ಮುಖ್ಯ ಸುದ್ದಿ
ಜಿಲ್ಲಾ ಪಂಚಾಯಿತಿ ಬಳಿ ತಾರಕಕ್ಕೇರಿದ ರೈತರ ಪ್ರತಿಭಟನೆ | ರಾಜ್ಯದ ಬೇರೆ ಬೇರೆ ಜಿಲ್ಲೆಯ ರೈತರು ಭಾಗೀ

CHITRADURGA NEWS | 06 MARCH 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಹಣ ಬಿಡುಗಡೆಗೆ ಒತ್ತಾಯಿಸಿ ರೈತರು ಜಿಲ್ಲಾ ಪಂಚಾಯಿತಿ ಎದುರುನಡೆಸುತ್ತಿರುವ ಧರಣಿ ತಾರಕಕ್ಕೇರಿದೆ.
ಜಿಪಂ ಗೇಟಿನಲ್ಲಿ ರೈತರು ಬೀಡು ಬಿಟ್ಟಿದ್ದು, ರೈತ ಸಂಘದ ರಾಜ್ಯದ್ಯಕ್ಷ ಎಚ್.ಆರ್.ಬಸವರಾಜಪ್ಪ, ಗೌರವಾಧ್ಯಕ್ಷ ಕುರುವ ಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ರೈತರು ಬಂದು ಭಾಗವಹಿಸುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಕೂಡಾ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಲು ಯತ್ನಿಸಿದರು.
ಆದರೆ, ರೈತರು ಸಂಸದರು ಬರಲಿ, ಅವರ ಜೊತೆಗೆ ಮಾತನಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಮತ್ತೊಂದೆಡೆ 11 ಗಂಟೆಗೆ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಆರಂಭವಾಗಬೇಕಿದ್ದ ದಿಶಾ ಸಭೆ 12 ಗಂಟೆಯಾದರೂ ಆರಂಭವಾಗಿಲ್ಲ.
ಪೊಲೀಸರು ಜಿಲ್ಲಾ ಪಂಚಾಯಿತಿಗೆ ಹೋಗುವ ರಸ್ತೆಗಳಿಗೆ ನಾಕಾ ಬಂದಿ ಹಾಕಿದ್ದು, ವಾಹನಗಳನ್ನು ಬಿಡುತ್ತಿಲ್ಲ.
