
CHITRADURGA NEWS | 04 AUGUST 2024
ಚಿತ್ರದುರ್ಗ: ಎಸ್.ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳು ಪಿ.ಸಿ.ಎಂ.ಬಿ ಮತ್ತು ಪಿ.ಸಿ.ಎಂ.ಸಿ. ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ, ಅಂತಹ ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸುವ ಸಣ್ಣ ಪ್ರಯತ್ನ ನಮ್ಮದು ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಚೀಫ್ ಅಕಾಡೆಮಿಕ್ ಕೋವಾಡಿನೇಟರ್ ಆರ್.ಎಸ್.ರಾಜು ಹೇಳಿದರು.

ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಆಗಸ್ಟ್ 3 | ರಾಜ್ಯದ ಪ್ರಮುಖ ಮಾರುಕಟ್ಟೆಗಳ ವಾರಾಂತ್ಯದ ವಹಿವಾಟು
ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ಪಾರ್ಕ್ ಅಕಾಡೆಮಿ ಇಗ್ನಿಷನ್ ಟು ದ ಪ್ರೊ ಮೈಂಡ್ಸ್ ಪ್ರೋಗ್ರಾಂ ಉದ್ಘಾಟಿಸಿ ಮಾತನಾಡಿದ ಅವರು.
10ನೇ ತರಗತಿ ನಂತರ ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿ. ತೆಗೆದುಕೊಳ್ಳಬೇಕೋ ಎನ್ನುವ ಗೊಂದಲಕ್ಕಿಂತ ಹೊಸ ಹೊಸ ವಿಚಾರಗಳ ಅಪ್ಡೇಟ್ ಆಗುವುದು ತುಂಬಾ ಮುಖ್ಯ. ಕಟ್ ಆಫ್ ಮಾಕ್ರ್ಸ್ ಪ್ರತಿ ವರ್ಷವೂ ಬದಲಾವಣೆಯಾಗುತ್ತಿರುತ್ತದೆ. ಪೋಷಕರುಗಳಿಗೆ ಒತ್ತಡ ಹಾಕುವುದು ಅನಿವಾರ್ಯ. ಎಷ್ಟು ಸಾಧ್ಯವೋ ಅಷ್ಟು ಗೊಂದಲಗಳನ್ನು ನಿವಾರಣೆಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಈ ಪ್ರೋಗ್ರಾಂ ಉದ್ದೇಶವಾಗಿರುತ್ತದೆ ಎಂದರು.
ಅರ್ಜಿ ಯಾವಾಗ ಕರೆಯುತ್ತಾರೆ. ಏನೇನು ದಾಖಲೆ ಸಲ್ಲಿಸಬೇಕು. ಪರೀಕ್ಷೆ ಯಾವಾಗ, ಫಲಿತಾಂಶ ಪ್ರಕಟಿಸುವುದು ಯಾವಾಗ ಎನ್ನುವ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಾಗ ಅನೇಕ ಪ್ರಶ್ನೆಗಳು ಎದುರಾಗುತ್ತದೆ. ಪರೀಕ್ಷೆ ಬಗ್ಗೆ ಅಡಿಪಾಯ ಹಾಕುವುದಕ್ಕಾಗಿ ವಾರದಲ್ಲಿ ನಾಲ್ಕು ಪಿರೇಡ್ನಂತೆ 40 ನಿಮಿಷಗಳ ತರಬೇತಿ ನೀಡಲಾಗುವುದು.
ಕ್ಲಿಕ್ ಮಾಡಿ ಓದಿ: Independence day; ಸ್ವಾತಂತ್ರ್ಯ ದಿನಾಚರಣೆ ಪಥ ಸಂಚಲನಕ್ಕೆ ಪೊಲೀಸ್ ಕವಾಯತು ಅಭ್ಯಾಸ
ಸ್ಟಾಫ್ ಸೆಲೆಕ್ಷನ್ ಕಮಿಟಿ, ರೈಲ್ವೆ ಬೋರ್ಡ್, ಕೇಂದ್ರ ಲೋಕಸೇವಾ ಆಯೋಗ, ಸಿವಿಲ್ ಸರ್ವಿಸ್ ಎಕ್ಸಾಂಗಳಿಗೆ ಸಂಬಂಧಿಸಿದಂತೆ ಅವರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಿ ಈಗಿನಿಂದಲೇ ತಯಾರು ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ ಸಿ.ಬಿ.ಎಸ್.ಸಿ. ಅಕಾಡೆಮಿಕ್ ವೀಕ್ಷಕರುಗಳಾದ ಡಾ.ಕೆ.ಪಿ.ನಾಗಭೂಷಣ್ಶೆಟ್ಟಿ, ಡಾ.ಜಿ.ಬಿ.ರಾಜಪ್ಪ, ಎಸ್.ಎಲ್.ವಿ. ಪಿ.ಯು. ಕಾಲೇಜ್ ಆಫ್ ಎ.ಎಸ್.ಅಂಡ್ ಸಿ. ಪ್ರಾಂಶುಪಾಲ ಯು.ಕೇಶವಮೂರ್ತಿ, ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ನ ಪ್ರಾಚಾರ್ಯರಾದ ಆರ್.ಸಿ.ತಿಪ್ಪೇಸ್ವಾಮಿ, ಸಿ.ಬಿ.ಎಸ್.ಇ. ಪ್ರಾಂಶುಪಾಲ ಆಂಟೋನಿ ಮ್ಯಾಥ್ಯು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
