
CHITRADURGA NEWS | 06 SEPTEMBER 2025
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಸೆ.09 ರಿಂದ 11 ರವರೆಗೆ ಚಿತ್ರದುರ್ಗ ಜಿಲ್ಲೆಯ ಆಸಕ್ತ ರೈತರಿಗೆ ಉದ್ಯಮಶೀಲತೆ ಸ್ಥಾಪನೆ ಹಾಗೂ ಬೆಳವಣಿಗೆ ಕುರಿತು ಮೂರು ದಿನಗಳ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ.
ಇದನ್ನೂ ಓದಿ: ಕುಂಚಿಟಿಗ ಮಠದಲ್ಲಿ ಸುಜ್ಞಾನ-ಸಂಗಮ ಮತ್ತು ಶಿಕ್ಷಕರ ದಿನಾಚರಣೆ
ಸೆ.09ರಂದು ಬೆಳಗ್ಗೆ 10ಕ್ಕೆ ಹಿರಿಯೂರು ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನದ ವಿಜ್ಞಾನಿಗಳಾದ ಡಾ.ಜೆ.ಎಂ.ಸರಸ್ವತಿ ಅವರು ಹೊಸದಾಗಿ ವಿವಿಧ ಪ್ರಾರಂಭಿಕ ಆದಾಯ ಉತ್ಪನ್ನ ಚಟುವಟಿಕೆಗಳು, ಅವುಗಳ ಆಯ್ಕೆಯ ಮಾನದಂಡ, ವಿಸ್ತøತ ವರದಿ ತಯಾರಿಕೆ, ಬೆಳವಣಗೆ ಕುರಿತು ವಿಷಯ ಮಂಡನೆ ಮಾಡುವರು. ಪಿಎಂಎಫ್‍ಎಂಇ ಯೋಜನೆಯಡಿ ವಿವಿಧ ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆ ಕುರಿತು ಮೋಹನ್ ಕುಮಾರ್ ಇವರು ಮಾಹಿತಿ ನೀಡುವರು.
ಸೆ.10ರಂದು ವಾಣಿವಿಲಾಸಪುರದ ಶ್ರೀರಾಮ ಆತ್ಮ ಆಹಾರ ಭದ್ರತಾ ಗುಂಪಿನ ಪಿ.ಸುಮತಿ ಅವರು, ವಿವಿಧ ಸ್ವಉದ್ಯೋಗ ಚಟುವಟಿಕೆಗಳಾದ ಸಿರಿಧಾನ್ಯಗಳ ಮೌಲ್ಯವರ್ಧನೆ ಆಧಾರಿತ ಉತ್ಪನ್ನಗಳು, ಬಾಳೆಕಾಯಿಯಿಂದ ತಯಾರಿಸುವ ಚಿಪ್ಸ್, ಉಪ್ಪಿನಕಾಯಿ, ಬಾಳೆ ಹುಡಿ, ಶೇಂಗಾ ಚಿಕ್ಕಿ, ಉಂಡೆ ಮತ್ತು ಶೇಂಗಾ ಬೆಣ್ಣೆ ಮಾಡುವ ವಿಧಾನದ ಕುರಿತು ತಿಳಿಸುವರು.
ಜೇನು ತಜ್ಞರಾದ ಶಾಂತವೀರಯ್ಯ ಅವರು ಜೇನು ಕೃಷಿ ಮತ್ತು ಜೇನು ಕೃಷಿಯ ಉಪ ಉತ್ಪನ್ನಗಳ ಕುರಿತು ಮಾಹಿತಿ ನೀಡುವರು.
ಇದನ್ನೂ ಓದಿ: ಸೆ.22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ | ವಿದ್ಯಾರ್ಥಿಗಳಿಂದ ಮನೆ ಮನೆ ಭೇಟಿ
ಸೆ.11ರಂದು ಮರಡಿದೇವಿಗೆರೆಯ ಸಾಂಪ್ರದಾಯಿಕ ಆಹಾರ ತಜ್ಞರಾದ ಡಾ. ಈಶ್ವರನ್ ಪಿ ತೀರ್ಥ ಅವರು ವಿವಿಧ ಮೌಲ್ಯವರ್ಧನೆ ಆಧಾರಿತ ಎಣ್ಣಗಾಯಿ, ಹರ್ಬಲ್ ಟೀ, ಕಷಾಯ, ಮಾಲ್ದಿ, ಮಾಲ್ಟ್, ಹೂವಿನ ಟೀ , ಮುಗಿಲಮೆಣಸಿನ ಕಾಯಿ ಚಟ್ನೀ ಕುರಿತು ವಿಷಯ ಮಂಡನೆ ಮಾಡುವರು.
ನಂತರ ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಪರಿಸಿರಿ ನ್ಯಾಚುರಲ್ಸ್, ಲಕ್ಕಿಹಳ್ಳಿಯ ಲೋಕೇಶ್ ರೈತರಿಗೆ ಮಾಹಿತಿ ನೀಡುವರು.
ಕೆನರಾ ಬ್ಯಾಂಕ್ ಚಿತ್ರದುರ್ಗದ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಲಹೆಗಾರ ತಿಪ್ಪೇಸ್ವಾಮಿ ಅವರು ಬ್ಯಾಂಕ್‍ನಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವರು.
ಆದ ಪ್ರಯುಕ್ತ ಆಸಕ್ತ 40 ಜನ ರೈತ ಭಾಂದವರು ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ತರಬೇತಿಯ ಸದುಪಯೋಗ ಪಡೆದು ಕೊಳ್ಳಬಹುದು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಮೊದಲು ನೋಂದಾವಣಿ ಮಾಡಿಕೊಂಡ 40 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಹಾಗೂ ಮುಖ್ಯಸ್ಥ ಆರ್.ರಜನೀಕಾಂತ ಕೋರಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
