಯವಸ್ಥೆ ಇರಲಿಲ್ಲವಾಗಿ ಪಡಸಾಲೆಯ ಮೂಲೆಯಲ್ಲಿ ಸುರಿದಿದ್ದರು. ಶಿವಲಿಂಗಯ್ಯ ಅಡಿಗೆ ಒಲೆಯ ಪಕ್ಕದಲ್ಲಿ ಸುರಿದುಕೊಂಡಿದ್ದ. “ಎಂಟು ದಿನ ತಡೀರಿ. ಒಂದೀಸೀಸು ಸಚ್ಚೇನೂ ಸಿಗತಾವೆ” ಎಂದು ಸಿದ್ದಿಂಗಪ್ಪ ತಿಳಿಸಿದ್ದ. ಅದರಂತೆ ಸಜ್ಜೆ ತುಳಿಸಿಯಾದ ಬಳಿಕ ತಲಾ ಒಂದೊಂದು ಪಲ್ಲಾ ಸಜ್ಜೆಯನ್ನು ಐಗಳ ಮೂರು ಮನೆಗಳಿಗೆ ತಲುಪಿಸಿದ್ದರು, ಜೋಳ ಮತ್ತು ಸಜ್ಜೆಯ ಸೊಪ್ಪೆಯನ್ನು ಪ್ರತಿದಿನ ತಂಬಿಗೆ ತುಂಬಾ ನೊರೆಹಾಲು ಕೊಡುತ್ತಿದ್ದ ಚಿಕ್ಕಪ್ಪ ಗೌಡರಿಗೆ ಕೊಯ್ದುಕೊಳ್ಳಲು ಮಳಿಯಪ್ಪಯ್ಯ ತಿಳಿಸಿದ್ದರು. ಕೆಲವು ದಿನ ಕಳೆದ ಬಳಿಕ ಐಗಳ ಹೊಲದ ಸುತ್ತಾ ಬಿತ್ತಿದ್ದ ಕುಸುಮೆ ಗಿಡಗಳನ್ನು ಕೊಯ್ಯಲು ಪ್ರಯತ್ನಿಸಿ ಮುಳ್ಳು ಚುಚ್ಚಿದ್ದರಿಂದ ಐಗಳು ವಿಫಲರಾಗಿದ್ದರು. ಯಜಮಾನಪ್ಪರೇ ಕುಸುಮೆಗಿಡ ಕೊಯ್ಯಸಿ, ಕುಸುಮೆಯ ಗಿಡಗಳನ್ನು ಬಡಿದು ಕಾಳು ತೂರಿ ಐಗಳಿಗೆ ತಲಾ ಐವತ್ತು ಸೇರು ಕುಸುಮೆ ತಲುಪಿಸಿದ್ದರು.

ಈಗ ಜಂಗಮೈಗಳಿಗೆ “ಕಂತೆಭಿಕ್ಷಾ ಮಾಡಬೇಕೇಕೆ, ನಿಲ್ಲಿಸಿಬಿಡೋಣ” ಎಂಬ ನಿರ್ಧಾರಕ್ಕೆ ಬಂದರು. “ಮನೆಯಲ್ಲಿ ಜೋಳ, ಸಜ್ಜೆಯ ದಾಸ್ತಾನು ಇರುವಾಗ ಭಿಕ್ಷೆ ಬೇಡುವುದು ಸರಿಯಲ್ಲ” ಎಂಬ ವಿವೇಕ ಮೂಡಿತ್ತು. ಅವರ ಹೆಣ್ಣು ಮಕ್ಕಳಿಗೆ ಜೋಳದ ಮುದ್ದೆ ಮಾಡುವುದು ತಿಳಿಯದು, ಯಜಮಾನಪ್ಪರ ಮನೆಯ ಹೆಣ್ಣುಮಕ್ಕಳು ಬಂದು ಕುಸುಮೆಚಟ್ಟಿ, ಕುಸುಮೆ ಹಾಲಿನಲ್ಲಿ ಸೀಪದಾರ್ಥ ಮಾಡುವುದು, ಜೋಳ ಮತ್ತು ಸಜ್ಜೆಯ ರೊಟ್ಟಿ ತಯಾರಿಸುವುದು.

ಜೋಳದ ಮುದ್ದೆ ತಯಾರಿಸುವುದು ಮುಂತಾದುವನ್ನು ಹೇಳಿ ತೋರಿಸಿದ್ದರು. ಮಾದಿಗರ ಹೆಂಗಸರು ಮೂರೂಜನ ಐಗಳ ಮನೆಗಳವರಿಗೆ, ಬೀಸುವುದು ಮತ್ತಿತರ ಕೆಲಸಗಳನ್ನು ಮಾಡಿಕೊಡಲುದ್ಯುಕ್ತರಾದರು. ಹೊಲಗಳಲ್ಲಿ ಸುತ್ತಾಡಿ ಹುಲುಸಾಗಿ ಬೆಳೆದಿರುತ್ತಿದ್ದ ಗೊರಿಸೊಪ್ಪು, ಕೋಲನ್ನೆಸೊಪ್ಪು, ಬಳೆಒಡಕ, ಕಿರುಕಸಾಲೆ ಮತ್ತು ಆಲೆಸೊಪ್ಪು ಮುಂತಾದುವನ್ನು ತಂದುಕೊಟ್ಟು ಈ ಸೊಪ್ಪುಗಳಲ್ಲಿ ಏನೇನು ತಯಾರಿಸಬಹುದು ಎಂಬುದನ್ನು ಮಾದಿಗರ ಹೆಂಗಸರು ತಿಳಿಸಿದ್ದರು.

ಹಿಂದಿನ ಸಂಚಿಕೆ ಓದಿ: 24. ಐಗಳ ಗೃಹ ಪ್ರವೇಶ

ಸೂಡ್ರು ಕಾಲ ಮುಗಿದು ಬೇಸಗೆ ಕಾಲಿಟ್ಟಿತ್ತು. ಇಂಥಾ ಕಾಲದಲ್ಲೂ ಬತ್ತಿಹೋಗಿದ್ದ ಬಸವನಹಳ್ಳದಲ್ಲಿ ಜೋಪು ಕಾಣಿಸಿಕೊಂಡು ನಿಧಾನಕ್ಕೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಮಾರಿಗುಡಿಹಳ್ಳದಲ್ಲಿ ಸಣ್ಣಗೆ ನೀರು ಹರಿಯಲಾರಂಭಿಸಿ ಮಡಿವಾಳರು ಬಟ್ಟೆ ಒಗೆಯುವ ಜಾಗವನ್ನು ಊರ ಬಾವಿಬಳಿಯಿಂದ ಮಾರಿಗುಡಿಹಳ್ಳಕ್ಕೆ ವರ್ಗಾಯಿಸಿಕೊಂಡಿದ್ದರು.

ಊರಿನ ಅರ್ಧ ಜನ ಗೌನಳ್ಳಿಯ ಜೀವನಾಡಿ ಬಸವನಹಳ್ಳ ಇನ್ನು ಬತ್ತದಿರಲಿ ಎಂದು ಮನದುಂಬಿ ಹಾರೈಸಿದ್ದರು.

ಇಲ್ಲಿಗೆ ಕಾದಂಬರಿ ಮುಗಿಯಿತು..
ಧನ್ಯವಾದ

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Bayalu Seeme NovelChitradurgaChitradurga newsChitradurga UpdatesfeaturedGounahalliGS UjjanappaHubbida MalemadhyadolageKannada Latest NewsKannada NewsKannada NovelSunday Specialಕನ್ನಡ ಕಾದಂಬರಿಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜಿ.ಎಸ್.ಉಜ್ಜನಪ್ಪಬಯಲು ಸೀಮೆ ಕಾದಂಬರಿಸಂಡೇ ಸ್ಪೆಷಲ್ಹಬ್ಬಿದಾ ಮಲೆಮಧ್ಯದೊಳಗೆ
Share This Article
Facebook Email Print
Previous Article jobs in chitradurga news ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
Next Article ಯುಗಾದಿ ಹಬ್ಬಕ್ಕೆ ಮೈಸೂರಿನಿಂದ 2 ವಿಶೇಷ ರೈಲು | ಚಿತ್ರದುರ್ಗಕ್ಕೆ ಯಾವಾಗ ಮತ್ತು ಎಷ್ಟು ಗಂಟೆಗೆ ಬರಲಿದೆ?
Leave a Comment

Leave a Reply Cancel reply

Your email address will not be published. Required fields are marked *

ಮಾರುಕಟ್ಟೆ ಧಾರಣೆ
ಮಾರುಕಟ್ಟೆ ಧಾರಣೆ | ಏಪ್ರಿಲ್ 15 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
ಮಾರುಕಟ್ಟೆ ಧಾರಣೆ
ರೈತ ಭವನದಲ್ಲಿ ರಾಜ್ಯ ಸಮಿತಿ ಸಭೆ
ವಾಣಿಜ್ಯ ಒಪ್ಪಂದದಿಂದ ಕೃಷಿಗೆ ಮಾರಕ | ಕೇಂದ್ರ ಸರ್ಕಾರ ಹಿಂದೆ ಸರಿಯದಿದ್ದರೆ ಜಿಲ್ಲಾ ಕೇಂದ್ರಗಳಲ್ಲಿ ಚಳುವಳಿ | ರಾಜ್ಯಾಧ್ಯಕ್ಷ ಬಸವರಾಜಪ್ಪ
ಮುಖ್ಯ ಸುದ್ದಿ
ಎಂ.ಸೌಮ್ಯ, ಸಿ.ಆರ್.ಚಿನ್ನು, ಎಂ.ಸತೀಶ್
ಚಿತ್ರಹಳ್ಳಿ MDRS ಪಿಯು ಕಾಲೇಜಿಗೆ ಶೇ.97 ಫಲಿತಾಂಶ
ಮುಖ್ಯ ಸುದ್ದಿ
Dark spots on the neck
ಕುತ್ತಿಗೆಯ ಮೇಲಿನ ಕಪ್ಪು ಕಲೆಗಳು ಈ ರೋಗಗಳ ಸಂಕೇತವಂತೆ
Life Style
© Chitradurga News 2025 | Powered By Karnatakabest.com
 

Loading Comments...
 

    Welcome Back!

    Sign in to your account

    Username or Email Address
    Password

    Lost your password?

    Not a member? Sign Up