CHITRADURGA NEWS | 31 JULY 2026
ಚಿತ್ರದುರ್ಗ: ಜಿಲ್ಲೆಯಲ್ಲಿ ಜೂನ್-ಜುಲೈ ತಿಂಗಳಲ್ಲಿ 101.7 ಮಿ.ಮೀ. ವಾಡಿಕೆ ಮಳೆಯ ನಿರೀಕ್ಷೆಯಿತ್ತು. ಆದರೆ 72.6 ಮಿ.ಮೀ ಮಳೆಯಾಗಿದ್ದು, ಶೇ.29 ರಷ್ಟು ಮಳೆಯ ಕೊರತೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 3,39,304 ಹೆಕ್ಟೇರ್ ಕೃಷಿ ಭೂಮಿಯ ಪೈಕಿ, ಕೇವಲ 65,340 ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದ್ದು, ಬಿತ್ತನೆ ಪ್ರಮಾಣ ಶೇ.19.26 ರಷ್ಟಿದೆ. ಈ ಹಿನ್ನಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ರೈತರೊಂದಿಗೆ ಸಭೆ ನಡೆಸಿ, ಬಿತ್ತನೆ ವೈಫಲ್ಯ ವಿಮೆಗೆ ಶಿಫಾರಸ್ಸು ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೃಷಿ ಹಾಗೂ ವಿಮಾ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ಅರ್ಜಿ ಅಹ್ವಾನ
ಈ ಕುರಿತು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಪಿ.ಎಂ.ಎಫ್.ಬಿ.ವೈ ಅಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ವೈಫಲ್ಯ ಅಡಿ ಸಿಗುವ ವಿಮೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಮುಖ್ಯವಾಗಿ ರೈತರಿಗೆ ಬಿತ್ತನೆ ವೈಫಲ್ಯ ಅಡಿ ನೀಡುವ ವಿಮೆ ಹಾಗೂ ಮಧ್ಯಂತರ ಪರಿಹಾರ ಇವುಗಳ ಬಗೆಗಿನ ಗೊಂದಲಗಳನ್ನು ನಿವಾರಣೆ ಮಾಡಬೇಕು.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ, ವಿಮಾ ಮೊತ್ತದ ಗರಿಷ್ಠ ಶೇ.25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯ ಮಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ, ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸತ್ತದೆ. ಸದ್ಯ ಜಿಲ್ಲೆಯಲ್ಲಿ ಇದೆ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಬಿತ್ತನೆ ಮಾಡುವ ಅಧಿಸೂಚಿತ ಬೆಳೆಗಳಿಗೆ ಮಾತ್ರ ಬಿತ್ತನೆ ವೈಫಲ್ಯ ವಿಮೆ ಅನ್ವಯಿಸುತ್ತದೆ. ಇದನ್ನು ಹೊರತಾಗಿ, ಬಿತ್ತನೆ ಮಾಡಿರುವ ಇತರೆ ಬೆಳೆಗಳಿಗೆ ವಿಮೆ ಸೌಲಭ್ಯ ಮುಂದುವರೆಯುತ್ತದೆ. ಮುಂಬರುವ ದಿನಗಳಲ್ಲಿ ಮಳೆ ಕೊರತೆ ಉಂಟಾಗಿ ಅಧಿಸೂಚಿಸದ ಬೆಳೆಗಳಿಗೂ ತೊಂದರೆಯಾದರೆ, ಮಿಮಾ ಕಂಪನಿ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ ಮಧ್ಯಂತರ ಬೆಳೆ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವುದು.
ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಸಂಘಟನ್ ಸೃಜನ್ ಸಭೆ | ಮುಖಂಡರು–ಕಾರ್ಯಕರ್ತರ ನಡುವೆ ವಾಗ್ವಾದ
ಬೆಳೆ ವಿಮೆ ರೈತರ ಸಂಕಷ್ಟ ಸಮಯದಲ್ಲಿ ನೀಡುವ ಒಂದು ಸಣ್ಣ ಉಪಕ್ರಮವಾಗಿದೆ. ಇದರಿಂದ ಕೃಷಿಯಲ್ಲಿ ರೈತರಿಗೆ ಹೊರಯಾಗುವುದನ್ನು ತಡೆಯಬಹುದು. ಶೀಘ್ರವೇ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೊಜನೆಯಡಿ ಜಿಲ್ಲೆಯಲ್ಲಿ 1.23 ಲಕ್ಷಕ್ಕೂ ಅಧಿಕ ರೈತರು ನೊಂದಾಯಿಸಿಕೊಂಡಿದ್ದಾರೆ. ಯೋಜನೆಯಡಿ ಹೊಸದುರ್ಗ ತಾಲ್ಲೂಕಿನಲ್ಲಿ ರಾಗಿ ಬೆಳೆಯನ್ನು ಅಧಿಸೂಚಿತ ಬೆಳೆಯಾಗಿ ಘೋಷಿಸಿದ್ದು, ಆಗಸ್ಟ್ 14 ರವರೆಗೆ ಬೆಳೆ ವಿಮೆ ನೊಂದಣಿ ಮಾಡಿಸಲು ಅವಕಾಶವಿದೆ.
ಉಳಿದಂತೆ 5 ತಾಲ್ಲೂಕುಗಳಲ್ಲಿಯೂ ಜುಲೈ 31 ಬೆಳೆ ವಿಮೆ ಮಾಡಿಸಲು ಕೊನೆಯ ದಿನವಾಗಿದೆ. ಮಳೆ ಕೊರತೆ ಹಾಗೂ ಬಿತ್ತನೆ ವೈಫಲ್ಯದ ಪರಿಣಾಮ, ಈ 5 ತಾಲ್ಲೂಕುಗಳಲ್ಲಿ ಬೆಳೆ ವಿಮೆ ನೊಂದಣಿಗೆ ಆಗಸ್ಟ್ 15 ರವರೆಗೆ ಅವಕಾಶ ನೀಡಬೇಕು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 31 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?
ಹೊಸದುರ್ಗ ತಾಲ್ಲೂಕಿನಲ್ಲಿ ರಾಗಿ ಬೆಳೆ ವಿಮೆ ನೊಂದಣಿಗೆ ಆಗಸ್ಟ್ 29 ವರೆಗೆ ದಿನಾಂಕ ವಿಸ್ತರಣೆ ಮಾಡಲು ಶಿಫಾರಸ್ಸಿಗೆ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಿತ್ತನೆ ವೈಫಲ್ಯದಡಿ ವಿಮೆ ಪರಿಹಾರ ಬಿಡುಗಡೆಯಾದರೆ, ರೈತರಿಗೆ ವಿಮಾ ಕಂತಿನ ಮೊತ್ತದ 10 ರಿಂದ 11 ಪಟ್ಟು ಹೆಚ್ಚಿನ ಪರಿಹಾರ ದೊರೆಯಲಿದೆ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಸಭೆಯಲ್ಲಿ ಮಾಹಿತಿ ನೀಡಿದರು.
ಇಂಡಿಯನ್ ಫಾರ‍್ಸ್ ಫರ್ಟಿಲೈಜರ್ ಕೋ ಆಪರೇಟಿವ್ ಲಿಮಿಟೆಡ್ ಹಾಗೂ ಜಪಾನಿನ ರಸಗೊಬ್ಬರ ತಯಾರಿಕೆ ಕಂಪನಿಯಾದ ಟೊಕಿಯೋ ಮರೈನ್ ಗ್ರೂಪ್ ಸಹಯೋಗದಲ್ಲಿ ರಚಿತವಾಗಿರುವ ‘ಇಫ್ಕೋ ಟೋಕಿಯೋ ವಿಮಾ ಕಂಪನಿ’ ರೈತರ ಕ್ಷೇಮಾಭಿವೃದ್ಧಿ ಹಿನ್ನಲೆಯಲ್ಲಿಯೇ ಸ್ಥಾಪಿತವಾಗಿದೆ. ಜಿಲ್ಲೆಯಲ್ಲಿ ಶೇ.20ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದ್ದು, ಬಿತ್ತನೆ ವೈಫಲ್ಯ ವಿಮೆಗೆ ಶಿಫಾರಸ್ಸು ಮಾಡಿದರೇ, ಕೂಡಲೇ ಎಲ್ಲಾ ರೈತರಿಗೂ ಪರಿಹಾರ ನೀಡುವುದಾಗಿ ಕಂಪನಿಯ ರಾಜ್ಯ ಕ್ಲೇಮ್ ಇನ್‌ಚಾರ್ಜ್ ಶೈಲೇಂದ್ರಶರ್ಮ ಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಆಗಸ್ಟ್ 6 ರಿಂದ ವಿಶ್ವಕರ್ಮ ಸಮುದಾಯದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ | ಎಂ.ಶಂಕರಮೂರ್ತಿ
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ.ಪ್ರವೀಣ್ ಕುಮಾರ್, ಕೃಷಿ ಇಲಾಖೆ ಉಪನಿರ್ದೇಶಕರಾದ ಶಿವಕುಮಾರ್, ಉಮೇಶ್ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಕೃಷಿ ಸಹಾಯಕ ನಿರ್ದೇಶಕರು, ಅಂಕಿ ಸಂಖ್ಯೆ ಸಂಗ್ರಹಣ ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

