By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭೂಮಿಪೂಜೆ
    1.40 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭೂಮಿಪೂಜೆ 
    4 hours ago
    ಪಾಳೇಗಾರರ ಕಾಲದ ಶಾಸನ ಪತ್ತೆ
    ಪಾಳೆಯಗಾರರ ಕಾಲದ‌ ಶಿಲಾ‌ ಶಾಸನ ಪತ್ತೆ | ವಸ್ತು ಸಂಗ್ರಹಕಾಯಕ್ಕೆ ಹಸ್ತಾಂತರ
    4 hours ago
    ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ
    ನಾಳೆ ಸಿವಿಲ್ ಪೊಲೀಸ್ ಪರೀಕ್ಷೆ | ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ
    4 hours ago
    chitradurga District Police
    ನಿಮ್ಮ ವಾಹನದ ಮೇಲೆ ‘PRESS’ ಸ್ಟಿಕ್ಕರ್ ಅಂಟಿಸಿದ್ದರೆ ದಂಡ ಗ್ಯಾರೆಂಟಿ | ಜಿಲ್ಲಾ ಪೊಲೀಸರಿಂದ ಎಚ್ಚರಿಕೆ
    6 hours ago
    ಕಾಂಗ್ರೆಸ್
    ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಿದ ಆರೋಪ -3 ಜನರಿಗೆ ಕಾರಣ ಕೇಳಿ ನೋಟಿಸ್
    13 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 weeks ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    3 weeks ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    1 month ago
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    2 months ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    2 months ago
  • ತಾಲೂಕು
    ತಾಲೂಕುShow More
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    3 weeks ago
    Bus crashes into divider
    ಡಿವೈಡರ್‌ಗೆ ಅಪ್ಪಳಿಸಿದ ಬಸ್‌ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
    3 weeks ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    1 month ago
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ | ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಭಾಗೀ 
    1 month ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    3 weeks ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    2 months ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಆಗಸ್ಟ್ 01 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಆರೋಗ್ಯದಲ್ಲಿ ಎಚ್ಚರ
    16 hours ago
    today bhavishya
    ದಿನ ಭವಿಷ್ಯ | ಜುಲೈ 31 | ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಪ್ರಗತಿ
    2 days ago
    today bhavishya
    ದಿನ ಭವಿಷ್ಯ | ಜುಲೈ 30 | ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಹೊರೆ, ದೂರದ ಪ್ರಯಾಣ ಬೇಡ
    3 days ago
    today bhavishya
    ದಿನ ಭವಿಷ್ಯ | ಜುಲೈ 29 | ವ್ಯಾಪಾರದಲ್ಲಿ ನಿರೀಕ್ಷಿತ ಲಾಭ, ಆರೋಗ್ಯದಲ್ಲಿ ಎಚ್ಚರ
    4 days ago
    today bhavishya
    ದಿನ ಭವಿಷ್ಯ | ಜುಲೈ 28 | ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಒತ್ತಡ, ಆರ್ಥಿಕವಾಗಿ ನಿರೀಕ್ಷಿಸಿದ ಮಟ್ಟದ ಫಲಿತಾಂಶ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಜುಲೈ 31 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ | ಜುಲೈ 30 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಜುಲೈ 29 | ರಾಗಿ, ಶೇಂಗಾ ರೇಟ್….
    3 days ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ | ಜುಲೈ 27 | ರಾಗಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
    1 week ago
    ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯ ಕುರಿತು ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು
    ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
    2 weeks ago
    ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
    ಸಬೂಬು ಹೇಳಿಕೊಂಡು ಕಾಲಹರಣ ಮಾಡಿದರೆ ಸಹಿಸಲ್ಲ | KDP ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ 
    2 weeks ago
    ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    ಹೊಳಲ್ಕೆರೆ : ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    2 weeks ago
    ಪುರಾತನ ದೇವಾಲಯದ ಜೀರ್ಣೋದ್ಧಾರ, ವಿಶೇಷ ಪೂಜಾ ಕಾರ್ಯಕ್ರಮ
    ಈಗೀಗ ಮನುಷ್ಯ- ಮನುಷ್ಯರ ನಡುವೆ ಹೊಂದಾಣಿಕೆ, ಸಹಬಾಳ್ವೆ ಇಲ್ಲ | ಡಾ.ಕೇದಾರಲಿಂಗ ಶ್ರೀಗಳು
    3 weeks ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    1 month ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    2 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    4 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    6 months ago
  • ಹೊಸದುರ್ಗ
    ಹೊಸದುರ್ಗShow More
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    1 month ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    2 months ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 months ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 months ago
  • Life Style
    Life StyleShow More
    drinking water
    ನೀರು ಕುಡಿಯುವ ಅಭ್ಯಾಸವು ನಿಮ್ಮನ್ನು ಅಸ್ವಸ್ಥಗೊಳಿಸಬಹುದು ಎಚ್ಚರ
    15 hours ago
    amino acid
    ಮಾಂಸಾಹಾರಿ ಆಹಾರವನ್ನು ಸೇವಿಸದವರು ಅಮೈನೋ ಆಮ್ಲದ ಕೊರತೆಯನ್ನು ನೀಗಿಸಲು ಈ ಆಹಾರಗಳನ್ನು ತಪ್ಪದೇ ಸೇವಿಸಿ
    16 hours ago
    Eat these foods
    ತಾಯಿಯಾಗುವ ಕನಸು ನನಸಾಗಲು ಈ ಆಹಾರ ಸೇವಿಸಿ
    2 days ago
    Ears getting blocked
    ಮಳೆಗಾಲದಲ್ಲಿ ಕಿವಿಗಳು ಬ್ಲಾಕ್ ಆಗುವುದನ್ನು ತಡೆಯಲು ಈ ಮನೆಮದ್ದುಗಳನ್ನು ಬಳಸಿ 
    2 days ago
    sugar
    ಮಳೆಗಾಲದಲ್ಲಿ ಸಕ್ಕರೆ ತೇವವಾಗುವುದನ್ನು ತಡೆಯಲು ಈ ಸರಳ ತಂತ್ರಗಳನ್ನು ಅನುಸರಿಸಿ
    3 days ago
Reading: ನಾಳೆ ಸಿವಿಲ್ ಪೊಲೀಸ್ ಪರೀಕ್ಷೆ | ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ನಾಳೆ ಸಿವಿಲ್ ಪೊಲೀಸ್ ಪರೀಕ್ಷೆ | ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ

News Desk Chitradurga News
Last updated: 1 August 2026 19:21
News Desk Chitradurga News
4 hours ago
Share
ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ
ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ
SHARE

CHITRADURGA NEWS | 01 AUGUST 2026

ಚಿತ್ರದುರ್ಗ: ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 2 ರಂದು ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಮೇಲ್ವಿಚಾರಕರು, ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆ.ಇ.ಎ) ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಇದನ್ನೂ ಓದಿ: ನಿಮ್ಮ ವಾಹನದ ಮೇಲೆ ‘PRESS’ ಸ್ಟಿಕ್ಕರ್ ಅಂಟಿಸಿದ್ದರೆ ದಂಡ ಗ್ಯಾರೆಂಟಿ | ಜಿಲ್ಲಾ ಪೊಲೀಸರಿಂದ ಎಚ್ಚರಿಕೆ

ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿ ಅವರು ಮಾತನಾಡಿದರು.

ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಮಾರ್ಗಾಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ನಿರ್ಧಿಷ್ಟ ಪಡಿಸಿದ ವಾಹನ ಹಾಗೂ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಾಗಿಸಬೇಕು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಕೊಠಡಿ ಮೇಲ್ವಾಚರಕರು ಹಾಗೂ ವಸ್ತ್ರಸಂಹಿತೆ ಅಧಿಕಾರಿಗಳು ಸಭೆ ನಡೆಸಿ, ಪರೀಕ್ಷ ಕೇಂದ್ರಗಳಲ್ಲಿ, ನಿರ್ವಹಿಸಬೇಕಾದ ಕರ್ತವ್ಯಗಳು ಬಗ್ಗೆ ತಿಳಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಹಾಗೂ ಮೊಬೈಲ್ ನೆಟ್‍ವರ್ಕ ಜಾಮರ್‌ಗಳು ಸುಸ್ಥಿತಿಯಲ್ಲಿ ಇದ್ದು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆ.ಇ.ಎ ಹೊರಡಿಸಿರುವ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಅಭ್ಯರ್ಥಿಗಳಿಗೆ ಭದ್ರತಾ ತಪಾಸಣೆ ನಡೆಸಲಾಗುತ್ತದೆ. ಸಿಸಿಟಿವಿ ಕಣ್ಗಾವಲು ಮತ್ತು ಎಐ ಆಧಾರಿತ ಮುಖ ಚಹರೆ ಗುರುತಿಸುವಿಕೆ ಸೇರಿದಂತೆ ಬಹು ಗುರುತಿನ ಪರಿಶೀಲನೆಗೆ ಅಭ್ಯರ್ಥಿಗಳು ಒಳಪಡಬೇಕು. ಇದಕ್ಕೆ ಅನುವಾಗುವಂತೆ ಪರೀಕ್ಷೆ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಿದ ಆರೋಪ -3 ಜನರಿಗೆ ಕಾರಣ ಕೇಳಿ ನೋಟಿಸ್

ಯಾವುದೇ ರೀತಿಯ ಪಠ್ಯ ಸಾಮಗ್ರಿಗಳು, ಚೀಟಿಗಳು, ಜಾಮಿಟ್ರಿ, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಪೇಪರ್, ಪೆನ್‍ಡ್ರೈವ್‍ಗಳು, ಎರೆಸೇರ್, ಲಾಗ್ ಟೇಬಲ್ ಸೇರಿದಂತೆ ಎಲೆಕ್ಟ್ರಾನಿಕ್ ಪೆನ್ ಸ್ಕ್ಯಾನರ್, ವಾಲೆಟ್, ಗಾಗಲ್ಸ್, ಕೈ ಚೀಲಗಳು, ಬೆಲ್ಟ್, ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಮುಂತಾದ ಸಂವಹನ ಸಾಧನಗಳನ್ನು ಮರೆಮಾಡುವ ಮೂಲಕ ನ್ಯಾಯೋಚಿತವಲ್ಲದ ವಿಧಾನಗಳಿಗೆ ಬಳಸಬಹುದಾದ ಇತರೆ ವಸ್ತುಗಳು, ಮೊಬೈಲ್, ಬ್ಲೂಟೂತ್, ಇಯರ್ ಪೋನ್, ಮೈಕ್ರೋಫೋನ್, ಪೇಜರ್ ಸೇರಿದಂತೆ ಆಧುನಿಕ ಸಂವಹನ ಸಾಧನಗಳು, ಯಾವುದೇ ರೀತಿಯ ಗಡಿಯಾರ, ಕೈ ಗಡಿಯಾರ, ಬಳೆ, ಕ್ಯಾಮರಾ, ತೆರೆದಿರುವ ಅಥವಾ ಪ್ಯಾಕ್ ಮಾಡಲಾದ ಯಾವುದೇ ಆಹಾರ ಪದಾರ್ಥಗಳು, ನೀರಿನ್ ಬಾಟೆಲ್ ನಿಷೇಧಿತ ವಸ್ತುಗಳಾಗಿವೆ.

ಅಭ್ಯರ್ಥಿಗಳು ಉದ್ದ ತೋಳಿನ ಉಡುಪುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಅರ್ಧ ತೋಳಿನ ಬಟ್ಟೆಗಳನ್ನು ಮಾತ್ರ ಧರಿಸಿರಬೇಕು. ಶಿರೋವಸ್ತ್ರ ಹಾಗೂ ಮುಖ ಮುಚ್ಚುವ ಉಡುಪುಗಳು, ಟೋಪಿ ಅಥವಾ ಯಾವುದೇ ರೀತಿಯ ತಲೆ ಹೊದಿಕೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ. 

ಯಾವುದೇ ರೀತಿಯ ಲೋಹದ ವಸ್ತುಗಳು ಅಥವಾ ಆಭರಣಗಳನ್ನು ಧರಿಸುವಂತಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಮೂಗುತಿ ಮತ್ತು ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಶೂ ಧರಿಸುವುದಕ್ಕೆ ಅವಕಾಶವಿರುವುದಿಲ್ಲ. ತೆಳುವಾದ ಅಡಿಭಾಗವಿರುವ ಸ್ಯಾಂಡಲ್ಸ್ ಅಥವಾ ಚಪ್ಪಲಿಗಳನ್ನು ಮಾತ್ರ ಧರಿಸಬೇಕು.

ಇದನ್ನೂ ಓದಿ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ | ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಶ್ರವಣ ಸಾಧನಗಳು ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಯುಡಿಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಶ್ರವಣ ಸಾಧನ ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಸಾಧನಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. 

ಇದರೊಂದಿಗೆ ಯಾವುದಾದರೂ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸುವವರು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಆದರೆ ಜನಿವಾರ, ಶಿವದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.

ಪರೀಕ್ಷಾ ವೇಳಾಪಟ್ಟಿ ಬಗ್ಗೆ ಅಭ್ಯರ್ಥಿಗಳಿಗೆ ನಿಗಾ ಇರಲಿ:

ನಗರದಲ್ಲಿ 26 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 9,592 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಲಿದ್ದಾರೆ. ಹೈದ್ರಾಬಾದ್ ಕರ್ನಾಟಕ ಹೊರತು ಪಡಿಸಿದ ಅಭ್ಯರ್ಥಿಗಳು ಮಾತ್ರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಹಿರಿಯ ಮಕ್ಕಳ ತಜ್ಞ ಡಾ.ದೇವರಾಜ್ ನಿವೃತ್ತಿ | ಸಹೋದ್ಯೋಗಿಗಳಿಂದ ಬೀಳ್ಕೊಡುಗೆ

ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ 1 ಗಂಟೆ ಮುಂಚೆಯೇ ತಪಾಸಣೆ ಒಳಪಟ್ಟು ಪರೀಕ್ಷಾ ಕೊಠಡಿ ತೆರಳಬೇಕು. ಬೆಳಿಗ್ಗೆ 10 ಗಂಟೆಯಿಂದ 10:15 ನಿಮಿಷದವರಗೆ ಮೇಲ್ವಿಚಾರಕರು ಪ್ರವೇಶ ಹಾಗೂ ಗುರುತಿನ ಚೀಟಿ ಪರಿಶೀಲನೆ ನಡೆಸುತ್ತಾರೆ. ಅಭ್ಯರ್ಥಿಗಳಿಗೆ ಓ.ಎಂ.ಆರ್ ವಿತರಣೆ ಮಾಡುತ್ತಾರೆ. ಅಭ್ಯರ್ಥಿಗಳು ಓ.ಎಂ.ಆರ್ ನಲ್ಲಿ ಮುದ್ರಿತವಾಗಿರುವ ನೊಂದಣಿ ಸಂಖ್ಯೆಯನ್ನು, ತಮ್ಮ ಪರೀಕ್ಷಾ ಪತ್ರದಲ್ಲಿನ ನೊಂದಣಿ ಸಂಖ್ಯೆಯೊಂದಿಗೆ ಹೋಲಿಸಿ ನೋಡಿ, ಸರಿ ಎಂದು ಕಂಡುಬಂದಲ್ಲಿ, ಎಚ್ಚರಿಕೆಯಿಂದ ಓ.ಎಂ.ಆರ್. ಭರ್ತಿ ಮಾಡಬೇಕು.

ಕೊಠಡಿ ಮೇಲ್ವಿಚಾರಕರು ನಾಮೀನಲ್ ಮುದ್ರಿತವಾಗಿರುವ ಅಭ್ಯರ್ಥಿಗಳ ವಿವರ ಪರಿಶೀಲಿಸುತ್ತಾರೆ. ಬೆಳಗ್ಗೆ 10:20ರ ಸುಮಾರಿಗೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸೀಲ್ ಮಾಡಿರುವ ಪ್ರಶ್ನೆ ಪತ್ರಿಕೆಯ ಬಂಡಲ್ ಹೊಡೆದು, ಪ್ರಶ್ನೆ ಪತ್ರಿಕೆಗಳನ್ನು ವಿತರಣೆ ಮಾಡಲಾಗುತ್ತದೆ. ಯಾವುದೇ ಅಭ್ಯರ್ಥಿಗಳು 10:30ಕ್ಕಿ ಮುಂಚಿತವಾಗಿ ಪ್ರಶ್ನೆ ಪತ್ರಿಕೆಯ ಸೀಲ್ ತೆರೆಯುವಂತಿಲ್ಲ. ಸರಿಯಾಗಿ 10:30 ಪತ್ರಿಕೆಯನ್ನು ತೆರೆದು ಉತ್ತರಿಸಬಹುದು. ಪರೀಕ್ಷಾ ಅವಧಿ ಮಧ್ಯಾಹ್ನ 12:00 ಗಂಟೆ ಸರಿಯಾಗಿ ಮುಕ್ತಾಯವಾಗುತ್ತದೆ.

ಈ ಬಾರಿಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸಲು ನಾಲ್ಕು ವೃತ್ತಗಳಲ್ಲಿ ಒಂದನ್ನು ಭರ್ತಿ ಮಾಡಬೇಕು. ಇದರ ಜೊತೆಗೆ ಉತ್ತರಗಳು ಗೊತ್ತಿರದ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಕಡ್ಡಾಯಾವಗಿ ಭರ್ತಿ ಮಾಡಬೇಕು. ಇದಕ್ಕಾಗಿ ಪರೀಕ್ಷಾ ಅವಧಿ ಮಧ್ಯಾಹ್ನ 12:00 ಗಂಟೆ ಸರಿಯಾಗಿ ಮುಕ್ತಾಯವಾದ ನಂತರ 5 ನಿಮಿಷದ ಹೆಚ್ಚುವರಿ ಸಮಯವನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು. 

ಇದನ್ನೂ ಓದಿ: ನೀರು ಕುಡಿಯುವ ಅಭ್ಯಾಸವು ನಿಮ್ಮನ್ನು ಅಸ್ವಸ್ಥಗೊಳಿಸಬಹುದು ಎಚ್ಚರ

ನಂತರ ಕೊಠಡಿ ಮೇಲ್ವಿಚಾರಕರು ಓ.ಎಂ.ಆರ್.ಗಳನ್ನು ಸಂಗ್ರಹಿಸುತ್ತಾರೆ. ಗೊತ್ತಿರದ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಭರ್ತಿ ಮಾಡದೇ ಹೊದರೆ, ಅಂತಹ ಪ್ರಶ್ನೆಗೆ 0.25(1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ:

ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಇದೇ ಆಗಸ್ಟ್ 02ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಶನಿವಾರ ಚಿತ್ರದುರ್ಗ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಚಿನ್ಮೋಲಾದ್ರಿ ಪದವಿಪೂರ್ವ ಕಾಲೇಜು, ನಮ್ಮ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜು, ಎಸ್‍ಜೆಎಂಐಟಿ ಪದವಿಪೂರ್ವ ಕಾಲೇಜು, ಎಂ.ಕೆ.ಹಟ್ಟಿ ಎಸ್‍ಜೆಎಂ ಪದವಿಪೂರ್ವ ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆಯನ್ನು ಸುವ್ಯವಸ್ಥೆಯಿಂದ ನಡೆಸುವುದಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ: ಸಾಮಾನ್ಯ ವರ್ಗದ ಪುರುಷರು/ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ | ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಆಗಸ್ಟ್ 02ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ಚಿತ್ರದುರ್ಗ ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಲಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಪ್ರಭಾರಿ ಪಿ.ಯು. ಉಪನಿರ್ದೇಶಕ ಅಶೋಕ್, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಧಿಕಾರಿಗಳು, ವಸ್ತ್ರಸಂಹಿತೆ ಅಧಿಕಾರಿಗಳು ಉಪಸ್ಥಿತರಿದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsCivil ExaminationExamination Room Inspectionಚಿತ್ರದುರ್ಗಚಿತ್ರದುರ್ಗ ನ್ಯೂಸ್ಪರೀಕ್ಷಾ ಕೊಠಡಿ ಪರಿಶೀಲನೆಸಿವಿಲ್ ಪರೀಕ್ಷೆ
Share This Article
Facebook Email Print
Previous Article chitradurga District Police ನಿಮ್ಮ ವಾಹನದ ಮೇಲೆ ‘PRESS’ ಸ್ಟಿಕ್ಕರ್ ಅಂಟಿಸಿದ್ದರೆ ದಂಡ ಗ್ಯಾರೆಂಟಿ | ಜಿಲ್ಲಾ ಪೊಲೀಸರಿಂದ ಎಚ್ಚರಿಕೆ
Next Article ಪಾಳೇಗಾರರ ಕಾಲದ ಶಾಸನ ಪತ್ತೆ ಪಾಳೆಯಗಾರರ ಕಾಲದ‌ ಶಿಲಾ‌ ಶಾಸನ ಪತ್ತೆ | ವಸ್ತು ಸಂಗ್ರಹಕಾಯಕ್ಕೆ ಹಸ್ತಾಂತರ
Leave a Comment

Leave a Reply Cancel reply

Your email address will not be published. Required fields are marked *

ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭೂಮಿಪೂಜೆ
1.40 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭೂಮಿಪೂಜೆ 
ಮುಖ್ಯ ಸುದ್ದಿ
ಪಾಳೇಗಾರರ ಕಾಲದ ಶಾಸನ ಪತ್ತೆ
ಪಾಳೆಯಗಾರರ ಕಾಲದ‌ ಶಿಲಾ‌ ಶಾಸನ ಪತ್ತೆ | ವಸ್ತು ಸಂಗ್ರಹಕಾಯಕ್ಕೆ ಹಸ್ತಾಂತರ
ಮುಖ್ಯ ಸುದ್ದಿ
chitradurga District Police
ನಿಮ್ಮ ವಾಹನದ ಮೇಲೆ ‘PRESS’ ಸ್ಟಿಕ್ಕರ್ ಅಂಟಿಸಿದ್ದರೆ ದಂಡ ಗ್ಯಾರೆಂಟಿ | ಜಿಲ್ಲಾ ಪೊಲೀಸರಿಂದ ಎಚ್ಚರಿಕೆ
ಮುಖ್ಯ ಸುದ್ದಿ
ಕಾಂಗ್ರೆಸ್
ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಿದ ಆರೋಪ -3 ಜನರಿಗೆ ಕಾರಣ ಕೇಳಿ ನೋಟಿಸ್
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up