ಮುಖ್ಯ ಸುದ್ದಿ
ರಸ್ತೆಗಾಗಿ ಹಿಂದಕ್ಕೆ ಸರಿಯುತ್ತಿದೆ ಮೂರಂತಸ್ತಿನ ಕಟ್ಟಡ | ಹೈಡ್ರಾಲಿಕ್ ಜಾಕ್ ಮೂಲಕ ಕಟ್ಟಡ ಶಿಫ್ಟ್

CHITRADURGA NEWS | 29 JANUARY 2025
ಚಿತ್ರದುರ್ಗ: ಯಾವುದೇ ರಸ್ತೆ ಅಗಲೀಕರಣ, ಹೊಸ ರಸ್ತೆ ನಿರ್ಮಾಣ ಆಗುವಾಗ ರಸ್ತೆಗೆ ಅಡ್ಡವಾಗಿ ಅಥವಾ ಪಕ್ಕದಲ್ಲಿ ಮರ, ಕಟ್ಟಡ ಏನೇ ಇದ್ದರೂ ನೆಲಸಮ ಆಗುವುದು ಗೊತ್ತೇ ಇದೆ.
ಈ ಸಮಸ್ಯೆಗೆ ಪರಿಹಾರವಾಗಿ ಮುಂದುವರೆದ ದೇಶಗಳಲ್ಲಿ ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡುವ ತಂತ್ರಜ್ಞಾನವನ್ನೂ ಯೂಟ್ಯೂಬ್ ಮೂಲಕ ನೋಡಿರುತ್ತೇವೆ.

ಇದನ್ನೂ ಓದಿ: ಅಂತಾರಾಜ್ಯ ಬೈಕ್ ಕಳ್ಳನ ಬಂಧಿಸಿದ ಪೊಲೀಸರು | 10 ಬೈಕುಗಳು ಜಪ್ತಿ
ಆದರೆ, ರಸ್ತೆ ಅಗಲೀಕರಣಕ್ಕೆ ನೆಲಸಮವಾಗಬೇಕಿದ್ದ ಕಟ್ಟಡವೊಂದು ತುಸು ಹಿಂದೆ ಸರಿದು ನಿಲ್ಲುವುದನ್ನು ಎಲ್ಲಾದರೂ ಕೇಳಿದ್ದೀರಾ.
ಹೌದು, ಇಂಥದ್ದೊಂದು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ರಸ್ತೆ ವಿಸ್ತರಣೆಗಾಗಿ ನೆಲೆಸಮ ಅಥವಾ ರಸ್ತೆ ಹಾದು ಹೋಗುವಷ್ಟು ಕಟ್ಟಡವನ್ನು ಹೊಡೆಯಬೇಕಾಗಿತ್ತು. ಆದರೆ, ಇಡೀ ಕಟ್ಟಡವನ್ನೇ ಎತ್ತಿ ಹಿಂದಕ್ಕೆ ಇಡುವ ತಂತ್ರಜ್ಞಾನ ಇದಾಗಿದೆ.
ಹಿರಿಯೂರಿನ ಉದಯ ಹೋಟೆಲ್ ಸ್ಥಳಾಂತರ:
ಹೌದು, ಇಂಥದ್ದೊಂದು ಪ್ರಯೋಗ ಸದ್ದಿಲ್ಲದೆ ನಮ್ಮ ಜಿಲ್ಲೆಯ, ಹಿರಿಯೂರು ನಗರದಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ
ಹಿರಿಯೂರಿನ ಮುಖ್ಯ ರಸ್ತೆ ಅಗಲೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಧಿಟ್ಟ ತೀರ್ಮಾನ ಕೈಗೊಂಡ ನಂತರ, ರಸ್ತೆ ಅಗಲೀಕರಣಕ್ಕೆ ಅಡ್ಡವಾಗಿದ್ದ ಉದಯ ಹೋಟೆಲ್ ಸುಮಾರು 20 ಅಡಿ ಹಿಂದಕ್ಕೆ ಸರಿದು ನಿಲ್ಲುತ್ತಿದೆ.
ಚೆನ್ನೈ ಮೂಲದ ಸಂಸ್ಥೆಯೊಂದು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಇಡೀ ಕಟ್ಟಡವನ್ನು 20 ಅಡಿಯಷ್ಟು ಹಿಂದಕ್ಕೆ ಜರುಗಿಸುವ ಕೆಲಸ ಮಾಡುತ್ತಿದೆ.

ಹೈಡ್ರಾಲಿಕ್ ಜಾಕ್ ಬಳಸಿ ಕಟ್ಟಡವನ್ನು ಹಿಂದಕ್ಕೆ ತಳ್ಳುವ ಕಾಮಗಾರಿ
ಕಟ್ಟಡವನ್ನೇ ಎತ್ತಿ ಹಿಂದಕ್ಕೆ ಇಡುವುದಾದರೂ ಹೇಗೆ ?
ಹಿರಿಯೂರು ನಗರದ ಅವಧಾನಿ ಬಡಾವಣೆ ಮುಂಭಾಗದ ಉದಯ ಹೋಟೆಲ್ ಕಟ್ಟಡವನ್ನು ಯಥಾಸ್ಥಿತಿಯಲ್ಲಿಯೇ ಹಿಂದಕ್ಕೆ ತಳುವ ಕೆಲಸ ಆರಂಭವಾಗಿದ್ದು, ಈಗಾಗಲೇ ಸುಮಾರು 10 ಅಡಿ ಹಿಂದಕ್ಕೆ ಜರುಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ರಸ್ತೆ ಅಗಲೀಕರಣ ಬೇಡ | ನಗರದ ವಿಸ್ತರಣೆಗೆ ಒತ್ತು ಕೊಡಿ | AAP ಜಗದೀಶ್
ತಮಿಳುನಾಡಿನ ಚೆನ್ನೈ ಮೂಲದ ಪಾರಮೌಂಟ್ ಕಂಪನಿ ಹೈಡ್ರಾಲಿಕ್ ಜಾಕ್ ಬಳಸಿ ಕಟ್ಟಡವನ್ನು ಹಿಂದಕ್ಕೆ ತಳ್ಳುವ ಕಾಮಗಾರಿ ಕೈಗೆತ್ತಿಕೊಂಡಿದೆ.
ಹೋಟೆಲ್ ಕಟ್ಟಡ, ಪಿಲ್ಲರ್ ಯಾವುದಕ್ಕೂ ತೊಂದರೆಯಾಗದಂತೆ ಯಥಾಸ್ಥಿತಿಯಲ್ಲಿಯೇ 20 ಅಡಿ ಹಿಂದಕ್ಕೆ ಜರುಗಿಸಲು 22 ಲಕ್ಷ ರೂ.ಗಳಿಗೆ ಒಪ್ಪಂಧ ಮಾಡಿಕೊಳ್ಳಲಾಗಿದೆ.
37 ಅಡಿ ಉದ್ದ, 37 ಅಡಿ ಅಗಲದ ಮೂರು ಹಂತಸ್ತಿನ ಕಟ್ಟಡವನ್ನು 400ಕ್ಕೂ ಹೆಚ್ಚು ಹೈಡ್ರಾಲಿಕ್ ಜಾಕ್ ಬಳಸಿಕೊಂಡು ಹಿಂದಕ್ಕೆ ಸ್ಥಳಾಂತರಿಸಲಾಗುತ್ತಿದೆ. ಪ್ರತಿ ದಿನ 4 ರಿಂದ 5 ಅಡಿ ಹಿಂದಕ್ಕೆ ಜರುಗಿಸಲಾಗುತ್ತಿದೆ.
ಹೇಗಿರುತ್ತೆ ಕಟ್ಟಡ ತಳ್ಳುವ ಕಾಮಗಾರಿ:
ಲಾರಿಗಳಲ್ಲಿ ಹೈಡ್ರಾಲಿಕ್ ಜಾಕ್ ಲೋಡ್ ಬಂದಿದ್ದು, ಇದರೊಟ್ಟಿಗೆ ಮರದ ತುಂಡುಗಳು, ಆಂಗ್ಲರ್, ಕಬ್ಬಿಣದ ಶೀಟ್, ಕಬ್ಬಿಣದ ಲೀವರ್ ಮತ್ತಿತರೆ ವಸ್ತುಗಳನ್ನು ಬಳಸಿಕೊಂಡು ಈ ಕಾಮಗಾರಿ ಆರಂಭಿಸಲಾಗುತ್ತದೆ.
ಇದನ್ನೂ ಓದಿ: ಗಾಂಧಿ ವೃತ್ತದಿಂದ ಮೆದೇಹಳ್ಳಿ, ದಾವಣಗೆರೆ ರಸ್ತೆಗಳನ್ನು ವಿಸ್ತರಿಸಿ
ಕಟ್ಟಡದ ಒಳಭಾಗದಲ್ಲಿನ ಮಣ್ಣು ಹೊರಗೆ ಹಾಕಿ, ಮಧ್ಯದಲ್ಲಿರುವ ಪಿಲ್ಲರ್(ಕಂಬ)ಗಳಿಗೆ ಜಾಕ್ ಕೊಡಲಾಗುತ್ತದೆ. ನಂತರ ತಳಪಾಯದ ಸುತ್ತಲಿನ ಮಣ್ಣು ತೆಗೆದು ಕಟ್ಟಡಕ್ಕೆ ಇಂತಿಷ್ಟು ದೂರಕ್ಕೆ ಎಂಬಂತೆ ಕಬ್ಬಿಣದ ಆಂಗ್ಲರ್ ಹಾಕಿ ಅದರ ಮೇಲೆ ಒಂದೊಂದೇ ಜಾಕ್ ಅಳವಡಿಸಲಾಗುತ್ತದೆ.
ಕಟ್ಟಡದ ಕಿಟಕಿ, ಬಾಗಿಲು ಸೇರಿದಂತೆ ಖಾಲಿ ಜಾಗಗಳಿಗೆ ಇಟ್ಟಿಗೆಗಳಿಂದ ಗೋಡೆ ಕಟ್ಟಲಾಗುತ್ತದೆ. ಇನ್ನೂ ಪೂರ್ತಿ ಕಟ್ಟಡ ಹೋಗಿ ಕುಳಿತುಕೊಳ್ಳುವ ಜಾಗದಲ್ಲಿ ಹೊಸ ತಳಪಾಯ ಸಿದ್ಧಪಡಿಸಿಕೊಳ್ಳುತ್ತಾರೆ.
ಬಿಲ್ಡಿಂಗ್ ಹಿಂಭಾಗದಲ್ಲಿ ಕಬ್ಬಿಣದ ಆಂಗ್ಲರ್ ಗಳೊಂದಿಗೆ ಗಾಲಿಯಿರುವ ಜಾಕ್ ಅಳವಡಿಸಿಕೊಂಡು ಕಬ್ಬಿಣದ ಲೀವರ್ ತಿರುಗಿಸುವ ಮೂಲಕ ಕಟ್ಟಡವನ್ನು ಇಂಚಿಂಚೂ ಸರಿಸಲಾಗುತ್ತದೆ.
ಇದನ್ನೂ ಓದಿ: ಮೂರು ತಾಲೂಕುಗಳಿಗೆ ಬಿಜೆಪಿ ಅಧ್ಯಕ್ಷರ ಆಯ್ಕೆ
ಹಿರಿಯೂರಿನ ಉದಯ ಹೋಟೆಲ್ ಸ್ಥಳಾಂತರಕ್ಕಾಗಿ ಬಿಹಾರ ಮೂಲದ 15 ಜನ ಕಾರ್ಮಿಕರ ತಂಡ ಕೆಲಸ ಮಾಡುತ್ತಿದೆ.
