CHITRADURGA NEWS | 17 SEPTEMBER 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ಪ್ರಾಯೋಗಿಕವಾಗಿ ನೀರು ಹರಿಯುತ್ತಿದೆ. ಭದ್ರೆ ನೀರು ಗೋನೂರು ಕೆರೆ ಭರ್ತಿಯಾಗಿ ನೀರು ಮುಂದಕ್ಕೆ ಹರಿದಿದೆ.
ಇದನ್ನೂ ಓದಿ: ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ | ಸಚಿವ ಟಿ.ರಘುಮೂರ್ತಿ
ಆದರೆ, ಈ ಹಂತದಲ್ಲೇ ರೈತರು ನೀರಿಗಾಗಿ ಪೈಪೋಟಿ ನಡೆಸುತ್ತಿದ್ದು, ತಮ್ಮ ಊರುಗಳ ಕೆರೆ, ಕಟ್ಟೆ, ಹಳ್ಳಿಗಳಿಗೆ ನೀರು ಹರಿಸಿಕೊಳ್ಳಲು ಯೋಜನೆಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಕಾಲುವೆ ಹೊಡೆದು ನೀರು ಹರಿಸಿದಂತಹ ಘಟನೆಗಳು ವರದಿಯಾಗುತ್ತಿವೆ.
ಹೊಸದುರ್ಗ-ಹಿರಿಯೂರು ಗಡಿ ಭಾಗ ಲಕ್ಕಿಹಳ್ಳಿ ಫಾರೆಸ್ಟ್ ಬಳಿ ಕಾಲುವೆ ಹೊಡೆದು ಗುರುವಾರ ಹಳ್ಳಕ್ಕೆ ನೀರು ಬಿಟ್ಟ ವೀಡಿಯೋ ಹರಿದಾಡಿದ್ದು, ಸುಮಾರು 40-50 ಕ್ಯೂಸೆಕ್ ನೀರು ಹೊಡೆದ ಕಾಲುವೆಯಿಂದ ಹಳ್ಳಕ್ಕೆ ಹರಿಯುತ್ತಿತ್ತು.
ಸ್ಥಳಕ್ಕೆ ಧಾವಿಸಿದ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ತಕ್ಷಣ ಹೊಡೆದ ನಾಲೆ ದುರಸ್ಥಿ ಮಾಡಿ ಸರಾಗವಾಗಿ ನೀರು ಹರಿಯುವಂತೆ ಮಾಡಿದ್ದಾರೆ.
ಇದನ್ನೂ ಓದಿ: ರೈಲು ಸಂಚಾರದಲ್ಲಿ ಬದಲಾವಣೆ | ನೇರ ರೈಲು ಮಾರ್ಗದ ಕಾಮಗಾರಿ ಹಿನ್ನೆಲೆ
ಇನ್ನೂ ನಾಲೆಯನ್ನೇ ಹೊಡೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೊಸದುರ್ಗ ಉಪವಿಭಾಗ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿರುವುದಾಗಿ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

