
ಚಿತ್ರದುರ್ಗ ನ್ಯೂಸ್.ಕಾಂ:

ಭಾರತ ಸೋಲಿಲ್ಲದ ಸರದಾರ
ಕ್ರೀಡಾಲೋಕದಲ್ಲಿ ಭಾರತ ಈಗಾಗಲೇ ಮಿಂಚುತ್ತಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೋಲಿಲ್ಲದ ಸರದಾರನಂತೆ ಪ್ರದರ್ಶನ ನೀಡಿದೆ. ನಮ್ಮ ತಂಡ ಕ್ರಿಕೇಟ್ ವಿಶ್ವಕಪ್ ಗೆದ್ದು, ಭಾರತದ ಕೀರ್ತಿ ಪತಾಕೆ ಹಾರಿಸಲಿ. ಭಾರತ ಮಾತೆಗೆ ಜಯವಾಗಲಿ.

| ತೀಕ್ಷ್ಣ ಸುಜಯ್, ಗುಡ್ಡದನೇರಲಕೆರೆ
*****

ವಿಶ್ವಕಪ್ ಗೆದ್ದು ಬರಲಿ
ಭಾರತ ತಂಡ ಫೈನಲ್ ಪಂದ್ಯದಲ್ಲೂ ಗೆದ್ದು ವಿಜಯ ಪತಾಕೆ ಆರಿಸಲಿದೆ ಎಂಬ ಅಗಾಧ ವಿಶ್ವಾಸ ಇದೆ. ಭಾರತ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿ. ರೋಹಿತ್ ಶರ್ಮಾ ನಾಯಕತ್ವದ ಭಾರತದ ತಂಡ ಮೂರನೇ ಬಾರಿಗೆ ವಿಶ್ವಕಪ್ ಗೆದ್ದು ಬರಲಿ.
| ಬ್ರಹ್ಮಾನಂದ ಪಲ್ಲವಗೆರೆ
*****

ಹೆಚ್ಚಾಗಿದೆ ಕುತೂಹಲ
ವಿಶ್ವಕಪ್ ಫೈನಲ್ ಪಂದ್ಯಕ್ಕೆ ನಾವೆಲ್ಲ ಕುತೂಹಲದಿಂದ ಕಾಯುತ್ತಿದ್ದೇವೆ. ವಿಶ್ವಕಪ್ ಗೆಲುವು ಖಂಡಿತವಾಗಿಯೂ ಹೆಚ್ಚುಹೆಚ್ಚು ಯುವಕರನ್ನು ಕ್ರೀಡೆಯತ್ತ ಆಕರ್ಷಿಸಲಿದೆ. ಗೆದ್ದು ಬಾ ಇಂಡಿಯಾ…ಗೆದ್ದು ಬಾ..
| ಬಿ.ಗಂಡಯ್ಯ, ಬೊಸೆದೇವರಹಟ್ಟಿ
****

ಸಿಡಿದೆದ್ದು ಆಡು ಭಾರತ
ನಮ್ಮ ಭಾರತೀಯ ತಂಡದ ಅಮೋಘ ಪ್ರದರ್ಶನಕ್ಕೆ ರೋಮಾಂಚಿತರಾಗಿ ಕಾಯುತ್ತಿದೆ ಇಡೀ ವಿಶ್ವ. ಈ ಬಾರಿ ಭಾರತೀಯರ ಸೋಲರಿಯದ ಗೆಲವು ನಮಗೆ ಭರವಸೆಯಾಗಿದೆ. ಸಿಡಿದೆದ್ದು ಆಡು ಭಾರತವೆ. ನಿನ್ನ ಜಯಕ್ಕೆ ವಿಶ್ವವೇ ಕಾಯುತ್ತಿದೆ.
| ಅರುಣ, ಸಾಫ್ಟ್‌ವೇರ್ ಇಂಜಿನಿಯರ್, ಸಿರಿಗೆರೆ
****



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
