CHITRADURGA NEWS | 10 JULY 2025
ಚಿತ್ರದುರ್ಗ: ನಗರದ ಸಿದ್ದೇಶ್ವರ ಜ್ಯೂಯಲರ್ಸ್ ನಾ ಕವಿತಾ ವಿರೇಶ್ ರವರ ಸಮೃದ್ದಿ ಸದನದ ಮನೆಯಲ್ಲಿ ನಿನ್ನೆ ರಾತ್ರಿ ಬ್ರಹ್ಮ ಕಮಲದ ಹೂವುಗಳು ಆರಳಿವೆ.

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಸುಮಾರು 14 ಬ್ರಹ್ಮಕಮಲ ಹೂವು ಏಕಕಾಲಕ್ಕೆ ಅರಳಿ ನಿಂತಿವೆ. ಬ್ರಹ್ಮಕಮಲ ಹೆಸರೇ ಹೇಳುವಂತೆ ಹಿಂದೂ ಪುರಾಣಗಳಲ್ಲಿ ಕಂಡುಬರುವ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಬ್ರಹ್ಮನ ಹೆಸರಿನಲ್ಲಿರುವ ಅಪರೂಪದ ಪುಷ್ಪವಿದು. ಒಂದೂವರೆ ವರ್ಷದಲ್ಲಿ ಹೂ ಬಿಡುವುದು ಆರಂಭವಾಗುತ್ತದೆ.
ಹೂವು ಬಿಡುವುದು ಸಾಮಾನ್ಯವಾಗಿ ಮಧ್ಯೆ ಮಾನ್ಸೂನ್ ಕಾಲದ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ. ಒಂದೇ ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ಮೈತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ.
ಬ್ರಹ್ಮಕಮಲದ ಹೂವು ಅರಳುವ ಪ್ರಕ್ರಿಯೆಯೇ ಅತ್ಯಂತ ವಿಸ್ಮಯಕಾರಿಯಾದದ್ದು. ಈ ಹೂವನ್ನು ಬೆಳೆಸುವ ಎಲ್ಲರೂ ಅದು ಅರಳುವಾಗ ಕಾದುಕುಳಿತಿರುತ್ತಾರೆ. ಏಕೆಂದರೆ ಅರಳಿ ವಿಸ್ಮಯ ಮೂಡಿಸುವ ಈ ಹೂವಿನ ಆಯಸ್ಸು ತುಂಬಾ ಕಡಿಮೆ.
ಇದನ್ನೂ ಓದಿ: ಹೊಲದಲ್ಲಿ ಬಂಗಾರ ಸಿಕ್ಕಿದೆ ಎಂದು ವಂಚನೆ | 35 ಲಕ್ಷ ರೂ.ಗೆ 2 ಕೆಜಿ ನಕಲಿ ಚಿನ್ನ ಮಾರಿದ್ದ ಆರೋಪಿಗಳು ಅಂದರ್
ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದಿರ ಬರುವುದನ್ನು ಕಾದು ಸರಿಸುಮಾರು 10 ಗಂಟೆಗೆ ಅರಳಿ ಬೆಳಗಾಗುವ ಮುಂಚೆಯೇ ಮುದುಡಿ ಮುದ್ದೆಯಾಗಿರುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
