ಹೊಸದುರ್ಗ
ಹೊಸದುರ್ಗ ಆರ್.ಪಿ.ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

CHITRADURGA NEWS | 11 APRIL 2024
ಚಿತ್ರದುರ್ಗ: ಹೊಸದುರ್ಗ ಪಟ್ಟಣದಲ್ಲಿರುವ ಆರ್.ಪಿ. ರೆಸಿಡೆನ್ಶಿಯಲ್ (RP RESIDENTIAL COLLEGE) ಕಾಲೇಜು ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದು, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿದ್ದಾರೆ.
ಕಾಲೇಜಿನ 77 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆ ಹೊಂದಿದ್ದರೆ, 97 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಇದನ್ನೂ ಓದಿ: PUC ಫಲಿತಾಂಶ | ಕೋಟೆನಾಡಿನಲ್ಲಿ ಶೇ.72.92 ರಷ್ಟು ವಿದ್ಯಾರ್ಥಿಗಳು ಪಾಸ್
ಇಲ್ಲಿನ ವಿದ್ಯಾರ್ಥಿಗಳಾದ ಕಿರಣ್‍ಕುಮಾರ್ 580, ಕೆ.ಪಿ.ಪೂರ್ವಿತಾ 578, ಎಚ್.ಬಿ.ಲೋಕೇಶ್ 577, ಆರ್.ದರ್ಶನ್ ಉಪ್ಪಾರ್ 575 ಹಾಗೂ ಎಸ್.ಅರುಣ್ 572 ಅಂಕ ಗಳಿಸಿದ್ದಾರೆ.
ಉತ್ತಮ ಫಲಿತಾಂಶ ದಾಖಲಿಸಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರಮಣಪ್ರಸಾದ್, ಪ್ರಾಚಾರ್ಯರಾದ ಎಲ್.ಮನು ಅಭಿನಂದಿಸಿದ್ದಾರೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು. ಇಲ್ಲಿನ ಗುಣಮಟ್ಟದ ಉಪನ್ಯಾಸ ಈ ಫಲಿತಾಂಶಕ್ಕೆ ಕೈಗನ್ನಡಿಯಾಗಿದೆ.
| ರಮಣಪ್ರಸಾದ್, ಆರ್.ಪಿ.ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರು.
