
ಚಿತ್ರದುರ್ಗ ನ್ಯೂಸ್.ಕಾಂ: ಬಸವಕಲ್ಯಾಣವನ್ನು ಸಾಕ್ಷಾತ್ಕರಿಸಿದ ಮಠ ಕರ್ನಾಟಕದಲ್ಲಿ ಇದೆ ಎನ್ನುವುದಾದರೆ ಅದು ಚಿತ್ರದುರ್ಗದ ಮುರುಘಾಮಠ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ನಿತ್ಯ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಚಾರಿಕವಾಗಿ ಹೇಗೆ ಬೆಳೆಯಬೇಕೆಂದು ಹೇಳಿದ ಮಠ ಮುರುಘಾಮಠ. ಅನೇಕ ರೀತಿಯ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶಿಕ್ಷಣವನ್ನು ಕೊಡುವ ಮಠ ಇದಾಗಿದೆ ಎಂದು ಶ್ಲಾಘಿಸಿದರು.
ಪ್ರಾಣಿ ಪಕ್ಷಿಗಳಲ್ಲಿರುವ ಪರೋಪಕಾರಿ ಗುಣ ಮನುಷ್ಯನಲ್ಲಿ ಏಕಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದಾಸೋಹ ಪರಿಕಲ್ಪನೆ ಕರ್ನಾಟಕದಲ್ಲಿದೆ. ಕಾರಣ ಬಸವಾದಿ ಶರಣರು ಉದಯಿಸಿದ ನಾಡು ನಮ್ಮದು. ನಾವೆಲ್ಲಾ ಪುಣ್ಯವಂತರು ಎಂದರು.
ಪಕ್ಕದ ಮನೆಯವರು ಉಪವಾಸವಿದ್ದಾಗ ನೀನು ಊಟ ಮಾಡಬೇಡ. ಅವರಿಗೂ ಒಂದಿಷ್ಟು ಸಹಾಯ ಮಾಡಿ ಉಣ್ಣಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಅಸಹಾಯಕ ಶೋಷಿತ ಸಮುದಾಯಗಳನ್ನು ಒಟ್ಟುಗೂಡಿಸಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದರು. ಲಿಂಗಾಯತ ಧರ್ಮವನ್ನು ಎಲ್ಲೆಡೆ ಪಸರಿಸುವಂತೆ ಮಾಡಿದರು ಎಂದು ಹೇಳಿದರು.
ಈ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ನಾನೊಬ್ಬ ಭಾರತೀಯ ಎಂದು ಹೇಳಲು ಸಂತಸವಾಗುತ್ತದೆ. ಅಂತಹ ರಾಷ್ಟ್ರ ನಮ್ಮದು. ಸರ್ವಧರ್ಮ ಸಹಿಷ್ಣುತೆಯನ್ನು ಕಲಿಸಿದ್ದು ನಮ್ಮ ಭಾರತ ಎಂದರು.
ಇದನ್ನೂ ಓದಿ: ಅಂತರಂಗದ ಸೌಂದರ್ಯದಿಂದ ಜೀವನ ಸುಂದರ: ಶ್ರೀ ಬಸವಪ್ರಭು ಸ್ವಾಮೀಜಿ
ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಮನುಷ್ಯ ಜನಪ್ರಿಯನಾಗಬೇಕಾದರೆ ಇರುವಷ್ಟು ಕಾಲ ಒಳಿತನ್ನು ಮಾಡಬೇಕು. ಇತರರಿಗೆ ಒಳಿತನ್ನು ಮಾಡುವುದೇ ನಿಜವಾದ ಸಾಧನೆ. ಇನ್ನೊಬ್ಬರ ನೋವು ನಮಗೆ ಅರ್ಥವಾದರೆ ಆಗ ಮನುಷ್ಯರಾಗುತ್ತೇವೆ. ಜನರ ಕಷ್ಟದ ಕಣ್ಣೀರನ್ನು ಒರೆಸಿದರೆ ಅದೇ ಸಾರ್ಥಕ ಬದುಕು. ಅವರೇ ದಾರ್ಶನಿಕರು, ಸಂತರಾಗುತ್ತಾರೆಂದರು.
ಎಚ್. ವಿಜಯಕುಮಾರ್ ಪರೋಪಕಾರ ದೃಷ್ಟಿ ಕುರಿತು ಮಾತನಾಡಿ, ಇನ್ನೊಬ್ಬರ ಕಷ್ಟದಲ್ಲಿ ಸ್ಪಂದಸುವುದುಪರೋಪಕಾರ. ಇಂದು ಅನೇಕರು ಆಸ್ತಿಗಾಗಿ, ಹಣಕ್ಕಾಗಿ ಕಿತ್ತಾಡುತ್ತಿರುವುದನ್ನು ನೋಡುತ್ತಿz್ದÉೀವೆ ಎಂದರು.
ಮುಖಂಡರಾದ ಟಿಪ್ಪು ಖಾಸಿಂ ಅಲಿ, ಕೆ.ಎಂ.ವೀರೇಶ್ ಮಾತನಾಡಿದರು. ಮಸವಾದಿತ್ಯ ದೇವರು, ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಎಸ್.ರವಿ ಇದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಆರ್.ಶೇಷಣ್ಣಕುಮಾರ್ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
