ಮುಖ್ಯ ಸುದ್ದಿ
ನಿಗಮ ಮಂಡಳಿ ಪಟ್ಟಿ ವಿಷಯ | ಸಿಎಂ, ಡಿಸಿಎಂಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪತ್ರ

CHITRADURGA NEWS | 11 JANUARY 2024
ಚಿತ್ರದುರ್ಗ (CHITRADURGA): ಸತತ ಮೂರು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ನಿಗಮ ಮಂಡಳಿ ಪಟ್ಟಿ ಅಂತಿಮವಾಗುತ್ತಿರುವ ಕ್ಷಣದಲ್ಲಿ ಶಾಸಕ ಟಿ.ರಘುಮೂರ್ತಿ ‘ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಡಿ’ ಎಂದು ಬರೆದಿರುವ ಪತ್ರ ಇದೀಗ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಮಗುವಿನ ಮೇಲಿನ ವಾತ್ಸಲ್ಯಕ್ಕಿಂತ ಗಂಡನ ಮೇಲಿನ ಹಠವೇ ಹೆಚ್ಚಾಯಿತೇ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಲು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನನಗೆ ಅವಕಾಶ ಕಲ್ಪಿಸಿದೆ. ಕ್ಷೇತ್ರದ ಮತದಾರರು ನಿರಂತರವಾಗಿ 2013, 2018,ಮತ್ತು 2023ರ ಚುನಾವಣೆಯಲ್ಲಿ ನನ್ನನ್ನು ಚುನಾಯಿಸಿದ್ದಾರೆ. ಈ ವಿಚಾರವಾಗಿ ತಮಗೂ ಹಾಗೂ ಪಕ್ಷದ ಎಲ್ಲಾ ಹಂತದ ವರಿಷ್ಠರಿಗೂ, ಮುಖಂಡರಿಗೂ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸುತ್ತೇನೆ. ಜೊತೆಗೆ ಪಕ್ಷಕ್ಕೆ ಎಂದಿಗೂ ಸಹ ಋಣಿಯಾಗಿರುತ್ತೇನೆ.
ಪ್ರಸ್ತುತ ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪ್ರಕ್ರಿಯೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಒಂದು ವೇಳೆ ನನ್ನನ್ನು ಪರಿಗಣಿಸುವ ಸಂಭವ ಏನಾದರು ಇದ್ದಲ್ಲಿ ಅನ್ಯಾತಾ ಭಾವಿಸದೆ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸದಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಕೋರಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಭವ್ಯ ಮೆರವಣಿಗೆ | ನಾಯಕನಹಟ್ಟಿಯಲ್ಲಿ ಮುಸ್ಟೂರು ಶ್ರೀಗಳಿಂದ ಚಾಲನೆ
ಕಾಂಗ್ರೆಸ್ ಪಕ್ಷಕ್ಕೆ ನಾನು ಆರಂಭದಿಂದಲೂ ಈವರೆಗೂ ಯಾವುದೇ ಸಂದರ್ಭದಲ್ಲಿ ಪಕ್ಷಕ್ಕಾಗಲಿ, ವರಿಷ್ಠರಿಗಾಗಲಿ ಹಾಗೂ ಮತದಾರರಿಗಾಗಲಿ ಮುಜಗರವಾಗದೆ ಇರುವ ರೀತಿಯಲ್ಲಿ ನಡದುಕೊಳ್ಳಲು ಪ್ರಯತ್ನಿಸಿರುತ್ತೇನೆ ಎಂದು ಭಾವಿಸಿದ್ದೇನೆ. ಇನ್ನೂ ಮುಂದೆಯು ಸಹ ಈ ಪರಂಪರೆಯನ್ನು ಮುಂದುವರೆಸುತ್ತೇನೆ. ನನ್ನ ಮತ ಕ್ಷೇತ್ರ ಚಳ್ಳಕೆರೆ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
