ಮುಖ್ಯ ಸುದ್ದಿ
ಏಪ್ರಿಲ್ 1 ರಿಂದ 15ರ ವರೆಗೆ ಏಕನಾಥೇಶ್ವರಿ ಜಾತ್ರೆ

CHITRADURGA NEWS | 25 MARCH 2025
ಚಿತ್ರದುರ್ಗ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮೇಲುದುರ್ಗದಲ್ಲಿರುವ ಶ್ರೀ ಏಕನಾಥೇಶ್ವರಿ ಜಾತ್ರಾ ಮಹೋತ್ಸವ ಏಪ್ರಿಲ್ 1 ರಿಂದ 15ರ ವರೆಗೆ ನಡೆಯಿಲಿದೆ.
Also Read: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಮತ್ತಷ್ಟು ಹೆಚ್ಚಳ

ಏಪ್ರಿಲ್ 01ರಂದು ರಾತ್ರಿ 11.40ಕ್ಕೆ ಅಮ್ಮನವರ ಜಾತ್ರೆಯ ಸಾರು ಹಾಕುವ ಕಾರ್ಯಕ್ರಮ. ಏ.05 ರಂದು ಕಂಕಣಧಾರಣೆ, ಅಮ್ಮನವರಿಗೆ ಭಂಡಾರ ಪೂಜೆ ಮತ್ತು ರುದ್ರಾಭಿಷೇಕ. ಏ.06ರಂದು ರಾತ್ರಿ 8 ಗಂಟೆಯಿಂದ ರಾಜಬೀದಿಗಳಲ್ಲಿ ಸಿಂಹವಾಹಿನಿ ಉತ್ಸವ. ಏ.07ರಂದು ರಾತ್ರಿ 8 ಗಂಟೆಯಿಂದ ರಾಜಬೀದಿಗಳಲ್ಲಿ ಸರ್ಪೋತ್ಸವದೊಂದಿಗೆ ಭಕ್ತರ ಮನೆಗಳಲ್ಲಿ ಪೂಜಾ ಕಾರ್ಯಕ್ರಮ ರಾತ್ರಿ 8 ಗಂಟೆಯಿಂದ ರಾಜಬೀದಿಗಳಲ್ಲಿ ಮಯುರೋತ್ಸವ(ನವಿಲು ಉತ್ಸವ).
ಏ.8ರಂದು ರಾತ್ರಿ ಶ್ರೀ ಅಮ್ಮನವರಿಗೆ ಭಂಡಾರ ಪೂಜಾ ಕಾರ್ಯಕ್ರಮ. ಏ.9 ರಂದು ಬೆಳಿಗ್ಗೆ ಭಂಡಾರದ ಪೂಜೆ 9 ಗಂಟೆಗೆ ಅಮ್ಮನವರು ಕೆಳಗೆ ಇಳಿಯುವ ಕಾರ್ಯಕ್ರಮ. ಅರ್ಚಕರ ಮನೆಯಿಂದ ಮಕ್ಕಳಿಗೆ ಬೇವಿನ ಉಡಿಗೆ ಸೇವಾ ಅಶೋತ್ಸವದಲ್ಲಿ ಕಾಮನಬಾವಿ ಹೊಂಡದಲ್ಲಿ ಗಂಗಾಪೂಜೆಗೆ ಆಗಮಿಸಿ ಅಂದೇ ರಾತ್ರಿ 9 ಗಂಟೆಯಿಂದ ಶ್ರೀ ಅಮ್ಮನವರ ಉತ್ಸವ ಜಿಲ್ಲಾಧಿಕಾರಿಗಳವರ ಬಂಗಲೆಗೆ ಬಿಜಯುಂಗೈಯುವುದು. ಮಂಗಳಾರತಿ ಕೆಳಗೋಟೆ ಭಕ್ತಾದಿಗಳಿಂದ.
ಏ.10ರಂದು ಸಂಜೆ 7 ಗಂಟೆಗೆ ಕರುವಿನಕಟ್ಟೆ ಭಕ್ತಾಧಿಗಳಿಂದ ಸೇವೆ, ರಾಜಬೀದಿಗಳಲ್ಲಿ ಉತ್ಸವ. ಏ.11ರಂದು ಬೆಳಿಗ್ಗೆ 8 ಗಂಟೆಯಿಂದ ರಾಜ ಬೀದಿಗಳಲ್ಲಿ ಅಕ್ಟೋತ್ಸವ ಮತ್ತು ಹೂವಿನ ಉತ್ಸವ, ಮಹಾ ಮಂಗಳಾರತಿ.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಏ.12ರಂದು ಸಂಜೆ 5.30ಕ್ಕೆ ಜಾತ್ರಾ ಬಯಲಿನ ಪಾದಗಟ್ಟೆಯಲ್ಲಿ ‘ಸಿಡಿ ಉತ್ಸವ’ ಅಮ್ಮನವರಿಗೆ ಮಹಾಮಂಗಳಾರತಿ. ಏ.13ರಂದು ಸಂಜೆ 6.30ಕ್ಕೆ ಬೆಟ್ಟದ ಮೇಲೆ ಓಕಳಿ ಉತ್ಸವ ಜೋಗತಿ ಮತ್ತು ಜೋಗಪ್ಪ ಇವರಿಂದ. ಏ.15ರಂದು ಬೆಳಿಗ್ಗೆ 10.30ಕ್ಕೆ ಕಂಕಣ ವಿಸರ್ಜನೆ ಮತ್ತು ಗಂಗಾಪೂಜೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.
ದಿನಾಂಕ 11.04.2025ನೇ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಶ್ರೀ ಏಕನಾಥೇಶ್ವರಿ ಅಮ್ಮನವರ ಪಾದಗುಡಿಯ ಜಾತ್ರೆ ಬಯಲಿನ ದ್ವಾರಬಾಗಿಲಿನ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಈ ಮೇಲ್ಕಂಡ ಎಲ್ಲಾ ಸಕಲ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
