
CHITRADURGA NEWS | 22 JULY 2025
ಚಿತ್ರದುರ್ಗ: ಸೋಮವಾರ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ ಗಿಲಿಕೇನಹಳ್ಳಿ ಅಜ್ಜಯ್ಯ ಆತ್ಮಹತ್ಯೆ ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಮಗಳು ನಾಪತ್ತೆ | ತಂದೆ ಆತ್ಮಹತ್ಯೆ | ಪೋಕ್ಸೋ ಕೇಸ್ ದಾಖಲಿಸದ ಪೊಲೀಸರ ವಿರುದ್ಧ ಆಕ್ರೋಶ
ಹೊಳಲ್ಕೆರೆ ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟಿಸಿದ ಗ್ರಾಮಸ್ಥರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಗಿಲಿಕೇನಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮೃತ ಅಜ್ಜಯ್ಯ ಮಗಳು ಕಾಣೆಯಾದ ದೂರಿನಿಂದ, ಆತ್ಮಹತ್ಯೆ, ಲಾಠಿ ಚಾರ್ಜ್‌ವರೆಗೆ ನಡೆದ ಎಲ್ಲ ಅಂಶಗಳನ್ನು ಎಸ್ಪಿ ವಿವರವಾಗಿ ತಿಳಿಸಿದ್ದಾರೆ.
ಈ ಕುರಿತ ಪೂರ್ಣ ವಿವರ ಇಲ್ಲಿದೆ:
1. ಹೊಳಲ್ಕೆರೆ ತಾಲೂಕಿನ ಗಿಲೆಕೇನಹಳ್ಳಿ ಗ್ರಾಮದ ಅಜ್ಜಯ್ಯ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿ ಪೊಲೀಸರ ತಪ್ಪಿದ್ದರೆ ಕ್ರಮ ಜರುಗಿಸುತ್ತೇವೆ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು.
ಇದನ್ನೂ ಓದಿ: ಕಲೆಗೆ ಜಾತಿ, ಭಾಷೆ, ಮೇಲು-ಕೀಳು ಎಂಬ ಭಾವವಿಲ್ಲ | AC ಮಹೆಬೂಬ್ ಜಿಲಾನಿ ಖುರೇಷಿ
2. ತನ್ನ ಮಗಳು ಸಂಜನಾಳನ್ನು ಆಕೆ ಮದುವೆಯಾಗಿರುವ ರಘು ಜೊತೆ ಹೊಳಲ್ಕೆರೆ ಮಾರುಕಟ್ಟೆಯಲ್ಲಿ ನೋಡಿದ ತಂದೆ ಅಜ್ಜಯ್ಯ ಬೇಸರದಿಂದ ಪೊಲೀಸ್ ಠಾಣೆ ಬಳಿ ಬಂದು ವಿಷ ಸೇವಿಸಿದ್ದಾರೆ. ತಕ್ಷಣ ಪೊಲೀಸರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
3. ಪೋಕ್ಸೋ ಪ್ರಕರಣ ದಾಖಲಿಸಿಲ್ಲ ಎಂಬ ಆಪಾದನೆ ಮಾಡಿ ಕುಟುಂಬದವರು ಹಾಗೂ ಗಿಲಿಕೇನಹಳ್ಳಿ ಗ್ರಾಮಸ್ಥರು ಸೋಮವಾರ ಸಂಜೆ ಹೊಳಲ್ಕೆರೆ ಪೊಲೀಸ್ ಠಾಣೆ ಬಳಿ ಶವ ಇಟ್ಟು ಪ್ರತಿಭಟಿಸಿದರು.
4. ವೃತ್ತದಲ್ಲಿ ಶವ ಇಟ್ಟು ಪ್ರತಿಭಟಿಸುತ್ತಿದ್ದಾಗ ಡಿವೈಎಸ್‌ಪಿ ಅವರ ಮೇಲೆ ಗುಂಪು ದಾಳಿ ನಡೆಸಲು ಯತ್ನಿಸಿದೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಸಣ್ಣ ಪ್ರಮಾಣದ ಲಾಠಿ ಚಾರ್ಜ್ ಮಾಡಿದ್ದಾರೆ ಎಂದರು.
ಅಜ್ಜಯ್ಯ ಮಗಳು ನಾಪತ್ತೆ ಪ್ರಕರಣದ ವಿವರ:
1. ಗಿಲಿಕೇನಹಳ್ಳಿ ಗ್ರಾಮದ ಸಂಜನಾ ಕಾಲೇಜಿಗೆ ಹೋದವಳು ಮನೆಗೆ ವಾಪಾಸು ಬಂದಿಲ್ಲ ಎಂಬ ಕಾರಣಕ್ಕೆ ತಾಯಿ ಪುಷ್ಪ ಮಗಳು ಕಾಣೆಯಾಗಿದ್ದಾಳೆ ಎಂದು ಜು.12 ರಂದು ದೂರು ದಾಖಲಿಸಿದ್ದರು. ದೂರಿನಲ್ಲಿ ಮಗಳಿಗೆ 19 ವರ್ಷ ಬಿಎ ಓದುತ್ತಿದ್ದಾಳೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಆಗಸ್ಟ್ ತಿಂಗಳಲ್ಲೇ ಒಳಮೀಸಲಾತಿ ಜಾರಿ | ಹೋರಾಟ, ಬಂದ್ ಬೇಡ | ಎಚ್.ಆಂಜನೇಯ
2. ಜು.15 ರಂದು ಸಂಜನಾ ಹಾಗೂ ರಘು ಬಂದು ನಾವು ಮದುವೆ ಆಗಿದ್ದೇವೆ ಎಂದು ಹೇಳಿ ತೆರಳಿದ್ದರು. ಈ ಸಂಬಂಧ ಮಹಿಳಾ ಠಾಣೆಗೆ ನಮ್ಮ ಪೇದೆ ಬಂದು ನಾಪತ್ತೆ ಪ್ರಕರಣ ರದ್ದು ಮಾಡಿದರು.
3. ಈ ಪ್ರಕರಣ ರದ್ದಾದ ಬಳಿಕ ಸಂಜನಾ ತಂದೆ ಅಜ್ಜಪ್ಪ, ದಾವಣಗೆರೆ ಮಹಾನಗರ ಪಾಲಿಕೆಯಿಂದ ಮಗಳ ಜನನ ಪ್ರಮಾಣ ಪತ್ರ ತಂದು ಮಗಳಿಗೆ 18 ವರ್ಷ ತುಂಬಿಲ್ಲ. ಪೋಕ್ಸೋ ಪ್ರಕರಣ ದಾಖಲಿಸಿ ಎಂದು ಒತ್ತಾಯಿಸಿದ್ದಾರೆ.
4. ಈ ವೇಳೆ ಪೊಲೀಸರು ಆಕೆಯ ಶಾಲಾ ದಾಖಲಾತಿ ಪರಿಶೀಲಸಿದ್ದು, ಎಸ್ಸೆಸ್ಸೆಲ್ಸಿ ದಾಖಲಾತಿಗಳಲ್ಲಿ ಹದಿನೆಂಟು ವರ್ಷ ತುಂಬಿರುವುದು ಗೊತ್ತಾಗಿದೆ.
5. ಜೆಜೆ ಕಾಯ್ದೆ ಅಡಿಯಲ್ಲಿ ಶೈಕ್ಷಣಿಕ ದಾಖಲೆ ಆಧಾರದಲ್ಲೇ ಪೋಕ್ಸೋ ದಾಖಲಿಸುವ ಬಗ್ಗೆ ಉಲ್ಲೇಖವಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
6. ನಮ್ಮ ಸಿಬ್ಬಂದಿ ದಾವಣಗೆರೆ ಪಾಲಿಕೆಗೆ ಹೋಗಿ ಜನನ ಪ್ರಮಾಣ ಪತ್ರದ ಬಗ್ಗೆ ಪರಿಶೀಲಿಸಿದ್ದು, ಜು.16 ರಂದು ಅದನ್ನು ನೀಡಿರುವುದು ಗೊತ್ತಾಗಿದೆ. ಇನ್ನಷ್ಟು ದೃಢೀಕರಣಕ್ಕೆ ಆಸ್ಪತ್ರೆಯ ದಾಖಲೆ ಕೇಳಿದ್ದೇವೆ. ಅಜ್ಜಯ್ಯ ಜು.20ರಂದು ಠಾಣೆಗೆ ಬಂದಾಗ ದಾಖಲಾತಿ ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರ | ಸಿಬಿಐ ತನಿಖೆಗೆ MLC ಕೆ.ಎಸ್. ನವೀನ್ ಒತ್ತಾಯ
7. ಅದೇ ದಿನ ಅಜ್ಜಯ್ಯ ಮಗಳನ್ನು ರಘು ಜೊತೆಗೆ ನೋಡಿ ಮನನೊಂದು ಠಾಣೆ ಬಳಿ ಬಂದು ವಿಷ ಸೇವಿಸಿದ್ದಾರೆ. ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಮೃತ ದೇಹವನ್ನು ಗಿಲಿಕೇನಹಳ್ಳಿಗೆ ತರುವಾಗ ಗೇಟ್‌ನಲ್ಲಿ ಕೆಲವರು ಪ್ರಚೋಧನೆ ನೀಡಿ ಠಾಣೆ ಬಳಿಗೆ ಪಾರ್ಥಿವ ಶರೀರ ತರುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
8. ಈ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡಿರುವ ರೀತಿ ಹಾಗೂ ಸಂಜನಾಳ ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
