ಮುಖ್ಯ ಸುದ್ದಿ
ಹೊಸದುರ್ಗದಿಂದ ಅಯೋಧ್ಯೆಗೆ ಸೈಕಲ್ ಪಯಣ | ಮೊಳಗಿತು ಜೈ ಶ್ರೀರಾಮ್..ಜೈ ಶ್ರೀರಾಮ್..ಘೋಷ ವಾಕ್ಯ

CHITRADURGA NEWS | 11 JANUARY 2024
ಚಿತ್ರದುರ್ಗ (CHITRADURGA): ಜೈ ಶ್ರೀರಾಮ್..ಜೈ ಶ್ರೀರಾಮ್…ಎಂಬ ಘೋಷ ವಾಕ್ಯ ಕೂಗುತ್ತಾ ಹೊಸದುರ್ಗದಿಂದ ಅಯೋಧ್ಯೆಗೆ ಪಯಣ ಬೆಳೆಸಿದೆ ಯುವಕರ ಸೈಕಲ್ ಯಾತ್ರೆ.
ಹಿಂದೂಗಳ ದಶಕದ ಕನಸು ಅಯೋಧ್ಯೆಯಲ್ಲಿ ಜ. 22ರಂದು ಶ್ರೀ ರಾಮನ ಪುನರ್ ಪ್ರಾಣ ಪ್ರತಿಷ್ಠಾಪನೆ ಮೂಲಕ ನನಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದುರ್ಗ ಪಟ್ಟಣದ ದಯಾನಿಧಿ ಹಾಗೂ ಶರಣಪ್ಪ ಹೊಸದುರ್ಗದಿಂದ ಅಯೋಧ್ಯೆವರೆಗೂ ಸೈಕಲ್ ಯಾತ್ರೆ ಪ್ರಾರಂಭಿಸಿದ್ದಾರೆ. ಬುಧವಾರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: ಮಗುವಿನ ಮೇಲಿನ ವಾತ್ಸಲ್ಯಕ್ಕಿಂತ ಗಂಡನ ಮೇಲಿನ ಹಠವೇ ಹೆಚ್ಚಾಯಿತೇ
‘ಅಯೋಧ್ಯೆಯ ಪ್ರತಿ ಮನೆಯೂ ಮಂದಿರಗಳಾಗಿ ಮಾರ್ಪಟ್ಟಿವೆ. ಜ. 22ರಂದು ಹಿಂದೂ ಭಕ್ತರು ತಮ್ಮ ಮನೆಯ ಉತ್ತರ ದಿಕ್ಕಿಗೆ 5 ದೀಪಗಳನ್ನು ಶ್ರೀರಾಮನಿಗೆ ಹಚ್ಚಿ ಬೆಳಗುವ ಮೂಲಕ ನಮ್ಮ ಧಾರ್ಮಿಕ ನಂಬಿಕೆಯನ್ನು ಗಟ್ಟಿಯಾಗಿಸಿಕೊಳ್ಳೋಣ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿಯನ್ನು ಮೂಡಿಸಿದ ‘ಜೈ ಶ್ರೀರಾಮ್’ ಘೋಷ ವಾಕ್ಯ ಇಂದು ರಾಷ್ಟ್ರಭಕ್ತ ಪೀಳಿಗೆಯ ಉಗಮಕ್ಕೆ ಕಾರಣವಾಗಿದೆ’ ಎಂದು ಸದ್ಗುರು ಆಯುರ್ವೇದಿಕ್ ಉತ್ಪನ್ನಗಳ ಮಾಲೀಕ ಡಿ.ಎಸ್.ಪ್ರದೀಪ್ ತಿಳಿಸಿದರು.
ಇದನ್ನೂ ಓದಿ: ಶ್ರೀರಾಮನ ಭವ್ಯ ಮೆರವಣಿಗೆ | ನಾಯಕನಹಟ್ಟಿಯಲ್ಲಿ ಮುಸ್ಟೂರು ಶ್ರೀಗಳಿಂದ ಚಾಲನೆ
‘ರಾಮ ರಾಜ್ಯ ಎಂದರೆ ನೆಮ್ಮದಿ, ಶಾಂತಿಯಿಂದ ಬದುಕುವುದು. ರಾಮ ಎಂದರೆ ರಾಷ್ಟ್ರ, ಶ್ರೀರಾಮನ ರಾಷ್ಟ್ರಭಕ್ತರಿಂದ ಭಾರತಕ್ಕೆ ಉತ್ತಮ ಭವಿಷ್ಯವಿದೆ’ ಎಂದು ಹೇಳಿದರು.
ಸದ್ಗುರು ಸಂಸ್ಥೆವತಿಯಿಂದ ಸೈಕಲ್ ಯಾತ್ರಾರ್ಥಿಗಳ ಪ್ರಯಾಣಕ್ಕೆ ಬೇಕಾದ ವಿವಿಧ ಪರಿಕರಗಳನ್ನು ನೀಡಲಾಯಿತು. ಸಮಾಜ ಸೇವಕ ತುಂಬಿನಕೆರೆ ಬಸವರಾಜ್, ಪ್ರಕಾಶ್, ಹಿಂದೂ ಕಾರ್ಯಕರ್ತರಾದ ಸಿದ್ದೇಶ್, ಕಾಶಿ, ಆಕಾಶ್, ಅಕ್ಷಯ್, ಮನು ಇದ್ದರು.
