
CHITRADURGA NEWS | 29 NOVEMBER 2025
ಚಿತ್ರದುರ್ಗ: ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ ಪ್ರಯುಕ್ತ ಗಣಪತಿ ಹಾಗೂ ಸುಬ್ರಮಣ್ಯ ದೇವಸ್ಥಾನ ಗರ್ಭಗುಡಿಯ ಗೋಪುರಕ್ಕೆ ಹಿತ್ತಾಳೆಯ ಕವಚ ಹೊದಿಸಲಾಯಿತು.
ಇದನ್ನೂ ಓದಿ: ಹೆಗ್ಗೆರೆ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಕ್ರಮ | ಜಿ.ಪಂ ಯೋಜನಾ ನಿರ್ದೇಶಕಿ ಕೆ.ಜಯಲಕ್ಷ್ಮಿ
ಶಿಲ್ಪಿಗಳಾದ ನಾಯಕನಹಟ್ಟಿ ತಿಪ್ಪೇಸ್ವಾಮಿ ಅವರ ಕುಟುಂಬ ಹೊದಿಕೆಯ ಕೆತ್ತನೆ ಮಾಡಿದ್ದು, ಅವರನ್ನು ಗೌರವಿಸಲಾಯಿತು.
ಅರ್ಚಕರಾದ ಸತೀಶ್ ಶರ್ಮ ಸಂಗಡಿಗರು ರಾಕ್ಷೋ ಹೋಮ, ಪ್ರಾಯಶ್ಚಿತ ಹೋಮ, ಅಘೋರ ರುದ್ರ ಹೋಮ , ಪಶುಪತಿ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಶಾಂತಿ ಹೋಮ, ಗಣಪತಿ ಮೂಲ ಮಂತ್ರ, ಅಷ್ಟ ದ್ರವ್ಯ ನಾರಿ ಕೇಶ ಹೋಮ, ಸುಬ್ರಹ್ಮಣ್ಯ ಮೂಲ ಮಂತ್ರ ಹೋಮ, ಮಹಾ ಕುಂಭ ಸ್ಥಾಪನ ಹೋಮವನ್ನು ನೆರವೇರಿಸಲಾಯಿತು.
ಕಳಸಾಭಿಷೇಕ ಪೂಜೆಯ ಮುಖಾಂತರ ದೇವಸ್ಥಾನದ ಕಳಸವನ್ನು ಉದ್ಘಾಟನೆ ಮಾಡಲಾಯಿತು.
ಇದನ್ನೂ ಓದಿ: ಕಚೇರಿಗಳಲ್ಲಿ ಕನ್ನಡ ಭಾಷೆಯನ್ನೇ ಬಳಸಿ | ಮಾಲತೇಶ ಮುದ್ದಜ್ಜಿ
ಈ ಸಂದರ್ಭದಲ್ಲಿ ಮಹಾಂತೇಶ್, ಉದ್ಯಮಿ ಉದಯ್ ಶೆಟ್ಟಿ, ಅಯ್ಯಪ್ಪ ಸ್ವಾಮಿ ಸಮಿತಿಯ ಅಧ್ಯಕ್ಷರಾದ ಶರಣ್ ಕುಮಾರ್, ಕಾರ್ಯದರ್ಶಿ ಎಂ.ಪಿ. ವೆಂಕಟೇಶ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ರಮೇಶ್ ಗುರುಸ್ವಾಮಿ ಹಾಗೂ ದೇವಸ್ಥಾನದ ಸದಸ್ಯರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

