CHITRADURGA NEWS | 25 APRIL 2025
ಚಿತ್ರದುರ್ಗ: ನಗರದ ದರ್ಗಾದಲ್ಲಿರುವ ಘೋರಿಯೊಂದು ಉಸಿರಾಡುತ್ತಿರುವ ಅಚ್ಚರಿಯ ಘಟನೆಗೆ ಚಿತ್ರದುರ್ಗ ಸಾಕ್ಷಿಯಾಗಿದೆ.

ಚಿತ್ರದುರ್ಗ ನಗರದ ಬಸವೇಶ್ವರ ಟಾಕೀಸ್ ಬಳಿಯಿರುವ ದರ್ಗಾದಲ್ಲಿರುವ ಅಂದಾಜು 250 ವರ್ಷಗಳ ಹಳೆಯ ಘೋರಿಗೆ ಹೊದಿಸಿದ್ದ ಚಾದರ ಮೇಲೆ ಕೆಳಗೆ ಉಬ್ಬಿ ಇಳಿಯುತ್ತಿದ್ದು ಉಸಿರಾಡುತ್ತಿರುವ ರೀತಿಯಲ್ಲಿ ಭಾಸವಾಗುತ್ತಿದೆ.
ಇದನ್ನೂ ಓದಿ: 61 ಸಾವಿರದತ್ತ ಅಡಿಕೆ ರೇಟ್
ಫಕೃಲ್ಲಾ ಶಾ ಖಾದ್ರಿ ಎಂಬುವವರ ಘೋರಿಯ ಮೇಲೆ ಹೊದಿಸಿರುವ ಚಾದರ ಎದೆಯ ಭಾಗದಲ್ಲಿ ಉಸಿರಾಟ ನಡೆಸುತ್ತಿರುವಂತೆ ಕಾಣಿಸುತ್ತಿರುವುದು ಜನರಿಗೆ ವಿಸ್ಮಯವಾಗಿ ಗೋಚರಿಸುತ್ತಿದೆ.
ಪವಾಡದಂತೆ ಭಾಸವಾಗುತ್ತಿರುವ ಈ ಘಟನೆಯನ್ನು ಕಣ್ತುಂಬಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಸದ್ಯಕ್ಕೆ ಮಹಾನಗರ ಪಾಲಿಕೆ ಆಗದು | ಪೌರಾಯುಕ್ತೆ ಎಂ.ರೇಣುಕಾ
ಚಿತ್ರದುರ್ಗದಲ್ಲಿ ಸೂಫಿ ಸಂತರು ಜೀವಿಸಿದ್ದರು. ಅವರ ಅನೇಕ ಸಮಾಧಿಗಳು ಇಲ್ಲಿ ಕಂಡು ಬರುತ್ತವೆ. ಅನೇಕ ಭಕ್ತರು ಇಲ್ಲಿಗೆ ನಡೆದುಕೊಳ್ಳುತ್ತಿದ್ದು, ಚಾದರ ಹೊದಿಸಿ, ಸಕ್ಕರೆ ಕೊಡಿಸಿ ಭಕ್ತಿ ಸಮರ್ಪಣೆ ಮಾಡುವುದು ಇದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
