
CHITRADURGA NEWS | 21 JULY 2025
ಚಿತ್ರದುರ್ಗ: ಕಾರ್ಮಿಕ ಇಲಾಖೆಯಲ್ಲಿ ಭಾರೀ ಅವ್ಯವಹಾರವಾಗಿದ್ದು, ಎರಡು ವರ್ಷಗಳಲ್ಲಿ 67 ಸಾವಿರ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 19.74 ಕೋಟಿ ರೂ. ಹಣ ಡ್ರಾ ಮಾಡಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಒತ್ತಾಯಿಸಿದರು.
ಇದನ್ನೂ ಓದಿ: ಮಗಳು ನಾಪತ್ತೆ | ತಂದೆ ಆತ್ಮಹತ್ಯೆ | ಪೋಕ್ಸೋ ಕೇಸ್ ದಾಖಲಿಸದ ಪೊಲೀಸರ ವಿರುದ್ಧ ಆಕ್ರೋಶ
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸುತ್ತೇವೆಂದು ಅವರ ಹೆಸರಿನಲ್ಲಿ ಕೋಟ್ಯಾಂತರ ರೂ. ವಂಚನೆ ಮಾಡಿದ್ದು, ಈ ನಿಟ್ಟಿನಲ್ಲಿ ಸಚಿವ ಸಂತೋಷ್ ಲಾಡ್ ರಾಜಿನಾಮೆ ನೀಡಿ ತನಿಖೆ ಎದುರಿಸಬೇಕು ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ನೊಂದಾಯಿತ ಕಾರ್ಮಿಕ ಸಂಘಟನೆಗಳ ಪ್ರಕಾರ 6 ರಿಂದ 7 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. ಇನ್ನೂ ಹೆಚ್ಚೆಂದರೆ 12 ಸಾವಿರ ಇರಬಹುದು. ಆದರೆ, ಇಲಾಖೆಯ ಲೆಕ್ಕದಲಿ 32 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು, ಎರಡು ವರ್ಷದಲ್ಲಿ 74 ಸಾವಿರ ಜನರಿಗೆ ಆರೋಗ್ಯ ತಪಾಸಣೆ ನಡೆಸಿದ್ದೇವೆ ಎಂದು ಇಲಾಖೆ ವರದಿ ನೀಡಿದೆ ಎಂದು ತಿಳಿಸಿದರು.
ಇವರಿಗೆ ತುಮಕೂರಿನ ಆಯುರ್ವೇದಿಕ್ ಮೆಡಿಕಲ್ ಸಂಸ್ಥೆಯ ಏಜೆನ್ಸಿಯಿಂದ 20 ಪರೀಕ್ಷೆ ನಡೆಸಲು 2999 ರೂ. ನಿಗಧಿ ಮಾಡಿದ್ದು, ಏಜೆನ್ಸಿಯವರು ಚಿತ್ರದುರ್ಗದ 175 ಕಡೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿದ್ದೇವೆ ಎಂದು ಪಟ್ಟಿ ಕೊಟ್ಟಿದ್ದಾರೆ.
ಇದನ್ನೂ ಓದಿ: BVA ಪದವಿ ಪ್ರವೇಶ | ಅರ್ಜಿ ಸಲ್ಲಿಸಲು ಜುಲೈ 30 ಕೊನೆ ದಿನ
ಆದರೆ, ಪಟ್ಟಿಗೆ ಸಂಸ್ಥೆಯವರೇ ಸಹಿ ಮಾಡಿಲ್ಲ. ಅಶ್ವಿನಿ ಆಸ್ಪತ್ರೆ ಲೆಟರ್ ಹೆಡ್ ನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಸಹಿ ಹಾಕಿದ್ದಾರೆ. ಪರೀಕ್ಷೆ ನಡೆಸಿದ ಒಬ್ಬ ಕಾರ್ಮಿಕರಿಗೂ ಅವರ ತಪಾಸಣೆಯ ರಿಪೋರ್ಟ್ ನೀಡಿಲ್ಲ. ಪಟ್ಟಿಯಲ್ಲಿರುವ ಸಾಕಷ್ಟು ಜನರಿಗೆ ಕರೆ ಮಾಡಿ ಕೇಳಿದಾಗ ನಾವು ಕಾರ್ಮಿಕರಲ್ಲ ಎಂಬ ಉತ್ತರ ಬಂದಿದೆ ಎಂದರು.
ಕೇಂದ್ರ ಸರ್ಕಾರದ ಮಾನದಂಡದಂತೆ ಆರೋಗ್ಯ ತಪಾಸಣೆ ಮಾಡಿರುವ ಪರೀಕ್ಷೆಗಳೆಲ್ಲವನ್ನೂ ಸೇರಿಸಿದರೆ 1300 ರೂ. ಆಗುತ್ತದೆ. ಆದರೆ, ಇಲ್ಲಿ 3 ಸಾವಿರ ದರ ನಿಗಧಿ ಮಾಡಲಾಗಿದೆ. ವಿಚಿತ್ರವೆಂದರೆ ಕಟ್ಟಡ ಕಾರ್ಮಿಕರ ಪಟ್ಟಿಯಲ್ಲಿ 13-14 ವರ್ಷದ ಮಕ್ಕಳ ಹೆಸರುಗಳು ಇವೆ. ಅವರಿಗೆ ಲೇಬರ್ ಐಡಿ ಕಾರ್ಡ್ ಕೊಟ್ಟಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ತಡೆಯಬೇಕಾದ ಇವರೇ, ಮಕ್ಕಳ ಹೆಸರಿನಲ್ಲಿ ಕಾರ್ಮಿಕ ಕಾರ್ಡ್ ಮಾಡಿದ್ದಾರೆ ಎಂದು ನವೀನ್ ಗಂಭೀರ ಆರೋಪ ಮಾಡಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ದೇಶದ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ತಮ್ಮ ಇಲಾಖೆಯಲ್ಲಿ ನಡೆಸಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಚಿತ್ರದುರ್ಗದ ಮುಗ್ದ ಜನರಿಗೆ ವಂಚಿಸುವ ಉದ್ದೇಶದಿಂದಲೇ ಸಂತೋಷ್ ಲಾಡ್ ಇಲ್ಲಿ ಕಾರ್ಯಕ್ರಮ ಮಾಡಿ ಹೋಗಿದ್ದಾರೆ ಎಂದರು.
ಇದನ್ನೂ ಓದಿ: ಫೀಜಿಯೋಥೆರಪಿಸ್ಟ್ ನೇಮಕಾತಿ | ಅರ್ಜಿ ಆಹ್ವಾನ
ಚ್ಯವನ್ ಪ್ರಾಶ್ ಮಂತ್ರಿ ಸಂತೋಷ್ ಲಾಡ್ ಈ ಹಿಂದೆ ಚ್ಯವನ್ ಪ್ರಾಶ್, ಐರನ್ ಮಾತ್ರೆ ಎಲ್ಲವನ್ನೂ ದುಪ್ಪಟ್ಟು ಬೆಲೆಗೆ ಖರೀದಿಸಿದ್ದರು. ಈ ಸರ್ಕಾರ ಪ್ರತಿ ಕಟ್ಟಡ ಕಾರ್ಮಿಕನ ಹೆಸರಿನಲ್ಲಿ 5-6 ಸಾವಿರ ವಂಚಿಸುತ್ತಿದೆ. ಕಟ್ಟಡ ರ್ಮಿಕರ ಕಲ್ಯಾಣ ಮಂಡಳಿ ಈ ಸರ್ಕಾರಕ್ಕೆ ಕರೆಯುವ ಹಸುವಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಆಗಿರುವ ಕಟ್ಟಡ ಕಾರ್ಮಿಕರ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಇದು ಸಿಬಿಐ ತನಿಖೆ ಆಗಬೇಕು. ರಾಜ್ಯದಲ್ಲಿ ನೂರಾರು ಕೋಟಿ ವಂಚನೆ ಆಗಿದೆ. ಸಂತೋಷ್ ಲಾಡ್ ರಾಜಿನಾಮೆ ಕೊಟ್ಟು ತನಿಖೆ ಎದುರಿಸಬೇಕು. ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಕಾರ್ಮಿಕರ ಪರವಾಗಿ ನಿಂತು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಸ್ಥಾನಕ್ಕೆ ಮೀರಿದ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದ ಸಚಿವ ಎನ್ನುವುದಕ್ಕಿಂತ ದೆಹಲಿಯಲ್ಲಿರುವ ವಿರೋಧ ಪಕ್ಷದ ನಾಯಕನಂತೆ ಪ್ರಧಾನಿಯನ್ನೂ ಟೀಕಿಸುತ್ತಾರೆ. ಗೋಮಾಂಸ ರಫ್ತು ಕುರಿತಂತೆ ಬಾಲಿಷ ಹೇಳಿಕೆ ನೀಡುತ್ತಾ ಪೋಸ್ಟರ್ ಬಾಯ್ ರೀತಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್, ಮುಖಂಡರಾದ ವೆಂಕಟೇಶ್ ಯಾದವ್, ಜಿ.ಎಚ್.ಮೋಹನ್, ನಾಗರಾಜ್ ಬೇದ್ರೆ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
