CHITRADURGA NEWS | 24 JUNE 2026
ಚಿತ್ರದುರ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರವು ವಿದ್ಯುತ್ ಕಂಪನಿಗಳನ್ನು ಖಾಸಗೀಕರಣಗೊಳಿಸಿ ಲಾಭ ಮಾಡಿಕೊಂಡು ಕೈತೊಳೆದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 24 | ಮೆಕ್ಕೆಜೋಳ, ರಾಗಿ ರೇಟ್
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ವಿರುದ್ಧ ರೈತರು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣದಿಂದ ಬೃಹತ್ ವಿದ್ಯುತ್ ಜಾಲ (Grid) ನಿರ್ಮಿಸಲಾಗಿದೆ. ಈಗ ಟಾಟಾ ಪವರ್ ಹೆಸರಿನಲ್ಲಿ ಜಾಹೀರಾತುಗಳು ಬರುತ್ತಿದ್ದು, ಸಾರ್ವಜನಿಕರು ಮತ್ತು ರೈತರು ಯಾವುದೇ ಕಾರಣಕ್ಕೂ ಇದನ್ನು ಖರೀದಿಸಬಾರದು ಎಂದು ಕರೆ ನೀಡಿದರು.
ವಿದ್ಯುತ್ ಕಂಪನಿಗಳು ಪ್ರಸ್ತುತ 60 ಸಾವಿರ ಕೋಟಿ ರೂ.ಗಳಷ್ಟು ನಷ್ಟದಲ್ಲಿದ್ದು, ಇದನ್ನು ಸರಿದೂಗಿಸಲು ಸರ್ಕಾರದ ಬಳಿ ಹಣವಿಲ್ಲದ ಕಾರಣ ಖಾಸಗೀಕರಣಕ್ಕೆ ಮುಂದಾಗಿದ್ದಾರೆ. ಇದು ಖಾಸಗಿ ಕಂಪನಿಗಳ ಜೊತೆಗಿನ ಒಳ ಒಪ್ಪಂದವಾಗಿದೆ.
ಇದನ್ನೂ ಓದಿ: ತೋಟಗಾರಿಕೆ ಬೆಳೆ | ಫಸಲ್ ಬಿಮಾ ಯೋಜನೆ ನೋಂದಣಿ ಆರಂಭ
ರೈತರಿಗೆ ನೀಡುವ ಮೂಲಸೌಕರ್ಯದಲ್ಲಿ ಲಾಭ-ನಷ್ಟ ಲೆಕ್ಕ ಹಾಕಬಾರದು, ಅದು ದೇಶದ ಅಭಿವೃದ್ಧಿಗೆ ಮಾಡುವ ಹೂಡಿಕೆ. ಒಂದು ವೇಳೆ ವಿದ್ಯುತ್ ಖಾಸಗಿಯವರ ಪಾಲಾದರೆ, ರೈತರು ಕೇವಲ ಕರೆಂಟ್ ಬಿಲ್ ಕಟ್ಟಲು ತಮ್ಮ ಹೊಲಗಳನ್ನೇ ಮಾರಿಕೊಳ್ಳಬೇಕಾದ ಪರಿಸ್ಥಿತಿ ಬರಲಿದೆ. ಕಳೆದ 3 ವರ್ಷಗಳಿಂದ ರೈತರಿಗೆ ಅಕ್ರಮ-ಸಕ್ರಮದಡಿ ಟಿಸಿ ಸಿಗುತ್ತಿಲ್ಲ, ರೈತರೇ 2-3 ಲಕ್ಷ ರೂ. ಖರ್ಚು ಮಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ತಪ್ಪಿಸುವ ಸಂಚು: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ಇರುತ್ತದೆ. ಆದರೆ ಖಾಸಗೀಕರಣ ಮಾಡುವುದರಿಂದ ಹಿಂದುಳಿದ ಹಾಗೂ ದಲಿತ ವರ್ಗದವರಿಗೆ ಸಿಗಬೇಕಾದ ಮೀಸಲಾತಿಯನ್ನು ತಪ್ಪಿಸುವ ದೊಡ್ಡ ಷಡ್ಯಂತ್ರ ಇದರ ಹಿಂದಿದೆ. ಪ್ರಸ್ತುತ ಸರ್ಕಾರದ ಗಮನ ಕೇವಲ ರಿಯಲ್ ಎಸ್ಟೇಟ್ ಮೇಲಿದೆಯೇ ಹೊರತು ರೈತರ ಮೇಲಲ್ಲ ಎಂದು ಅವರು ಟೀಕಿಸಿದರು.
ಆರೆಸ್ಸೆಸ್ಸ್ ಸಂಘ, ರಾಜಕೀಯ ಪಕ್ಷವಲ್ಲ :
ಕಾಂಗ್ರೆಸ್ ನಾಯಕರು ಆರ್.ಎಸ್.ಎಸ್. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಡೆಸುತ್ತಿರುವ ರಾಜಕೀಯ ಟೀಕೆಗಳ ವಿರುದ್ಧ ಹರಿಹಾಯ್ದ ಕಾರಜೋಳ, ನಿಮ್ಮ ಹೋರಾಟವೇನಿದ್ದರೂ ಬಿಜೆಪಿ, ಅಮಿತ್ ಶಾ ಅಥವಾ ಮೋದಿ ವಿರುದ್ಧ ಇರಲಿ.
ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ನೂತನ ಆಧಾರ್ ಸೇವಾ ಕೇಂದ್ರ
ವಿನಾಕಾರಣ ಆರ್.ಎಸ್.ಎಸ್. ಸಂಘಟನೆಯನ್ನು ಎಳೆದು ತರಬೇಡಿ. ಸಂಘವು ರಾಜಕೀಯ ಪಕ್ಷವಲ್ಲ, ಅದೊಂದು ಸ್ವಯಂಸೇವಾ ಸಂಘಟನೆ. ವರ್ಗ ರಹಿತ ಸಮಾಜ ನಿರ್ಮಾಣಕ್ಕಾಗಿ ಅಲ್ಲಿನ ಕಾರ್ಯಕರ್ತರು ಸನ್ಯಾಸಿಗಳಂತೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದರು.
ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿ ಅವರು ಸತತ 25 ವರ್ಷಗಳ ಕಾಲ (ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ) ಒಂದೇ ಒಂದು ಕಳಂಕವಿಲ್ಲದೆ ಆಡಳಿತ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕೇವಲ ಬಾಯಿ ಚಪಲವಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಖುಷಿಪಡಿಸಿ ಅಧಿಕಾರ ಹಿಡಿಯಲು ಹೀಗೆ ಮಾಡುತ್ತಿದ್ದಾರೆ ಎಂದು ಕುಟುಕಿದರು.
ರಾಹುಲ್ ಗಾಂಧಿ ‘ರಿಜೆಕ್ಟೆಡ್ ಗೂಡ್ಸ್’: ದೇಶದ ಜನತೆ ಈಗಾಗಲೇ ರಾಹುಲ್ ಗಾಂಧಿ ಅವರನ್ನು ತಿರಸ್ಕರಿಸಿದ್ದಾರೆ. ಅವರು ‘ರಿಜೆಕ್ಟೆಡ್ ಗೂಡ್ಸ್’ ಇದ್ದಂತೆ, ಅವರನ್ನು ಪ್ರಧಾನಿ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: 65 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ವೀರಾವೇಶದ ಭಾಷಣಗಳನ್ನು ನೆನಪಿಸಿದ ಕಾರಜೋಳ, ಹರಿಪ್ರಸಾದ್ ಅವರೇ, ನೀವು ರಾಜಕೀಯಕ್ಕೆ ಬಂದಿದ್ದು ತುರ್ತು ಪರಿಸ್ಥಿತಿಯ ರೂವಾರಿ ಸಂಜಯ್ ಗಾಂಧಿ ಅವರ ಮೂಲಕ. ಗಾಂಧಿ ಕುಟುಂಬದವರೇ ಆದ ಸಂಜಯ್ ಗಾಂಧಿ ಅವರ ಪುಣ್ಯತಿಥಿಯನ್ನು ಕಾಂಗ್ರೆಸ್ ಏಕೆ ಆಚರಿಸುವುದಿಲ್ಲ? ತಾಯಿಯ ಅಧಿಕಾರ ದುರ್ಬಳಕೆ ಮಾಡಿಕೊಂಡು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇತಿಹಾಸ ನಿಮ್ಮದು ಎಂದರು.
ನೆಹರೂ ಮನೆತನದವರನ್ನು ಬಿಟ್ಟರೆ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿ ಅದ್ಭುತ ಕೆಲಸ ಮಾಡಿದರು, ಅವರನ್ನು ಕಾಂಗ್ರೆಸ್ ಏಕೆ ಸ್ಮರಿಸುವುದಿಲ್ಲ? ಮನಮೋಹನ್ ಸಿಂಗ್ ಅವರನ್ನಾದರೂ ನೆನಪಿಸಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ ಅವರು, 140 ಕೋಟಿ ಜನತೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಧರ್ಮಗ್ರಂಥ ಎಂದು ಭಾವಿಸಿದ್ದಾರೆ. ಆದರೆ ಕಾಂಗ್ರೆಸ್ ಕೇವಲ ಮತಗಳಿಕೆಗಾಗಿ ಮಾತ್ರ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತದೆ. ಅವರು ಚುನಾವಣೆಗೆ ನಿಂತಾಗ ಸೋಲಿಸಿ, ಮಾನಸಿಕ ಹಿಂಸೆ ನೀಡಿದ್ದು ಇದೇ ಕಾಂಗ್ರೆಸ್” ಎಂದು ಇತಿಹಾಸ ಕೆದಕಿದರು.
ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮ ಪ್ರಸಾದ ಮುಖರ್ಜಿ ಬಲಿದಾನ ಸ್ಮರಣೆ
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಮುಖರಾದ ಜಿ.ಎಚ್.ಮೋಹನ್, ಡಾ.ಸಿದ್ದಾರ್ಥ್, ಪರಶುರಾಮ್, ನಾಗರಾಜ್ ಬೇದ್ರೆ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
