By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಹ್ಯಾಂಡಲ್‌ ಬಿಟ್ಟು ಸ್ಟಂಟ್‌ ಮಾಡಿ ರೀಲ್ಸ್‌ ಮಾಡಿದವನ ವಿರುದ್ಧ ದೂರು ದಾಖಲು
    10 hours ago
    ರಾಜ್ಯದ ವಿವಿಧ ಮಠಾಧೀಶರಿಂದ ತಿರುಮಲ ದರ್ಶನ
    10 hours ago
    ಗರ್ಭಪಾತ ತಪ್ಪಿಸಲು ಜಾಗೃತಿ
    ಅಸುರಕ್ಷಿತ ಗರ್ಭಪಾತ ತಪ್ಪಿಸಲು ಜಾಗೃತಿ ಅಗತ್ಯ | ಡಿಎಚ್‌ಒ
    11 hours ago
    'Swachhata Hi Seva' Campaign
    ಚಿತ್ರದುರ್ಗ ಕೋಟೆಯಲ್ಲಿ ಶ್ರಮದಾನ | ಸ್ವಚ್ಛತೆ ಕಾಪಾಡಲು ಜಾಗೃತಿ
    11 hours ago
    BK Hariprasad
    ರಾಜ್ಯದ 69 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್‌ ಜೋಡೋ ಯಾತ್ರೆ | ಬಿ.ಕೆ.ಹರಿಪ್ರಸಾದ್‌
    12 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    1 month ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    2 months ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    3 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    3 months ago
  • ತಾಲೂಕು
    ತಾಲೂಕುShow More
    Power outage on May 1
    ಸೆ.27ರಂದು ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
    4 days ago
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    3 weeks ago
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    4 weeks ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    1 month ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    3 weeks ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    4 weeks ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    4 weeks ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    3 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    4 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 29 | ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ
    1 day ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 28 | ಉದ್ಯೋಗಗಳಲ್ಲಿ ಕೆಲಸದ ಒತ್ತಡ, ಆರ್ಥಿಕ ಸಮಸ್ಯೆ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 27 | ಅನಿರೀಕ್ಷಿತ ವಿವಾದಗಳು, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 26 | ಉದ್ಯೋಗಿಗಳಿಗೆ ಬಡ್ತಿ, ದೂರದ ಪ್ರಯಾಣ ಬೇಡ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 25 | ಹಠಾತ್ ಆರ್ಥಿಕ ಲಾಭ, ಅರೋಗ್ಯದಲ್ಲಿ ಜಾಗೃತಿ ವಹಿಸಿ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 29 | ಹತ್ತಿ ರೇಟ್ ಎಷ್ಟಿದೆ?
    17 hours ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 28 | ಸೂರ್ಯಕಾಂತಿ, ಶೇಂಗಾ ರೇಟ್….
    2 days ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್
    4 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 25 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್ ಎಷ್ಟಿದೆ?
    5 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 24 | ಹತ್ತಿ ರೇಟ್
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    X MLA Umapathi Press meet
    ಮಲ್ಲಾಡಿಹಳ್ಳಿ ಅನಾಥೇವಾಶ್ರಮ | ಸಮಗ್ರ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು | ಮಾಜಿ ಶಾಸಕ ಎ.ವಿ.ಉಮಾಪತಿ
    20 hours ago
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    3 weeks ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    3 weeks ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    4 weeks ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    2 months ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    6 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    8 months ago
  • ಹೊಸದುರ್ಗ
    ಹೊಸದುರ್ಗShow More
    Power outage on May 1
    ಸೆ.27ರಂದು ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
    4 days ago
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    3 weeks ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    1 month ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    2 months ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    2 months ago
  • Life Style
    Life StyleShow More
    Washing hair with shampoo
    ಶಾಂಪೂಗೆ ಈ ಒಂದು ವಸ್ತು ಸೇರಿಸಿ ಕೂದಲು ತೊಳೆದರೆ, ಕೂದಲು ಉದುರುವುದು ಕಡಿಮೆಯಾಗುತ್ತದೆಯಂತೆ
    22 hours ago
    A plant under the stairs
    ಆರ್ಥಿಕ ನಷ್ಟ ಮತ್ತು ಒತ್ತಡವನ್ನು ಕಡಿಮೆ ಮಾಡಲು ಮೆಟ್ಟಿಲುಗಳ ಕೆಳಗೆ ಈ ಗಿಡಗಳನ್ನು ಎಂದಿಗೂ ನೆಡಬೇಡಿ
    23 hours ago
    Burn injury
    ಸುಟ್ಟ ಗಾಯದ ಮೇಲೆ ತಕ್ಷಣ ಐಸ್ ಇಟ್ಟರೆ ಏನಾಗುತ್ತದೆ ಗೊತ್ತಾ?
    2 days ago
    steaming your face
    ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನವಿದೆ ತಿಳಿಯಿರಿ
    2 days ago
    bacteria
    ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಕಡಿಮೆಯಾದರೆ, ಈ ಬದಲಾವಣೆಗಳು ದೇಹದಲ್ಲಿ ಕಂಡುಬರುತ್ತವೆಯಂತೆ
    3 days ago
Reading: ಜಿ.ಎಸ್. ಉಜ್ಜನಪ್ಪ ನಿರಂತರ ಚಟುವಟಿಕೆಯ ಚೇತನ | ಪ್ರೊ. ತಾರಿಣಿ ಶುಭದಾಯಿನಿ ಅಭಿಮತ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಜಿ.ಎಸ್. ಉಜ್ಜನಪ್ಪ ನಿರಂತರ ಚಟುವಟಿಕೆಯ ಚೇತನ | ಪ್ರೊ. ತಾರಿಣಿ ಶುಭದಾಯಿನಿ ಅಭಿಮತ

News Desk Chitradurga News
Last updated: 24 June 2026 17:53
News Desk Chitradurga News
3 months ago
Share
ಜಿ.ಎಸ್. ಉಜ್ಜನಪ್ಪ ಅವರ ನುಡಿನಮನ ಕಾರ್ಯಕ್ರಮ
ಜಿ.ಎಸ್. ಉಜ್ಜನಪ್ಪ ಅವರ ನುಡಿನಮನ ಕಾರ್ಯಕ್ರಮ
SHARE

CHITRADURGA NEWS | 24 JUNE 2026

ಚಿತ್ರದುರ್ಗ: ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್. ಉಜ್ಜನಪ್ಪ ಅವರು ಕೇವಲ ಜೀವಿಸಿದ್ದಷ್ಟೇ ಅಲ್ಲ, ತಮ್ಮ ಬದುಕಿನ ಪ್ರತಿ ನಿಮಿಷವನ್ನೂ ಸಾರ್ಥಕತೆಯಿಂದ ಆಸ್ವಾದಿಸಿದ ಅಪರೂಪದ ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದರು ಎಂದು ವಿಮರ್ಶಕಿ ಹಾಗೂ ಪ್ರಾಧ್ಯಾಪಕಿ ಪ್ರೊ. ತಾರಿಣಿ ಶುಭದಾಯಿನಿ ಅವರು ಬಣ್ಣಿಸಿದರು.

ಇದನ್ನೂ ಓದಿ: ವಿದ್ಯುತ್‌ ಖಾಸಗೀಕರಣಕ್ಕೆ ಬಿಡಬೇಡಿ | ರೈತರಿಗೆ ಗೋವಿಂದ ಕಾರಜೋಳ ಸಲಹೆ 

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿ.ಎಸ್. ಉಜ್ಜನಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ನಾನು ಪತ್ರಿಕಾ ಭವನಕ್ಕೆ ಬಂದ ತಕ್ಷಣವೇ ಉಜ್ಜನಪ್ಪನವರು ಇಲ್ಲೇ ಎಲ್ಲೋ ಕಣ್ಣೆದುರು ಕುಳಿತಿದ್ದಾರೆನಿಸಿತು. ದುರ್ಗದಲ್ಲಿ ನಡೆಯುವ ಸಣ್ಣ ಕಾರ್ಯಕ್ರಮ ಇರಲಿ, ದೊಡ್ಡ ಸಭೆ ಇರಲಿ; ಕೈಲೊಂದು ಪುಟ್ಟ ನೋಟ್‌ಬುಕ್, ಪೆನ್ ಹಿಡಿದು ಮುಂಚೂಣಿಯಲ್ಲಿ ಕುಳಿತುಕೊಳ್ಳುತ್ತಿದ್ದರು. 

ಎಲ್ಲರಿಗೂ ಆಪ್ತತೆಯಿಂದ ವಿಶ್ ಮಾಡಿ, ವರದಿಗಳನ್ನು ಸಿದ್ಧಪಡಿಸುತ್ತಿದ್ದ ಅವರ ಗಾಂಭೀರ್ಯತೆ ಮತ್ತು ಪ್ರೀತಿಯ ನಗು ನಮ್ಮ ಕಣ್ಣೆದುರೇ ಇದೆ. ಅತ್ಯಂತ ಕೋಪಿಷ್ಟರಾಗಿದ್ದರೂ ಮರುಕ್ಷಣವೇ ಎಲ್ಲವನ್ನೂ ಮರೆತು ಸಹಜವಾಗಿ ಮಾತನಾಡುವ ಉದಾರ ಗುಣ ಅವರದ್ದಾಗಿತ್ತು ಎಂದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 24 | ಮೆಕ್ಕೆಜೋಳ, ರಾಗಿ ರೇಟ್

ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗದ ಉಜ್ಜನಪ್ಪನವರು ಸಮಾಜದ ನೂರಾರು ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ದೊರೆತ ಸಂಪರ್ಕಗಳನ್ನು ಬಳಸಿಕೊಂಡು, ಬಡ ಯುವಕರಿಗೆ ಕೆಲಸ ಸಿಗುವಂತೆ ಮಾಡಿದರು. 

ಸ್ವತಃ ತಮ್ಮ ಮಕ್ಕಳಿಗೆ ಸೌಲಭ್ಯ ಕೊಡಿಸಿಕೊಳ್ಳಲು ಸಂಕೋಚಪಡುತ್ತಿದ್ದ ಅವರು, ಇತರರಿಗೆ ಸಹಾಯ ಮಾಡುವಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ. ರಾಜಸಭಾ ಸದಸ್ಯರು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಬಳಿ ಪತ್ರ ಬರೆಸಿಕೊಟ್ಟು ನೆರವಾಗುತ್ತಿದ್ದ ಸಮಾಜ ಸೇವಕ ಅವರಲ್ಲಿದ್ದರು.

ಅವರ ವೃತ್ತಿಜೀವನ ಮತ್ತು ಆರ್ಥಿಕ ಸ್ಥಿತಿ ನಿರಂತರ ಏರಿಳಿತಗಳಿಂದ ಕೂಡಿತ್ತು. ಆದರೂ ದುಡ್ಡು ಬಂದಾಗ ಬೀಗದೆ, ಬಡತನ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದರು. ಎಂತಹ ಕಷ್ಟದ ಸಂದರ್ಭದಲ್ಲೂ ಪ್ರೀತಿಯ ಮೌಲ್ಯಗಳಿಗೆ ಜಾಗವಿದೆ ಎಂಬುದನ್ನು ಅವರು ಸದಾ ಸಾಬೀತುಪಡಿಸುತ್ತಿದ್ದರು. 

ಇದನ್ನೂ ಓದಿ: ತೋಟಗಾರಿಕೆ ಬೆಳೆ | ಫಸಲ್ ಬಿಮಾ ಯೋಜನೆ ನೋಂದಣಿ ಆರಂಭ

ನನ್ನ ಪತಿಯನ್ನು ಕಳೆದುಕೊಂಡು ನಾನು ಕಂಗಾಲಾಗಿದ್ದಾಗ, ನನ್ನ ವಾಟ್ಸಾಪ್ ಸ್ಟೇಟಸ್‌ಗಳನ್ನು ನೋಡಿ ‘ಆಯಿತು, ಮುಂದೆ ಹೋಗಬೇಕು ನೀನು. ಮುಂದಿನ ಬದುಕನ್ನು ನೋಡಬೇಕು’ ಎಂದು ಧೈರ್ಯ ತುಂಬಿದ ಪ್ರೀತಿಯ ತಂದೆಯ ರೂಪ ಅವರದ್ದಾಗಿತ್ತು. ಕೊನೆಯುಸಿರೆಳೆಯುವ ಎರಡು ದಿನಗಳ ಮುನ್ನವೂ ಹೂವಿನ ಚಿತ್ರಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ಚೈತನ್ಯ ತುಂಬಿದ್ದರು.

ಉಜ್ಜನಪ್ಪನವರ ಸೃಜನಶೀಲತೆ ಅಡಗಿರುವುದೇ ಅವರ ಹಾಡಿನ ವ್ಯಕ್ತಿತ್ವದಲ್ಲಿ. ಕುವೆಂಪು ಅವರ ‘ಕಳೆದುದಾರಾತ್ರಿ ಓ ಲಕ್ಷ್ಮಣ…’ ಸಾಲನ್ನು ಅವರು ಭಾವಪೂರ್ಣವಾಗಿ ಹಾಡಿದರೆ ಇಡೀ ಪರಿಸರ ಮೌನವಾಗುತ್ತಿತ್ತು. ಬಿ. ಎಂ. ಶ್ರೀ ಅವರ ‘ಏರಿಸಿ ಹಾರಿಸಿ ಕನ್ನಡದ ಬಾವುಟ’ ಹಾಡನ್ನು ಅವರು ವಿಭಿನ್ನವಾಗಿ ಸಂಯೋಜಿಸಿ ಹಾಡುತ್ತಿದ್ದರು. 

ಹಾಗೆಯೇ ಜಿ.ಎಸ್. ಶಿವರುದ್ರಪ್ಪ ಅವರ ‘ಸದಾ ಹೊಯ್ಯುವ ಮಳೆ ನನ್ನ ನಿನ್ನ ನಡುವೆ’ ಕವಿತೆಯನ್ನು ಅವರು ಹಾಡುತ್ತಿದ್ದ ರೀತಿ ಅನನ್ಯವಾಗಿತ್ತು. ಅದನ್ನು ಕೇಳಿ ಸ್ವತಃ ಜಿ.ಎಸ್.ಎಸ್ ಅವರು ಬೆರಗಾಗಿ, ಚಿತ್ರದುರ್ಗದಲ್ಲಿ ಇಂತಹ ಅದ್ಭುತ ಹಾಡುಗಾರನಿದ್ದಾನೆಯೇ ಎಂದು ಉಜ್ಜಪ್ಪನವರನ್ನು ಸನ್ಮಾನಿಸಿದ್ದರು.

ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ನೂತನ ಆಧಾರ್ ಸೇವಾ ಕೇಂದ್ರ | AC ಡಾ.ಕೆ.ಜೆ.ಕಾಂತರಾಜ್ ಉದ್ಘಾಟನೆ 

ಅವರ ಬದುಕು ನಮಗೆಲ್ಲರಿಗೂ ಚೈತನ್ಯದ ಚಿಲುಮೆ. ನಮ್ಮ ನಡುವೆ ಭೌತಿಕವಾಗಿ ಇಲ್ಲದಿದ್ದರೂ, ಅವರು ಬಿಟ್ಟುಹೋಗಿರುವ ಸಾಹಿತ್ಯಿಕ, ಸಾಂಸ್ಕೃತಿಕ ಮೌಲ್ಯಗಳು ಸದಾ ಹಸಿರಾಗಿರುತ್ತವೆ ಎಂದು ತಾರಿಣಿ ಶುಭದಾಯಿನಿ ನುಡಿದರು.

ನಿವೃತ್ತ ಪ್ರಾಧ್ಯಾಪಕ ಎಂ.ಜಿ.ರಂಗಸ್ವಾಮಿ ಮಾತನಾಡಿ, ಉಜ್ಜನಪ್ಪ ಅವರ ಬರವಣಿಗೆಯಲ್ಲಿ ಬಯಲು ಸೀಮೆಯ ಶೈಲಿಯಿತ್ತು. ತಾವು ಹುಟ್ಟಿ ಬೆಳೆದ ಗೌನಹಳ್ಳಿ ಕುರಿತು ಅವರ ನೆನಪಿನಾಳದಿಂದ ಅನೇಕ ಮಾಹಿತಿಗಳನ್ನು ದಾಖಲಿಸಿ ಕಾದಂಬರಿ ರಚಿಸಿದ್ದರು. ಇದನ್ನು ಓದುಗ ಹಾಗೂ ವಿಮರ್ಶಕ ವಲಯ ಗ್ರಾಮ ಭಾರತದ ಚಿತ್ರಣ ಎಂದು ಪ್ರಶಂಸಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿನಾಯಕ ತೊಡರನಾಳು, ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಂ.ವೀರೇಶ್, ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಲಪತಿ, ಹಿರಿಯ ಪತ್ರಕರ್ತ ಹೆಂಜಾರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಬಾ.ಮ.ಬಸವರಾಜಯ್ಯ, ಜಿ.ಎಸ್.ಉಜ್ಜಿನಪ್ಪನವರ ಪುತ್ರಿ ಹೇಮಾ ಉಪಸ್ಥಿತರಿದ್ದರು.

ಹರೀಶ್ ಪ್ರಾರ್ಥಿಸಿದರು. ಪತ್ರಕರ್ತರಾದ ರವಿ ಉಗ್ರಾಣ ಸ್ವಾಗತಿಸಿದರು. ತಿಪ್ಪೇಸ್ವಾಮಿ ನಾಕೀಕೆರೆ ನಿರೂಪಿಸಿದರು.

ಜಿ.ಎಸ್‌.ಉಜ್ಜನಪ್ಪ ಹೆಸರಿನಲ್ಲಿ ದತ್ತಿ ಪ್ರಶಸ್ತಿ:

ಹೊಸದುರ್ಗದ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡುತ್ತಾ, ಜಿ.ಎಸ್‌.ಉಜ್ಜನಪ್ಪ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ನೀಡಲು ಮಠದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಯಾರಲ್ಲಿಯೂ ಏನನ್ನು ಬೇಡದೆ ವಿಭಿನ್ನವಾಗಿ ಬದುಕಿದ ಜಿ.ಎಸ್.ಉಜ್ಜನಪ್ಪನವರು ಅನೇಕರಿಗೆ ಮಾರ್ಗದರ್ಶಕರಾಗಿದ್ದರು. ಪತ್ರಕರ್ತರು, ಸ್ವಾಮೀಜಿಗಳಿಗೆ ಜಾತಿ ಇರಬಾರದು. ಅನರ್ಹರಿಗೆ ಕೆಲವೊಮ್ಮೆ ಪ್ರಶಸ್ತಿಗಳು ಸಿಗುತ್ತದೆ. ನಿಜವಾದ ಅರ್ಹರನ್ನು ಯಾರು ಗುರುತಿಸುವುದಿಲ್ಲ. ಇದಕ್ಕೆಲ್ಲಾ ಜಾತಿಯ ಪ್ರಭಾವ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಮೀಜಿಗಳಿಂದ ಹಿಡಿದು ಎಲ್ಲರಿಗೂ ಮಾರ್ಗದರ್ಶಕರು ಬೇಕು. ಪ್ರಗತಿಪರ, ಸಮಾಜದ ಪರ, ಜೀವಪರವಾಗಿ ಬದುಕಿದ ಸಾಂಸ್ಕøತಿಕ ನಾಯಕರನ್ನು ಸ್ಮರಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಬೇಕು. ಮೃತಪಟ್ಟಾಗ ಅವರ ಆಸ್ತಿ ವರ್ಗಾವಣೆ ಆಗುತ್ತದೆ. ಆದರೆ, ಆದರ್ಶಗಳು ಆಗುತ್ತಿಲ್ಲ ಎಂದರು.

ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಜಿ.ಎಸ್‌.ಉಜ್ಜನಪ್ಪ ಜೊತೆ ನಮ್ಮದು ಪೂರ್ವಾಶ್ರಮದಿಂದಲೂ ಸಂಪರ್ಕವಿದೆ. ಚಿಕ್ಕವರ ಜೊತೆ ಚಿಕ್ಕವರಾಗಿ, ದೊಡ್ಡವರ ಜೊತೆ ದೊಡ್ಡವರಾಗಿ ಬದುಕಿದ ಜಿ.ಎಸ್.ಉಜ್ಜಿನಪ್ಪ ಅವರಲ್ಲಿ ಅಹಂ ಇರಲಿಲ್ಲ. ನನಗೆ ಮಾರ್ಗದರ್ಶಕರಾಗಿದ್ದರು. ಬದುಕಿರುವತನಕ ಒಂದು ದಿನವೂ ಯಾರಿಗೂ ತೊಂದರೆ ಕೊಟ್ಟವರಲ್ಲ ಎಂದು ಸ್ಮರಿಸಿದರು.

ಜಿ.ಎಸ್.ಉಜ್ಜನಪ್ಪ ಅವರ ಅಗಲಿಕೆಯಿಂದ ಮುರುಘಾಮಠ ಒಬ್ಬ ಸದ್ಬಕ್ತನನ್ನು ಕಳೆದುಕೊಂಡಿದೆ. ಜಿ.ಎಸ್‌.ಉಜ್ಜನಪ್ಪ ಅವರ ಕುರಿತಾಗಿ ಮಾಹಿತಿ ಸಂಗ್ರಹಿಸಿ ಕಿರುಹೊತ್ತಿಗೆ ರೂಪದಲ್ಲಿ ಸ್ಮರಣ ಸಂಚಿಕೆ ತಂದರೆ ಅದನ್ನು ಮುರುಘಾ ಮಠದಿಂದ ಪ್ರಕಟಿಸುತ್ತೇವೆ.

| ಡಾ.ಬಸವಕುಮಾರ ಸ್ವಾಮೀಜಿ, ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsNudinamanaUjjinappaಉಜ್ಜಿನಪ್ಪಚಿತ್ರದುರ್ಗಚಿತ್ರದುರ್ಗ ನ್ಯೂಸ್ನುಡಿನಮನ
Share This Article
Facebook Email Print
Previous Article ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು ವಿದ್ಯುತ್‌ ಖಾಸಗೀಕರಣಕ್ಕೆ ಬಿಡಬೇಡಿ | ರೈತರಿಗೆ ಗೋವಿಂದ ಕಾರಜೋಳ ಸಲಹೆ 
Next Article ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ರೈತರಿಗೆ ಗುಡ್ ನ್ಯೂಸ್ | ರಸಗೊಬ್ಬರ ಮಾರಾಟ ಅಪ್ ಜಾರಿ | ನಾಳೆ ಚಾಲನೆ 
Leave a Comment

Leave a Reply Cancel reply

Your email address will not be published. Required fields are marked *

ಹ್ಯಾಂಡಲ್‌ ಬಿಟ್ಟು ಸ್ಟಂಟ್‌ ಮಾಡಿ ರೀಲ್ಸ್‌ ಮಾಡಿದವನ ವಿರುದ್ಧ ದೂರು ದಾಖಲು
ಮುಖ್ಯ ಸುದ್ದಿ
ರಾಜ್ಯದ ವಿವಿಧ ಮಠಾಧೀಶರಿಂದ ತಿರುಮಲ ದರ್ಶನ
ಮುಖ್ಯ ಸುದ್ದಿ
ಗರ್ಭಪಾತ ತಪ್ಪಿಸಲು ಜಾಗೃತಿ
ಅಸುರಕ್ಷಿತ ಗರ್ಭಪಾತ ತಪ್ಪಿಸಲು ಜಾಗೃತಿ ಅಗತ್ಯ | ಡಿಎಚ್‌ಒ
ಮುಖ್ಯ ಸುದ್ದಿ
'Swachhata Hi Seva' Campaign
ಚಿತ್ರದುರ್ಗ ಕೋಟೆಯಲ್ಲಿ ಶ್ರಮದಾನ | ಸ್ವಚ್ಛತೆ ಕಾಪಾಡಲು ಜಾಗೃತಿ
ಮುಖ್ಯ ಸುದ್ದಿ

Categories

Dina Bhavishya Life Style ಅಡಕೆ ಧಾರಣೆ ಕ್ರೈಂ ಸುದ್ದಿ ಚಳ್ಳಕೆರೆ ತಾಲೂಕು ನಿಧನವಾರ್ತೆ ಮಾರುಕಟ್ಟೆ ಧಾರಣೆ ಮುಖ್ಯ ಸುದ್ದಿ ಮೊಳಕಾಳ್ಮೂರು ಲೋಕಸಮರ 2024 ಸಂಡೆ ಸ್ಪಷಲ್ ಹಿರಿಯೂರು ಹೊಳಲ್ಕೆರೆ ಹೊಸದುರ್ಗ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up