
CHITRADURGA NEWS | 21 JULY 2025
ಹೊಳಲ್ಕೆರೆ: ಮಗಳು ನಾಪತ್ತೆ ಪ್ರಕರಣದಲ್ಲಿ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಿಸಲು ಹಿಂದೇಟು ಹಾಕಿದರು ಎಂದು ಬೇಸತ್ತು ಪೊಲೀಸ್ ಠಾಣೆ ಆವರಣದಲ್ಲೇ ವಿಷ ಸೇವಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹೊಳಲ್ಕೆರೆಯಲ್ಲಿ ನಡೆದಿದೆ.
ಹೊಳಲ್ಕೆರೆ ತಾಲೂಕು ಗಿಲಿಕೇನಹಳ್ಳಿ ಮೂಲದ ಅಜ್ಜಯ್ಯ(50) ಮೃತ ವ್ಯಕ್ತಿ. ವಾರದ ಹಿಂದೆ ಮಗಳು ಕಾಣೆಯಾಗಿದ್ದು, (ಪ್ರೇಮ ವಿವಾಹ ಆಗಿರುವ ಶಂಕೆ), ಈ ಸಂಬಂಧ ಪೋಕ್ಸೋ ಕೇಸ್ ದಾಖಲಿಸಲು ಪಟ್ಟು ಹಿಡಿದಿದ್ದರು. ಆದರೆ, ಪೊಲೀಸರು ಮೇಜರ್ ಎಂದು ನಾಪತ್ತೆ ಪ್ರಕರಣ ದಾಖಲಿಸಿರು.
ಇದನ್ನೂ ಓದಿ: ಇಂದಿನ ಅಡಿಕೆ ಮಾರುಕಟ್ಟೆ | ಜುಲೈ 18 |ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಶಾಲಾ ದಾಖಲಾತಿ, ಆಧಾರ್ ಕಾರ್ಡ್ ಪ್ರಕಾರ ಹದಿನೆಂಟು ವರ್ಷ ತುಂಬಿದ್ದು, ಜನನ ಪ್ರಮಾಣ ಪತ್ರದಲ್ಲಿ ಹದಿನೆಂಟು ವರ್ಷಕ್ಕೆ ಎರಡು ತಿಂಗಳು ಬಾಕಿಯಿತ್ತು.
ಈ ಗೊಂದಲದ ಕಾರಣಕ್ಕೆ ಪೊಲೀಸರು ಕೇಸ್ ದಾಖಲಿಸಲು ಹಿಂದೇಟು ಹಾಕಿದ್ದರು. ಇದರಿಂದ ಬೇಸತ್ತ ಅಜ್ಜಯ್ಯ, ಭಾನುವಾರ ಠಾಣೆಯ ಬಳಿಯೇ ವಿಷ ಸೇವಿಸಿದ್ದಾರೆ. ತಕ್ಷಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಫೀಜಿಯೋಥೆರಪಿಸ್ಟ್ ನೇಮಕಾತಿ | ಅರ್ಜಿ ಆಹ್ವಾನ
ಇದರಿಂದ ಆಕ್ರೋಶಗೊಂಡ ಗಿಲಿಕೇನಹಳ್ಳಿ ಗ್ರಾಮದವರು, ಸಂಬಂಧಿಕರು ಹಾಗೂ ಸಾರ್ವಜನಿಕರು ಸೋಮವಾರ ಪೊಲೀಸ್ ಠಾಣೆ ಎದುರಿನಲ್ಲೇ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಆದರೆ, ಪೊಲೀಸರು ಶವ ತರದಂತೆ ಕಣಿವೆ ಬಳಿಯೆ ತಡೆದಿದ್ದರಿಂದ ನೂರಾರು ಜನ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಣಾಮ ಸೋಮವಾರ ಸಂಜೆ ನೂರಾರು ವಾಹನಗಳು ರಸ್ತೆಯಲ್ಲಿ ನಿಂತು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿತ್ತು.
ಇದನ್ನೂ ಓದಿ: ಜಾನುಕೊಂಡ ಬಳಿ ಆಟೋ ಚಾಲಕನ ಭೀಕರ ಹತ್ಯೆ | ಕೊಲೆ ಬಳಿಕ ಮೂಟೆ ಕಟ್ಟಿ ಎಸೆದು ಹೋದ ದುಷ್ಕರ್ಮಿಗಳು
ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
