By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    Damage to Bhadra Canal
    ಭದ್ರಾ ಕಾಲುವೆಗೆ ಹಾನಿ | ದೂರು ದಾಖಲು
    9 hours ago
    Bhumi Puja for the construction of National Vidyakendra
    ಚಿತ್ರದುರ್ಗದ ಹೊರವಲಯದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ನಿರ್ಮಾಣಕ್ಕೆ‌ ಭೂಮಿ ಪೂಜೆ
    10 hours ago
    ಟಿ. ರಘುಮೂರ್ತಿ
    ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ | ಸಚಿವ ಟಿ.ರಘುಮೂರ್ತಿ
    10 hours ago
    Narendra Modi's Birthday | BJP's Special Puja at Neelakanteshwara Temple
    ನರೇಂದ್ರ ಮೋದಿ ಜನ್ಮದಿನ | ನೀಲಕಂಠೇಶ್ವರ ದೇವಸ್ಥಾನದಲ್ಲಿ ಬಿಜೆಪಿ ವಿಶೇಷ ಪೂಜೆ
    10 hours ago
    ರೈಲ್ವೇ ಹಳಿ
    ರೈಲು ಸಂಚಾರದಲ್ಲಿ ಬದಲಾವಣೆ | ನೇರ ರೈಲು ಮಾರ್ಗದ ಕಾಮಗಾರಿ ಹಿನ್ನೆಲೆ
    11 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    4 weeks ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    1 month ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    3 months ago
  • ತಾಲೂಕು
    ತಾಲೂಕುShow More
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    6 days ago
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    2 weeks ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    4 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    1 month ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    1 week ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    2 weeks ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    2 weeks ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 17 | ವ್ಯಾಪಾರದಲ್ಲಿ ಹೊಸ ಹೂಡಿಕೆ, ದೀರ್ಘಾವಧಿ ಸಾಲಗಳಿಂದ ಮುಕ್ತಿ
    22 hours ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 16 | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡೆತಡೆಗಳು, ದೂರದ ಪ್ರಯಾಣ ಬೇಡ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 15 | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣ, ಹಠಾತ್ ಪ್ರಯಾಣದ ಸೂಚನೆ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 14 | ಅನಿರೀಕ್ಷಿತ ಧನಲಾಭದ ಸೂಚನೆ, ಶುಭಸುದ್ದಿ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 13 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಆರೋಗ್ಯದಲ್ಲಿ ಜಾಗೃತಿ ವಹಿಸಿ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 17 | ಹತ್ತಿ ರೇಟ್ ಎಷ್ಟಿದೆ?
    13 hours ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 15 | ಹತ್ತಿ ರೇಟ್ ಎಷ್ಟಿದೆ?
    3 days ago
    13 ಸಾವಿರ ದಾಟಿದ ಹತ್ತಿ | ಇಂದಿನ ರೇಟ್ ಎಷ್ಟಿದೆ…
    6 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 11 | ಸೂರ್ಯಕಾಂತಿ, ಶೇಂಗಾ ರೇಟ್ ಎಷ್ಟಿದೆ?
    7 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 10 | ಹತ್ತಿ ರೇಟ್…
    1 week ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    2 weeks ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    2 weeks ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    2 weeks ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    1 month ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    1 month ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    6 days ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    4 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    1 month ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    2 months ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 months ago
  • Life Style
    Life StyleShow More
    hibiscus flower face pack
    ಮೊಡವೆಗಳನ್ನು ಹೋಗಲಾಡಿಸಲು ದಾಸವಾಳ ಹೂವಿನ ಫೇಸ್ ಪ್ಯಾಕ್ ಹಚ್ಚಿ
    21 hours ago
    Ants
    ಮನೆಯಲ್ಲಿ ಇರುವೆಗಳ ಕಾಟ ಹೆಚ್ಚಾಗಿದೆಯೇ? ಹಾಗಾದ್ರೆ ನೀರಿಗೆ ಇದನ್ನು ಬೆರೆಸಿ ನೆಲವನ್ನು ಸ್ವಚ್ಛಗೊಳಿಸಿ
    22 hours ago
    burning sensation during urination
    ಮೂತ್ರ ವಿಸರ್ಜನೆಯ ಸಮಯದಲ್ಲಿ ಸುಡುವ ಸಂವೇದನೆ ಇದ್ದರೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ತಿಳಿಯಿರಿ
    2 days ago
    Coconut oil and vitamin E
    ಕೂದಲಿಗೆ ತೆಂಗಿನ ಎಣ್ಣೆ ಮತ್ತು ವಿಟಮಿನ್ ಇ ಮಿಕ್ಸ್ ಮಾಡಿ ಹಚ್ಚುವುದು ಪ್ರಯೋಜನಕಾರಿಯೇ? 
    2 days ago
    Postpartum constipation
    ಹೆರಿಗೆಯ ನಂತರ ಮಲಬದ್ಧತೆ ಏಕೆ ಉಂಟಾಗುತ್ತದೆ? ತಿಳಿಯಿರಿ
    3 days ago
Reading: ಹಿರಿಯ ಮಕ್ಕಳ ತಜ್ಞ ಡಾ.ದೇವರಾಜ್ ನಿವೃತ್ತಿ | ಸಹೋದ್ಯೋಗಿಗಳಿಂದ ಬೀಳ್ಕೊಡುಗೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಹಿರಿಯ ಮಕ್ಕಳ ತಜ್ಞ ಡಾ.ದೇವರಾಜ್ ನಿವೃತ್ತಿ | ಸಹೋದ್ಯೋಗಿಗಳಿಂದ ಬೀಳ್ಕೊಡುಗೆ

News Desk Chitradurga News
Last updated: 1 August 2026 08:06
News Desk Chitradurga News
2 months ago
Share
ಹಿರಿಯ ಮಕ್ಕಳ ತಜ್ಞ ಡಾ.ದೇವರಾಜ್ ನಿವೃತ್ತಿ | ಸಹೋದ್ಯೋಗಿಗಳಿಂದ ಬೀಳ್ಕೊಡುಗೆ
ಹಿರಿಯ ಮಕ್ಕಳ ತಜ್ಞ ಡಾ.ದೇವರಾಜ್ ನಿವೃತ್ತಿ | ಸಹೋದ್ಯೋಗಿಗಳಿಂದ ಬೀಳ್ಕೊಡುಗೆ
SHARE

CHITRADURGA NEWS | 01 AUGUST 2026

ಚಿತ್ರದುರ್ಗ: ವೈದ್ಯಕೀಯ ಕ್ಷೇತ್ರದಲ್ಲಿ ಉದಯೋನ್ಮುಖ ವೈದ್ಯರು ಹಾಗೂ ಹೌಸ್ ಸರ್ಜನ್‍ಗಳಿಗೆ ಸರಿಯಾದ ದಿಕ್ಕು ತೋರಿಸಲು, ತರಬೇತಿ ನೀಡಲು ಮಾರ್ಗದರ್ಶಿ ಹಾಗೂ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿಎಂಸಿಆರ್‍ಐ) ಡೀನ್ ಹಾಗೂ ನಿರ್ದೇಶಕ ಡಾ. ಬಿ.ವೈ.ಯುವರಾಜ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸಾಮರ್ಥ್ಯವಂತರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ | ರಿಪುನ್ ಬೋರಾ

ನಗರದ ಐಎಂಎ ಸಭಾಂಗಣದಲ್ಲಿ ಗುರುವಾರ ಸಿಎಂಸಿಆರ್‍ಐ ಬೋಧಕ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಮಕ್ಕಳ ತಜ್ಞ ಡಾ. ಎಸ್. ಹೆಚ್. ದೇವರಾಜ್ ಅವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಆಸ್ಪತ್ರೆಗೆ ಬರುವ ಹೌಸ್ ಸರ್ಜನ್‍ಗಳು (ಇಂಟರ್ನ್ಸ್) ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಡಾ. ದೇವರಾಜ್ ಅವರಂತಹ ಹಿರಿಯ ಹಾಗೂ ಅನುಭವಿ ಮಾರ್ಗದರ್ಶಕರ ಅಗತ್ಯವಿದೆ. ಹೊಸದಾಗಿ ಬರುವ ವೈದ್ಯರು ಆರಂಭದಲ್ಲಿ ಅಸ್ಪಷ್ಟತೆಯಿಂದ ಇರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಸಿಗುವುದು ಅವರ ಪುಣ್ಯದ ಫಲ. ಆದ್ದರಿಂದ ಡಾ. ದೇವರಾಜ್ ಅವರು ನಮ್ಮ ಸಂಸ್ಥೆಯಲ್ಲಿ ಕನಿಷ್ಠ ಇನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ಯುವ ವೈದ್ಯರನ್ನು ತರಬೇತುಗೊಳಿಸಬೇಕು ಎಂದು ಮನವಿ ಮಾಡಿದರು.

ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಪ್ರಸ್ತಾಪವಾಗುತ್ತಿದ್ದ ‘ಆಸ್ಪತ್ರೆ ದಿನ’ ಆಚರಣೆಯನ್ನು ಶೀಘ್ರದಲ್ಲೇ ನಡೆಸಲಾಗುವುದು. ವರ್ಷವಿಡೀ ಅತ್ಯುತ್ತಮವಾಗಿ ಶ್ರಮಿಸಿದ ವೈದ್ಯರು, ನಸಿರ್ಂಗ್ ಅಧಿಕಾರಿಗಳು ಹಾಗೂ ಗ್ರೂಪ್-ಡಿ ಸಿಬ್ಬಂದಿ ಗುರುತಿಸಿ ಗೌರವಿಸುವ ಸಲುವಾಗಿ ಆಸ್ಪತ್ರೆಯಲ್ಲೇ ಒಂದು ವಿಶೇಷ ನಿಧಿ ರೂಪಿಸಲಾಗುವುದು. ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆ ಮತ್ತು ಸೇವೆ ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬರೂ ಡಾ. ದೇವರಾಜ್ ಅವರಂತೆ ಉತ್ತಮ ಹೆಸರುಗಳಿಸಿ, ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಪ್ರತಿ ತಾಲ್ಲೂಕಿನಲ್ಲಿ ರೈತರ ಸಭೆ ನಡೆಸಿ ಬಿತ್ತನೆ ವೈಫಲ್ಯ ವಿಮೆಗೆ ಕ್ರಮ ಕೈಗೊಳ್ಳಿ | ಜಿಲ್ಲಾಧಿಕಾರಿ

ಮಕ್ಕಳ ವಿಭಾಗದ ಸೇವೆಯನ್ನು ಉನ್ನತ ಮಟ್ಟಕ್ಕೇರಿಸಿದ ಡಾ.ದೇವರಾಜ್: ಚಿತ್ರದುರ್ಗ ಸಿಎಂಸಿಆರ್‍ಐ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ) ಮಕ್ಕಳ ವಿಭಾಗದಿಂದ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಮೂಲಕ ಮತ್ತು ಆಸ್ಪತ್ರೆಯ ಪ್ರಗತಿಗೆ ಶ್ರಮಿಸುವ ಮೂಲಕ ಹಿರಿಯ ಮಕ್ಕಳ ತಜ್ಞ ಡಾ. ಎಸ್.ಎಚ್. ದೇವರಾಜ್ ಅವರು ಇಡೀ ವಿಭಾಗವನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಶ್ಲಾಘಿಸಿದರು.

ಡಾ. ದೇವರಾಜ್ ಅವರು 2005ರಲ್ಲಿ ಜಿಲ್ಲಾಸ್ಪತ್ರೆಗೆ ಸೇರ್ಪಡೆಗೊಂಡಿದ್ದರು. ಆರಂಭಿಕ ದಿನಗಳಲ್ಲಿ ವೈದ್ಯರ ಕೊರತೆಯ ನಡುವೆಯೂ 24 ಗಂಟೆಗಳ ಕಾಲ ಸತತವಾಗಿ ಕರ್ತವ್ಯ ನಿರ್ವಹಿಸುತ್ತಾ, ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಿದ್ದಾರೆ. ಕೆಲ ವರ್ಷಗಳ ಕಾಲ ಒಬ್ಬರೇ ಇಡೀ ಮಕ್ಕಳ ವಿಭಾಗದ ಜವಾಬ್ದಾರಿಯನ್ನು ಹೊರಬಲ್ಲ ಸಾಮಥ್ರ್ಯ ತೋರಿಸಿ, ಹೊರರೋಗಿಗಳು ಹಾಗೂ ಒಳರೋಗಿಗಳನ್ನು ಆರೈಕೆ ಮಾಡಿದ್ದಾರೆ. ನಂತರ ಎಸ್‍ಎನ್‍ಸಿಯು ಸೇರಿದಂತೆ ಹಲವು ವಿಭಾಗಗಳನ್ನು ಸಕ್ರಿಯಗೊಳಿಸಿ, ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಹೊಸ ಮೆರುಗು ತಂದಿದ್ದಾರೆ ಎಂದು ಸ್ಮರಿಸಿದರು.

ಸೇವೆ, ಪ್ರೀತಿ ಮತ್ತು ಸಮಾಧಾನವೇ ವೈದ್ಯರ ಅಸಲಿ ಅಸ್ತ್ರ: ಬಿಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಮಕ್ಕಳ ತಜ್ಞ ಡಾ. ಎಸ್.ಹೆಚ್. ದೇವರಾಜ್, ವೈದ್ಯಕೀಯ ವೃತ್ತಿ ಎಂಬುದು ಕೇವಲ ಔಷಧ ಮತ್ತು ಚಿಕಿತ್ಸೆಗೆ ಸೀಮಿತವಾಗಿರದೆ, ರೋಗಿಗಳಿಗೆ ಪ್ರೀತಿ, ಸಾಂತ್ವನ ಮತ್ತು ಸಕಾರಾತ್ಮಕ ಶಕ್ತಿ ನೀಡುವ ಪವಿತ್ರ ಸೇವೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಸಂಘಟನ್ ಸೃಜನ್ ಸಭೆ | ಮುಖಂಡರು–ಕಾರ್ಯಕರ್ತರ ನಡುವೆ ವಾಗ್ವಾದ

ಆಸ್ಪತ್ರೆಯಲ್ಲಿ ತಮ್ಮ ಸೇವಾ ದಿನಗಳ ಅನುಭವಗಳನ್ನು ಮೆಲಕು ಹಾಕಿದ ಡಾ. ದೇವರಾಜ್, ವೈದ್ಯರ ಕೈಗುಣ ಎನ್ನುವುದು ಕೇವಲ ಔಷಧಿಯಲ್ಲಿ ಇರುವುದಿಲ್ಲ. ರೋಗಿ ಹಾಗೂ ಅವರ ಪೋಷಕರೊಂದಿಗೆ ನಾವು ಹೇಗೆ ಸ್ಪಂದಿಸುತ್ತೇವೆ, ಅವರ ನೋವಿಗೆ ಹೇಗೆ ಧೈರ್ಯ ತುಂಬುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳ ಚಿಕಿತ್ಸೆ ವೇಳೆ ಪೋಷಕರೊಂದಿಗೆ ಸೌಜನ್ಯದಿಂದ ವ್ಯವಹರಿಸಿ, ಅವರಿಗೆ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಅರ್ಧ ರೋಗ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ನಿರಂತರ ಒತ್ತಡ ಮತ್ತು ಅಪೇಕ್ಷೆಗಳಿರುತ್ತವೆ. ಪ್ರತಿಯೊಂದು ಸಣ್ಣ ವಿಚಾರಕ್ಕೂ ವೈದ್ಯರೇ ನೇರ ಹೊಣೆಯಾಗಬೇಕಾದ ಪರಿಸ್ಥಿತಿ ಬಂದಾಗಲೂ ಧೃತಿಗೆಡದೆ, ದಿನದ 24 ಗಂಟೆಯೂ ಮೊಬೈಲ್ ಕರೆಗಳಿಗೆ ಲಭ್ಯವಿದ್ದು ಸೇವೆ ಸಲ್ಲಿಸಿದ್ದೇನೆ. ರಜೆ ದಿನಗಳಲ್ಲೂ ಕರ್ತವ್ಯ ನಿರತನಾಗಿದ್ದ ನನಗೆ ಕುಟುಂಬದ ಸಹಕಾರ ಮತ್ತು ಸಹೋದ್ಯೋಗಿಗಳ ಬೆಂಬಲವೇ ಅತಿ ದೊಡ್ಡ ಬಲವಾಗಿತ್ತು ಎಂದು ಸ್ಮರಿಸಿದರು.

ತಮ್ಮ ಸುದೀರ್ಘ ವೃತ್ತಿಜೀವನದ ಯಶಸ್ಸಿಗೆ ಕಾರಣರಾದ ಆಸ್ಪತ್ರೆಯ ಹಿರಿಯ ಅಧಿಕಾರಿಗಳು, ಆರ್.ಸಿ.ಹೆಚ್. ಅಧಿಕಾರಿಗಳು, ಸಹೋದ್ಯೋಗಿ ವೈದ್ಯರಿಗೆ ಹಾಗೂ ಶುಶ್ರೂಷಕ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ತಮ್ಮ ವೃತ್ತಿ ಜೀವನದಲ್ಲಿ ಸ್ವಂತ ಹಿತಾಸಕ್ತಿ ಬದಿಗೊತ್ತಿ ಸದಾ ಬೆನ್ನೆಲುಬಾಗಿ ನಿಂತ ಧರ್ಮಪತ್ನಿ ಹಾಗೂ ಕುಟುಂಬದ ತ್ಯಾಗ ಸ್ಮರಿಸಿ ಭಾವುಕರಾದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 31 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?

ವೈದ್ಯಕೀಯ ಕ್ಷೇತ್ರಕ್ಕೆ ಬರುವ ಯುವ ವೈದ್ಯರು ರೋಗಿಗಳ ಸೇವೆಗೆ ಆದ್ಯತೆ ನೀಡಬೇಕು. ಧನಾತ್ಮಕ ಚಿಂತನೆ ಹಾಗೂ ತಾಳ್ಮೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಸಿಗುವ ಗೌರವ ಮತ್ತು ತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಕಿರಿಯ ವೈದ್ಯರಿಗೆ ಕಿವಿಮಾತು ಹೇಳಿದರು.

ಕವಿ ಜಿ.ಎಸ್. ಶಿವರುದ್ರಪ್ಪನವರ ಸಾಲುಗಳನ್ನು ಸ್ಮರಿಸಿದ ಅವರು, “ಎನಿತು ಜನ್ಮದಲ್ಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ, ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ? ಎಂಬಂತೆ ನಮ್ಮ ಮೇಲೆ ಸಮಾಜದ, ರೋಗಿಗಳ, ಆಸ್ಪತ್ರೆಯ ಹಾಗೂ ಸಿಬ್ಬಂದಿಗಳ ದೊಡ್ಡ ಋಣವಿದೆ. ಆ ಋಣವನ್ನು ತೀರಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಎಂಸಿಆರ್‍ಐ ಬೋಧಕ ಆಸ್ಪತ್ರೆಯ ಹಿರಿಯ ವೈದ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪಿಡಿಯಾಟ್ರಿಕ್ ವಿಭಾಗದ ಸಿಬ್ಬಂದಿ ಹಾಗೂ ನಗರದ ಪ್ರಮುಖ ವೈದ್ಯರು ಉಪಸ್ಥಿತರಿದ್ದು, ಡಾ. ದೇವರಾಜ್ ಅವರ ಸುದೀರ್ಘ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಮಕ್ಕಳ ತಜ್ಞರು: ಗ್ರಾಮೀಣ ಭಾಗದ ಶಾಲೆಯಿಂದ ಪ್ರಾಥಮಿಕ ಶಿಕ್ಷಣ ಆರಂಭಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಮಕ್ಕಳ ತಜ್ಞ ಡಾ. ಎಸ್.ಎಚ್. ದೇವರಾಜ್ ಅವರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಹೋಂ ಸ್ಟೇ ನೋಂದಣಿಗೆ ಸೂಚನೆ

ಜುಲೈ 22, 1966 ರಂದು ಮೊಳಕಾಲ್ಮೂರಿನಲ್ಲಿ ಜನಿಸಿದ ಇವರು, ಶಿಕ್ಷಕರಾದ ಎಂ. ಹನುಮಂತಪ್ಪ ಹಾಗೂ ಗೃಹಿಣಿ ಎಸ್.ಎಲ್. ಅನಸೂಯಮ್ಮ ದಂಪತಿಯ ಪುತ್ರ. ಚಿತ್ರದುರ್ಗ ತಾಲೂಕಿನ ದಂಡಿನಕುರುಬರಹಟ್ಟಿಯ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ವ್ಯಾಸಂಗ ಮಾಡಿದ ಡಾ. ದೇವರಾಜ್, ನಂತರ ಚಿತ್ರದುರ್ಗದ ನ್ಯಾಷನಲ್ ಚಿನ್ಮೂಲಾದ್ರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. 

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಕಾಲೇಜಿಗೆ 4ನೇ ಸ್ಥಾನ ಪಡೆದಿದ್ದರು. ಬಳ್ಳಾರಿಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದ ಇವರು, ‘ಅನಾಟಮಿ’ ವಿಷಯದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು. ತದನಂತರ, 2002 ರಲ್ಲಿ ‘ಇನ್-ಸರ್ವಿಸ್’ ಕೋಟಾದಡಿಯಲ್ಲಿ ಗುಲ್ಬರ್ಗದ ಎಂಆರ್‍ಎಂಸಿಯಲ್ಲಿ ‘ಪಿಜಿ ಡಿಪ್ಲೋಮಾ (DCH)” ಪೂರ್ಣಗೊಳಿಸಿ, RHUHSನಲ್ಲಿ ಡಿ.ಸಿ.ಹೆಚ್ ವಿಭಾಗಕ್ಕೆ ಟಾಪರ್ ಆಗಿ ಸಾಧನೆ ಮಾಡಿದ್ದರು. 

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಇವರು 1991-1992 ರಲ್ಲಿ ಬಳ್ಳಾರಿ ಜಿಲ್ಲೆಯ ಎಂಎಂ ವಾಡ ಪಿಹೆಚ್‍ಸಿಯಲ್ಲಿ ಮೆಡಿಕಲ್ ಆಫೀಸರ್ ಆಗಿ ಸೇವೆ ಆರಂಭಿಸಿದರು. ನಂತರ 1992 ರಿಂದ 1995 ರವರೆಗೆ ಹೊಳಲ್ಕೆರೆ ತಾಲೂಕಿನ ಗೌಡಿಹಳ್ಳಿ ಪಿಹೆಚ್‍ಸಿನಲ್ಲೂ, 1995 ರಿಂದ 2000 ರವರೆಗೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪಿಹೆಚ್‍ಸಿಯಲ್ಲೂ ಸೇವೆ ಸಲ್ಲಿಸಿದರು. 

ಇದನ್ನೂ ಓದಿ: ಶುಲ್ಕ ಮರುಪಾವತಿ, ವಿದ್ಯಾರ್ಥಿ ವೇತನ | ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬಳಿಕ 2000 ರಿಂದ 2002 ರವರೆಗೆ ಗುಲ್ಬರ್ಗದ ಎಂಆರ್‍ಎಂಸಿಯಲ್ಲಿ ಇನ್-ಸರ್ವಿಸ್ ಪಿಜಿ ಪೂರ್ಣಗೊಳಿಸಿದರು. ಇವರ ಧರ್ಮಪತ್ನಿ ಎಸ್. ಜಿ. ಶ್ವೇತಾ (M.sc) ಅವರಾಗಿದ್ದು, ಇಬ್ಬರು ಪುತ್ರರಾದ ಎಸ್.ಡಿ. ಅಕ್ಷಿತ್ ಹಾಗೂ ಎಸ್.ಡಿ. ಪವನ್ ಇಬ್ಬರೂ ಸಹ ಎಂ.ಬಿ.ಬಿ.ಎಸ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Chitradurga newsFarewellSenior Pediatrician Dr. Devraj Retirementಚಿತ್ರದುರ್ಗ ನ್ಯೂಸ್ಬೀಳ್ಕೊಡುಗೆಹಿರಿಯ ಮಕ್ಕಳ ತಜ್ಞ ಡಾ.ದೇವರಾಜ್ ನಿವೃತ್ತಿ
Share This Article
Facebook Email Print
Previous Article ಪಿ. ಕೋದಂಡರಾಮಯ್ಯ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ | ಕೇಂದ್ರ ಮಧ್ಯಪ್ರವೇಶಕ್ಕೆ ನೀರಾವರಿ ಹೋರಾಟ ಸಮಿತಿ ಆಗ್ರಹ
Next Article ಬ್ರಾಹ್ಮಣ ಅಭಿವೃದ್ಧಿ ಮಂಡಳಿ | ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ
Leave a Comment

Leave a Reply Cancel reply

Your email address will not be published. Required fields are marked *

Damage to Bhadra Canal
ಭದ್ರಾ ಕಾಲುವೆಗೆ ಹಾನಿ | ದೂರು ದಾಖಲು
ಮುಖ್ಯ ಸುದ್ದಿ
Bhumi Puja for the construction of National Vidyakendra
ಚಿತ್ರದುರ್ಗದ ಹೊರವಲಯದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ನಿರ್ಮಾಣಕ್ಕೆ‌ ಭೂಮಿ ಪೂಜೆ
ಮುಖ್ಯ ಸುದ್ದಿ
ಟಿ. ರಘುಮೂರ್ತಿ
ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ | ಸಚಿವ ಟಿ.ರಘುಮೂರ್ತಿ
ಮುಖ್ಯ ಸುದ್ದಿ
Narendra Modi's Birthday | BJP's Special Puja at Neelakanteshwara Temple
ನರೇಂದ್ರ ಮೋದಿ ಜನ್ಮದಿನ | ನೀಲಕಂಠೇಶ್ವರ ದೇವಸ್ಥಾನದಲ್ಲಿ ಬಿಜೆಪಿ ವಿಶೇಷ ಪೂಜೆ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up