CHITRADURGA NEWS | 01 AUGUST 2026
ಚಿತ್ರದುರ್ಗ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಸಿಡಾಕ್ ಚಿತ್ರದುರ್ಗ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 10 ರಿಂದ 21 ರವರೆಗೆ ಸಾಮಾನ್ಯ ವರ್ಗದ ಪುರುಷರು/ಮಹಿಳೆಯರಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಚಿತ್ರದುರ್ಗ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಪ್ರತಿ ತಾಲ್ಲೂಕಿನಲ್ಲಿ ರೈತರ ಸಭೆ ನಡೆಸಿ ಬಿತ್ತನೆ ವೈಫಲ್ಯ ವಿಮೆಗೆ ಕ್ರಮ ಕೈಗೊಳ್ಳಿ | ಜಿಲ್ಲಾಧಿಕಾರಿ
ಈ ಕಾರ್ಯಕ್ರಮದಲ್ಲಿ ಸಾಧನಾ ಪ್ರೇರಣಾ ತರಬೇತಿ, ಉದ್ಯಮಶೀಲರ ಸಾಮಥ್ರ್ಯಗಳನ್ನು ಗುರುತಿಸುವಿಕೆ, ವ್ಯವಸ್ಥಾಪನಾ ಕೌಶಲ್ಯಗಳು, ಹೊಸ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳು, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಲೆಕ್ಕ ಪತ್ರಗಳ ನಿರ್ವಹಣೆ, ಮಾರಾಟದ ತಂತ್ರಗಳು, ಸರ್ಕಾರದ ಯೋಜನೆಗಳು, ಬ್ಯಾಂಕಗಳ ಪಾತ್ರ, ಉದ್ಯಮಶೀಲರ ಅನುಭವ ಹಂಚಿಕೆ, ಸಣ್ಣ ಉದ್ಯಮ ನಿರ್ವಹಣೆ, ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಈ ಅವಧಿಯಲ್ಲಿ ಒಂದು ದಿನ ಕೈಗಾರಿಕೆಗಳಿಗೆ ಭೇಟಿ ನೀಡಿ ಆ ಕೈಗಾರಿಕೆಗಳ ಮಾಲೀಕರ ಜೊತೆಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು.
ಆದುದರಿಂದ ಉದ್ಯಮ ಪ್ರಾರಂಭಿಸಲು ಉತ್ಸುಕರಾಗಿರುವ ಜಿಲ್ಲೆಯ ಸಾಮಾನ್ಯ ವರ್ಗದ ಪುರುಷರು/ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು 18 ರಿಂದ 50 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ. ಶಿಕ್ಷಣ ಹೊಂದಿರಬೇಕು. ಆಸಕ್ತಿಯುಳ್ಳ ಪುರುಷರು/ಮಹಿಳೆಯರು ಆಗಸ್ಟ್ 8ರೊಳಗೆ ಉಪ ನಿರ್ದೇಶಕರು, ಸಿಡಾಕ್, ಚಿತ್ರದುರ್ಗ ಇವರಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 31 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?
ಹೆಚ್ಚಿನ ಮಾಹಿತಿಗಾಗಿ ಶಿವಾನಂದ ವೆಂ. ಎಲಿಗಾರ, ಉಪ ನಿರ್ದೇಶಕರು, ಸಿಡಾಕ್, ಚಿತ್ರದುರ್ಗ ಮೊ ಸಂಖ್ಯೆ 9448812974, ಪಿ. ವಿಜಯ ಕುಮಾರ್, ತರಬೇತುದಾರರು, ಸಿಡಾಕ್, ಚಿತ್ರದುರ್ಗ ಮೊ ಸಂಖ್ಯೆ:7760270058 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

