ಮುಖ್ಯ ಸುದ್ದಿ
ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರ ಆಗ್ರಹ

CHITRADURGA NEWS | 29 JANUARY 2025
ಚಿತ್ರದುರ್ಗ: ತಾಲೂಕು ಭರಮಸಾಗರ ಹೋಬಳಿಯ ಕೋಡಿಹಳ್ಳಿ ಗ್ರಾಮದ ಸುತ್ತಮುತ್ತ ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ಪೂರೈಹಿಸುತ್ತಿಲ್ಲ, ರೈತರ ಪಂಪ್ ಸೆಟ್ ಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರು ಬುಧವಾರ ಚಿತ್ರದುರ್ಗದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Also Read: ರಸ್ತೆಗಾಗಿ ಹಿಂದಕ್ಕೆ ಸರಿಯುತ್ತಿದೆ ಮೂರಂತಸ್ತಿನ ಕಟ್ಟಡ | ಹೈಡ್ರಾಲಿಕ್ ಜಾಕ್ ಮೂಲಕ ಕಟ್ಟಡ ಶಿಫ್ಟ್

ಸಮರ್ಪಕ ವಿದ್ಯುತ್ ಪೂರೈಹಿಸುತ್ತಿಲ್ಲವೆಂದು SO ಮತ್ತು AEE ಅವರಿಗೆ ತಿಳಿಸಿದರು, ಸಮಸ್ಯೆಯನ್ನು ಪರಿಹರಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಪ್ರತಿಭಟನೆಯಲ್ಲಿ ತಿಳಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬಸವರೆಡ್ಡಿ ಮಾತನಾಡಿ, ಭರಮಸಾಗರ ಸುತ್ತಮುತ್ತ 20 ವರ್ಷವಾದರೂ ಲೈನ್ ದುರಸ್ತಿ, ನಿರ್ವಹಣೆ ಮಾಡದೆ ನಿರ್ಲಕ್ಷ ವಹಿಸಿದ್ದರಿಂದ ಇಂದು ರೈತರು ವಿದ್ಯುತ್ ಇಲ್ಲದೆ ಕಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ಮಾತನಾಡಿ, ಸುಮಾರು ವರ್ಷದಿಂದ ಹಳೆ ಲೈನ್ ಗಳನ್ನು ಮುಂದುವರಿಸಿಕೊಂಡು ಅಧಿಕಾರಿಗಳ ಮುಂದಾಲೋಚನೆ ಇಲ್ಲದೆ ಇಂತಹ ತೊಂದರೆಗಳು ಆಗುತ್ತಿವೆ ಇಂಥವುಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
Also Read: ಹಾಲಿನ ದರ ಹೆಚ್ಚಿಸಲು ತುರ್ತು ಸಭೆ | ಶಿಮುಲ್ ನಿರ್ದೇಶಕ ಬಿ.ಆರ್.ರವಿಕುಮಾರ್
ರೈತ ಮುಖಂಡರ ಜಿಲ್ಲಾಧ್ಯಕ್ಷ ಡಿ.ಎಸ್ ಮಲ್ಲಿಕಾರ್ಜುನ್, ಜಿಲ್ಲಾ ನೀರಾವರಿ ಅಧ್ಯಕ್ಷ ಚಿಕ್ಕಪ್ಪನಹಳ್ಳಿ ನಾಗರಾಜ್, ಕೋಗುಂಡೆ ರವಿ ಕುಮಾರ್, ಬಾಗೇನಾಳ್ ತಿಪ್ಪೇಸ್ವಾಮಿ, ಮರ್ಲಹಳ್ಳಿ ರವಿಕುಮಾರ್, ಸುಲ್ತಾನಿಪುರ ರಾಮರೆಡ್ಡಿ, ಆಡನೂರು ಕುಮಾರ್, ಹುಣಸಿಕಟ್ಟೆ ಕಾಂತರಾಜ್, ಕೋಡಿಹಳ್ಳಿ ರುದ್ರಣ್ಣ, ಮುದ್ದಾಪುರ ನಾಗಣ್ಣ ಸೇರಿದಂತೆ ರೈತರು ಪಾಲ್ಗೊಂಡಿದ್ದರು.
