CHITRADURGA NEWS | 17 FEBRUARY 2026
ಚಿತ್ರದುರ್ಗ: ಅಂಗವಿಕಲರ ನಡೆ ರಾಜಕೀಯ ಕಡೆ ಅಭಿಯಾನ ಬೈಕ್ ರ್ಯಾಲಿ ಫೆ.19 ರಂದು ಬೀದರ್ ಜಿಲ್ಲೆ ಬಸವ ಕಲ್ಯಾಣದಿಂದ ಹೊರಟು 23 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಖಜಾಂಚಿ ಎಂ.ತಿಪ್ಪಮ್ಮ ತಿಳಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 16 ಫೆಬ್ರವರಿ | ರಾಶಿ, ಗೊರಬಲು, ಸಿಪ್ಪೆಗೋಟು ಇನ್ನಿತರೆ ಅಡಿಕೆ ರೇಟ್
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಾವಿರ ಬೈಕ್‍ಗಳಲ್ಲಿ ಬೆಂಗಳೂರು ಚಲೋ ರ್ಯಾಲಿ ಹೊರಡಲಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಕಲಚೇತನರಿಗೆ ಶೇ. 5 ರಷ್ಟು ಮೀಸಲಾತಿ ನೀಡಬೇಕು.
ರಾಜ್ಯ ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್‍ನಲ್ಲಿ ಅಂಗವಿಕಲರಿಗೆ ಬಜೆಟ್ ದ್ವಿಗುಣಗೊಳಿಸಬೇಕು. ಶಕ್ತಿ ಯೋಜನೆಯಡಿ ವಿಶೇಷ ಚೇತನ ಮಹಿಳೆಯರಿಗೆ ಒದಗಿಸಿರುವ ಉಚಿತ ಬಸ್ ಪಾಸ್ ಸೌಲಭ್ಯಗಳನ್ನು ಪುರುಷ ವಿಶೇಷ ಚೇತನರಿಗೂ ವಿಸ್ತರಿಸಬೇಕು.
ವಿಶೇಷ ಚೇತನರಿಗೆ ಪ್ರತಿ ತಿಂಗಳು ನೀಡುತ್ತಿರುವ 1400 ರೂ.ಮಾಶಾಸನವನ್ನು ಆರು ಸಾವಿರ ರೂ.ಗಳಿಗೆ ಹೆಚ್ಚಿಸಿ ಪ್ರತಿ ತಿಂಗಳು ಹತ್ತನೆ ತಾರೀಖಿನೊಳಗೆ ವಿಶೇಷ ಚೇತನರ ಕೈಸೇರಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಬಾಂಬ್ ಬೆದರಿಕೆ ಕರೆ | ಚಿತ್ರದುರ್ಗದಲ್ಲಿ ಪೊಲೀಸರ ಅಲರ್ಟ್
ಅನೇಕ ವರ್ಷಗಳಿಂದಲೂ ನಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಾ ಬರುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ. 2000 ಇಸವಿಯಲ್ಲಿ ವಿಕಲಚೇತನರಿಗೆ ಬಸ್ ಪಾಸ್ ನೀಡಿದ್ದ ಸರ್ಕಾರ ನಂತರ ಆರು ನೂರು ರೂ.ಗಳನ್ನು ಕಟ್ಟಿಸಿಕೊಂಡು ಪಾಸ್ ನೀಡುತ್ತಿದೆ. ಇದು ನಿಲ್ಲಬೇಕು.
ಬೆಳಗಾಂ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬಿಜಾಪುರ, ಬಾಗಲಕೋಟೆ, ಕೂಡ್ಲಿಗಿ, ಹೊಸಪೇಟೆ, ಗುಲ್ಬರ್ಗ, ಬೀದರ್, ಯಾದಗಿರಿ, ಕೊಪ್ಪಳ ಸೇರಿದಂತೆ ಅಷ್ಟ ದಿಕ್ಕುಗಳಿಂದ ಬೈಕ್‍ರ್ಯಾಲಿ ಬೆಂಗಳೂರಿಗೆ ಹೊರಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋಟೆನಾಡು ಸಜ್ಜು | ಕಂಗೊಳಿಸುತ್ತಿವೆ ಕನ್ನಡ ಬಾವುಟಗಳು
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಜಿಲ್ಲಾಧ್ಯಕ್ಷ ಪಾಪಣ್ಣ ಎಂ.ಎಸ್. ತಾಲ್ಲೂಕು ಅಧ್ಯಕ್ಷ ಪರಶುರಾಂ, ಕಾರ್ಯದರ್ಶಿ ರೇಷ್ಮಭಾನು, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸುಜಾತ, ಸಲಹಾ ಸಮಿತಿ ಸದಸ್ಯ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
