CHITRADURGA NEWS | 07 SEPTEMBER 2025
ಚಿತ್ರದುರ್ಗ: ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಕಲಾ ಮಾಧ್ಯಮದ ಮೂಲಕ ಹೊರತೆಗೆಯುವ ಪ್ರಯತ್ನದ ಭಾಗವೇ ಚಿಗುರು ಕಾರ್ಯಕ್ರಮ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಹೇಳಿದರು.

ಇದನ್ನೂ ಓದಿ: ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರಿಗೆ ಸೇರಿದ ಕಾರು ಅಪಘಾತ
ಹೊಸದುರ್ಗ ತಾಲ್ಲೂಕಿನ ಬಾಗೂರಿನ ವಿದ್ಯಾವಾಹಿನಿ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಚಿಗುರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಗುರು ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಹತ್ವದ ಯೋಜನೆಯು ಹೌದು. ಇಂದು ನಮ್ಮ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿದ್ದೇವೆ. ಹಾಗಾಗಿ ಅವರ ಮಾನಸಿಕ ವಿಕಾಸ ಕುಂಠಿತವಾಗಲಿಕ್ಕೆ ನಾವೇ ಕಾರಣವಾಗುತ್ತಿದ್ದೇವೆ ಎಂದು ತಿಳಿಸಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಪಠ್ಯೇತರವಾಗಿಯೂ ಅವರನ್ನು ಬೆಳೆಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಪ್ರದರ್ಶನವಾಗುವ ಸುಗಮ ಸಂಗೀತ, ಜಾನಪ ಸಂಗೀತ, ನಾಟಕ ಇತ್ಯಾದಿಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಚಿಗುರು ಕಾರ್ಯಕ್ರಮದ ಅಂಗವಾಗಿ ಶಾಲೋಮ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಎಂ.ವೇದಿಕಾ ಅವರಿಂದ ಸುಗಮ ಸಂಗೀತ, ನಾಗೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಿ.ಕೆ.ಸ್ವಾಮಿ ಮತ್ತು ತಂಡದವರಿಂದ ಜಾನಪದ ಗೀತೆಗಳು, ಭೂಮಿಕಾ ಮತ್ತು ತಂಡದವರಿಂದ ಸಮೂಹ ನೃತ್ಯ, ಭುವನ್ಯ ರಾವ್ ಮತ್ತು ತಂಡದವರಿಂದ ನಾಟಕ ಹಾಗೂ ವಿದ್ಯಾವಾಹಿನಿ ವಿದ್ಯಾನಿಕೇತನ ಶಾಲೆಯ ಕೆ.ಆರ್.ಬಿಂದುಶ್ರೀ ಅವರಿಂದ ಏಕ ಪಾತ್ರಾಭಿನಯ ನಡೆಸಿಕೊಟ್ಟರು.
ಇದನ್ನೂ ಓದಿ: ಯುವನಿಧಿ ಫಲಾನುಭವಿಗಳು ಈ ನೊಂದಣಿ ಮಾಡಿಲ್ಲವೆಂದರೆ ಹಣ ಬರುವುದಿಲ್ಲ….
ಕಾರ್ಯಕ್ರಮದಲ್ಲಿ ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಶಾರದಮ್ಮ, ಸ್ವಾಮಿ ವಿವೇಕಾನಂದ ಮತ್ತು ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಕೆ.ಶ್ರೀನಿವಾಸ್, ಕಾರ್ಯದರ್ಶಿ ಬಿ.ಜಿ.ರಂಗನಾಥ್, ವಿದ್ಯಾವಾಹಿನಿ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕ ಕೆ.ಮಂಜುನಾಥ್, ಕಲಾವಿದ ಕಂಠೇಶ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
