CHITRADURGA NEWS | 18 September 2026
‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಸಂದಿದ್ದಕ್ಕೆ ಅನಂತಾಭಿನಂದನೆಗಳು.
ಆತ್ಮೀಯರೆ,
ಈ ಮೇಲಿನ ಸ್ಟಿಲ್ ” ಬಿಡುಗಡೆಯ ಬೇಡಿ ” ಚಲನಚಿತ್ರದ್ದು . ಪ್ರಾಯಶಃ 1985 ರಲ್ಲಿ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟವಾದದ್ದು . ಎಫ್.ಬಿ ಗೆಳೆಯ ಗಾನಾಸುಮಾ ಪಟ್ಟಸೋಮನಹಳ್ಳಿ ವಾಟ್ಸಾಪ್ ಮಾಡಿ ನನ್ನನ್ನು ಅಚ್ಚರಿಗೊಳಿಸಿದರು . ಅವರ ಪ್ರೀತಿಗೆ ಧನ್ಯವಾದಗಳು. ಚಿತ್ರವು ತ.ರಾ.ಸು ಕಾದಂಬರಿ ಆಧಾರಿತವಾಗಿದ್ದು ಖ್ಯಾತ ನಿರ್ದೇಶಕರಾದ ದೊರೆ-ಭಗವಾನ್ ಅವರು ಮದರಾಸಿಗೆ ನನ್ನನ್ನು ಕರೆಸಿ ಈ ಚಿತ್ರಕ್ಕೆ ಸಂಭಾಷಣೆ ಬರೆಸಿದ್ದೊಂದು ಸವಿನೆನಪು.
ಈ ಚಿತ್ರದಲ್ಲಿ ನಾನೊಂದು ಪುಟ್ಟ ಗೆಸ್ಟ್ ರೋಲ್ ಮಾಡಬೇಕಾಗಿ ಬಂದಿದ್ದು ಅನಿವಾರ್ಯ ಹಾಗೂ ಆಕಸ್ಮಿಕ ಸಂದರ್ಭ. ಚಿತ್ರದ ಶೂಟಿಂಗ್ ಮದರಾಸಿನ ಬಂಗಲೆಯೊಂದರಲ್ಲಿ ನಡೆದಿತ್ತು . ದೊರೆ-ಭಗವಾನ ರ ಮತ್ತೊಂದು ಚಿತ್ರ ” ಸೇಡಿನ ಹಕ್ಕಿ ” ಚಿತ್ರಕ್ಕೆ ಬರೆದ ಸಂಭಾಷಣೆಯ ರೀಡಿಂಗ್ ಕೊಡಲು ಹೋಗಿದ್ದೆ.
ನಿರ್ದೇಶಕರಿಗೆ ಬಿಡುವಿನ ಸಮಯದಲ್ಲಿ ರೀಡಿಂಗ್ ಕೊಡಬೇಕಿತ್ತು . ಹೀಗಾಗಿ ಶೂಟಿಂಗ್ ಸ್ಪಾಟ್ ನಲ್ಲಿದ್ದೆ . ಆ ದೃಶ್ಯದಲ್ಲಿ ನಟಿಸ ಬೇಕಾದ ಕಲಾವಿದ ಬರುವುದು ವೇಳೆಯಾಗತ್ತಿತ್ತು. ಅನಂತ್ ನಾಗ್ ಅವರಿಗೆ ಬೇರೆ ಶೂಟಿಂಗ್ ಗೆ ಹೋಗುವ ಧಾವಂತ . ಅಲ್ಲೇ ಇದ್ದ ನನ್ನಿಂದಲೇ ಆ ಪಾತ್ರ ಮಾಡಿಸಲು ನಿರ್ದೇಶಕರಿಗೆ ಸೂಚಿಸಿದರು.
ಸದಭಿರುಚಿಯ ನಿರ್ದೇಶಕರೂ ಸಮ್ಮತಿಸಿದರು. ನನಗೇನಂತಹ ಉತ್ಸಾಹವಿರಲಿಲ್ಲ. ಇಷ್ಟು ದೊಡ್ಡ ಬಂಗಲೆಯ ಯಜಮಾನನ ರೀತಿ ನಾನೆಲ್ಲಿ ಕಾಣುತ್ತೇನೆ? ವಯಸ್ಸಿಗೆ ಬಂದ ಮಗಳ ತಂದೆಯ ತರಹವಂತೂ ಕಾಣುವುದೇ ಇಲ್ಲವೆಂದು ಇದ್ದ ವಿಷಯಗಳನ್ನು ಹೇಳಿದೆ.
ನಿರ್ದೇಶಕರು ಯೋಚಿಸಿ ಮಗಳು ಬೇಡ ಡೈಲಾಗ್ ನಲ್ಲಿ ತಂಗಿಯೆಂದು ಹೇಳಿ ಎಂದು ಸೂಚಿಸಿದರು ಅನಂತ್ ಒತ್ತಾಯಕ್ಕೆ ನನಗೆ ಮೇಕಪ್ಪೂ ಹಾಕದೆ ನನ್ನದೇ ಡ್ರೆಸ್ ನಲ್ಲಿ ನಿಲ್ಲಿಸಿ ಶೂಟಿಂಗ್ ಮಾಡಿ ಮುಗಿಸಿದರು. ನಂತರ ಸಹೃದಯಿ ನಿರ್ದೇಶಕರು ನನಗೂ ಒಳ್ಳೆಯ ಪಬ್ಲಿಸಿಟಿ ಕೊಟ್ಟರೆನ್ನಿ . ಇಂತದ್ದೇ ಸನ್ನಿವೇಶದಲ್ಲಿ ವಿಷ್ಣು ಅವರೊಂದಿಗೆ ” ಜನನಾಯಕ ” ಚಿತ್ರದಲ್ಲೂ ಅಭಿನಯಿಸಿದ್ದುಂಟು. ಇವೆಲ್ಲಾ ಈಗ ಸವಿನೆನಪುಗಳಲ್ಲವೆ.
(ಬಿ.ಎಲ್.ವೇಣು ಅವರ ಫೇಸ್ ಬುಕ್ ವಾಲ್ ನಿಂದ ಎರವಲು ಪಡೆದ ಬರಹ.)
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

