CHITRADURGA NEWS | 01 AUGUST 2026
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಎಐಸಿಸಿ ವತಿಯಿಂದ ನಡೆಯುತ್ತಿರುವ ಸಂಘಟನಾ ಸೃಜನ್ ಅಭಿಯಾನದ ಸಭೆಗಳಲ್ಲಿ ಗೊಂದಲ ಸೃಷ್ಟಿಸಿದ ಆರೋಪದ ಮೇಲೆ 3 ಸ್ಥಳೀಯ ಮುಖಂಡರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರಣ ಕೇಳಿ ನೋಟಿಸ್ ನೀಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಸಂಘಟನ್ ಸೃಜನ್ ಸಭೆ | ಮುಖಂಡರು–ಕಾರ್ಯಕರ್ತರ ನಡುವೆ ವಾಗ್ವಾದ
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಜುಲೈ 31, 2026 ರಂದು ಹೊರಡಿಸಿದ ನೋಟಿಸ್‌ನಲ್ಲಿ, ಶಿಸ್ತುಬದ್ಧವಾಗಿ ನಡೆಯಬೇಕಾದ ಸಭೆಗಳಲ್ಲಿ ಎಐಸಿಸಿ ಹಾಗೂ ಕೆಪಿಸಿಸಿ ವೀಕ್ಷಕರಿಗೆ ಸಭೆ ನಡೆಸಲು ಅಡ್ಡಿಪಡಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಆರೋಪ ಏನು?
ನೋಟಿಸ್ ಪ್ರಕಾರ, ಸ್ಥಳೀಯ ಮುಖಂಡರು ಸಭೆಯ ಮಧ್ಯದಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಿ, “ಗದ್ದಲ ಎಬ್ಬಿಸಿ, ಎಐಸಿಸಿ ವೀಕ್ಷಕರಿಗೆ ಸಭೆ ನಡೆಸಲು ಅಡ್ಡಿ ಪಡಿಸಿದ್ದಾರೆ”. ಅಲ್ಲದೆ ಪಕ್ಷದ ನಿಯಮಗಳನ್ನು ಪಾಲಿಸದೆ, ಗದ್ದಲ ಉಂಟು ಮಾಡಿ ಸಭೆಯಲ್ಲಿ ಉಪಸ್ಥಿತರಿದ್ದು ಎಐಸಿಸಿ ವೀಕ್ಷಕರಿಗೆ ಮುಜುಗರ ಉಂಟು ಮಾಡಿದ್ದಾರೆ ಎಂದು ದೂರಲಾಗಿದೆ.
ಯಾರ್ಯಾರಿಗೆ ನೋಟೀಸ್ ?
1. ಬಿ.ಟಿ. ಜಗದೀಶ್- ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ ಡಿಸಿಸಿ
2. ಶ್ರೀಮತಿ ಗೀತಾ ನಂದಿನಿಗೌಡ – ಅಧ್ಯಕ್ಷರು, ಚಿತ್ರದುರ್ಗ ಡಿಸಿಸಿ ಮಹಿಳಾ ಕಾಂಗ್ರೆಸ್
3. ಗುರುರಾಜ್ ಶೆಟ್ಟಿ- ಉಪಾಧ್ಯಕ್ಷರು, ಪ್ರೊಫೆಷನಲ್ ಸೆಲ್, ಚಿತ್ರದುರ್ಗ ಡಿಸಿಸಿ
ಇದನ್ನೂ ಓದಿ: ಸಾಮರ್ಥ್ಯವಂತರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ | ರಿಪುನ್ ಬೋರಾ
ಕೆಪಿಸಿಸಿ ಈ ಮೂವರಿಗೂ ನೋಟಿಸ್ ತಲುಪಿದ ಒಂದು ವಾರದೊಳಗಾಗಿ ಲಿಖಿತ ವಿವರಣೆ ನೀಡುವಂತೆ ಸೂಚಿಸಿದೆ. ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಪಕ್ಷವು ಮುಂದಿನ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಲಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

