CHITRADURGA NEWS | 25 JUNE 2026
ಚಿತ್ರದುರ್ಗ: ಅಡಿಕೆ ಸಾಗಾಣೆ ಮಾಡುವ ಲಾರಿ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರೈತ ಸಂಘದಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ವಿರುದ್ಧ ಪ್ರತಿಭಟಿಸಿ, ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 25 | ಹತ್ತಿ ರೇಟ್ ಎಷ್ಟಿದೆ?
ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಪ್ರತಿಭಟಿಸಿದ ರೈತರು, ಅನುಮತಿಯೊಂದಿಗೆ ಅಡಿಕೆ ಸಾಗಾಣೆ ಮಾಡುವ ಲಾರಿ ತಡೆದು ಹಣಕ್ಕೆ ಬೇಡಿಕೆ ಇಟ್ಟು, ಹಲ್ಲೆ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಡಿಕೆ ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈವರೆಗೆ 65000 ರೂವರೆಗೆ ಇದ್ದ ಅಡಿಕೆ ಧಾರಣೆ ಸುಗ್ಗಿ ಕಾಲದಲ್ಲಿ ಪ್ರತಿ ಕ್ವಿಂಟಾಲ್‌ಗೆ 50 ಸಾವಿರಕ್ಕೆ ಕುಸಿದಿದೆ. ಇಂತ ಸಂದರ್ಭದಲ್ಲಿ ಉಲ್ಲಾಸ್ ಎಂಬ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಪವನ್ ಡಾಬಾ ಬಳಿ ಲಾರಿ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ಜಿ.ಎಸ್.ಟಿ ಮತ್ತು ಎಪಿಎಂಸಿ ತೆರಿಗೆಗಳನ್ನು ಪಾವತಿಸಿ ಅಧಿಕೃತ ರಹದಾರಿ ಪಡೆದು ಸಾಗಿಸುವ ಲಾರಿಗಳನ್ನು ತಡೆಯಲಾಗಿದೆ. ಚಾಲಕರ ಬಳಿ ನಿಮ್ಮ ರೆಕಾರ್ಡ್ಸ್ ಸರಿ ಇಲ್ಲ ಹಣ ಕೊಡಿ ಎಂದು ಕೇಳಿದ್ದಾನೆ. ಹಣ ಕೊಡದಿದ್ದಾಗ ಹಲ್ಲೆ ನಡೆಸಿದ್ದಾರೆ ಎಂದರು.
ಇದನ್ನೂ ಓದಿ: ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ | ಅರ್ಜಿ ಅಹ್ವಾನ
ಅಡಿಕೆ ಮಾಲೀಕರಾದ ಭದ್ರಾವತಿಯ ನಂಜುಂಡೇಶ್ವರ ಅರೆಕಾನಟ್ ಟ್ರೇಡರ್ಸ್‌ನ ಮಂಜುನಾಥ್ ಅವರು ರೈತ ಸಂಘದ ರಾಜ್ಯಾಧ್ಯಕ್ಷರಾದ ಎಚ್.ಆರ್.ಬಸವರಾಜಪ್ಪ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪೊಲೀಸ್ ತನಿಖಾಧಿಕಾರಿಗೆ ಮಾಹಿತಿ ನೀಡಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.
ನಕಲಿ ಜಿ.ಎಸ್.ಟಿ ಅಧಿಕಾರಿಯಂತೆ ವರ್ತನೆ ಮಾಡಿದ ಕಾರೇಹಳ್ಳಿ ಉಲ್ಲಾಸ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಲವು ರೈತರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಇದನ್ನೂ ಓದಿ: 25 ಜನ ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ರಾಜ್ಯ ಕಾರ್ಯದರ್ಶಿ ಕಬ್ಬಿಗೆರೆ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಮುಖಂಡರಾದ ನಿಜಲಿಂಗಪ್ಪ, ತಿಪ್ಪೇಸ್ವಾಮಿ, ಕಾಂತರಾಜ್, ಶಿವಕುಮಾರ್, ಮಾಂತೇಶ್, ರಂಗೇಗೌಡ, ಸಿದ್ದರಾಮಪ್ಪ, ಶಿವಕುಮಾರ್ ಮತ್ತು ಜಿಲ್ಲೆಯ ಹಲವು ಅಡಿಕೆ ಬೆಳೆಗಾರರು ಭಾಗವಹಿಸಿದ್ದರು.
ಹಲ್ಲೆ ನಡೆಸಿಲ್ಲ ಕಾರೇಹಳ್ಳಿ ಉಲ್ಲಾಸ್ ಸ್ಪಷ್ಟನೆ:
ಈ ಸಂಬಂಧ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ನಾನು ಯಾವುದೇ ಅಡಿಕೆ ಲಾರಿ ತಡೆದಿಲ್ಲ. ಚಾಲಕರ ಮೇಲೆ ಹಲ್ಲೆ ನಡೆಸಿಲ್ಲ. ಈ ಬಗ್ಗೆ ಯಾವುದೇ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದಿದ್ದಾರೆ.
ಜಿಲ್ಲೆಗೆ ಇಂಡೋನೇಷ್ಯಾ ಹಾಗೂ ಬರ್ಮಾ ಅಡಿಕೆ ಕಳ್ಳ ಮಾರ್ಗದಲ್ಲಿ ದಾಖಲೆ ಇಲ್ಲದೆ ಬರುತ್ತಿರುವ ಬಗ್ಗೆ ಜಿ.ಎಸ್.ಟಿ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಕಡಿಮೆ ಬೆಲೆಗೆ ಬೇರೆ ದೇಶದ ಅಡಿಕೆ ತಂದರೆ ನಮ್ಮ ರೈತರಿಗೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕೆ ನಾನು ಹೋರಾಟ ಮಾಡಿದರೆ ರೈತ ಸಂಘದವರಿಗೆ ಯಾಕೆ ನೋವಾಗಿದೆ ಗೊತ್ತಿಲ್ಲ. ನನ್ನ ವಿರುದ್ಧ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
