ಮುಖ್ಯ ಸುದ್ದಿ
ಕತಾರ್ ದೇಶದಲ್ಲಿ ಭಾರತೀಯ ಓಲಿಂಪಿಯನ್ ಎಂ.ಕೆಂಪಯ್ಯ ಜೀವನ ಚರಿತ್ರೆ ಬಿಡುಗಡೆ

CHITRADURGA NEWS | 24 JANUARY 2024
ದೋಹಾ: ಕತಾರ್ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯ ಫುಟ್‍ಬಾಲ್ ತಂಡದ ಉಪಸ್ಥಿತಿಯಲ್ಲಿ ಒಲಿಂಪಿಯನ್ ಎಂ.ಕೆಂಪಯ್ಯ ಅವರ ಜೀವನ ಚರಿತ್ರೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಭಾರತೀಯ ರಾಯಭಾರ ಕಚೇರಿಯು ತನ್ನ ಅಧೀನದಲ್ಲಿರುವ ಇಂಡಿಯನ್ ಸ್ಪೋಟ್ರ್ಸ್ ಸೆಂಟರ್ ಸಹಯೋಗದಲ್ಲಿ ಪ್ರತಿಷ್ಠಿತ ಎಎಫ್‍ಸಿ ಆಡಲು ಕತಾರ್ ದೇಶಕ್ಕೆ ಆಗಮಿಸಿದ್ದ ಭಾರತೀಯ ಫುಟ್‍ಬಾಲ್ ತಂಡಕ್ಕೆ ಭವ್ಯ ಸ್ವಾಗತ ಕಾರ್ಯಕ್ರಮ ಆಯೋಜಿಸಿತ್ತು.

ಇದನ್ನೂ ಓದಿ: ಶ್ರೀರಾಮ ದರ್ಶನವಾಗುತ್ತಲೇ ನೂರಾರು ಸಂತರ ಆನಂದಭಾಷ್ಪ
ಭಾರತೀಯ ಫುಟ್‍ಬಾಲ್ ತಂಡವನ್ನು ಹೊರತುಪಡಿಸಿ, ಕತಾರ್‍ನಲ್ಲಿರುವ ಭಾರತದ ರಾಯಭಾರಿ ವಿಪುಲ್ ಹಾಗೂ ಕಚೇರಿಯ ಅಧಿಕಾರಿಗಳು, ಅಪೆಕ್ಸ್ ಬಾಡಿ ಸಮುದಾಯದ ಮುಖಂಡರು ಮತ್ತು ಭಾರತೀಯ ಮೂಲದ ಆಯ್ದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಫುಟ್‍ಬಾಲ್‍ನ ದಂತಕಥೆ ಮಿಡ್‍ಫೀಲ್ಡರ್ – ಒಲಿಂಪಿಯನ್ ಎಂ.ಕೆಂಪಯ್ಯ ಅವರ ಜೀವನ ಚರಿತ್ರೆಯನ್ನು ಭಾರತೀಯ ಫುಟ್‍ಬಾಲ್ ತಂಡದ ನಾಯಕ ಸುನಿಲ್ ಚೆತ್ರಿ, ಭಾರತೀಯ ಫುಟ್‍ಬಾಲ್ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್, ಡಿಸಿಎಂ, ಸಂದೀಪ್ ಕುಮಾರ್, ಭಾರತದ ರಾಯಭಾರಿ ಕಚೇರಿ ಸಚಿನ್ ಕೃತಿಯನ್ನು ಬಿಡುಗಡೆ ಮಾಡಿದರು.
ಭಾರತದ ಪ್ರಥಮ ರಾಯಭಾರಿ ಕಚೇರಿಯ ಸಂಖ್‍ಪಾಲ್, ಭಾರತೀಯ ಕ್ರೀಡಾ ಕೇಂದ್ರದ ಅಧ್ಯಕ್ಷ ಅಬ್ದುಲ್ ರೆಹೆಮಾನ್, ಭಾರತೀಯ ಕ್ರೀಡಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಿಹಾದ್ ಅಲಿ, ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ ವೇದಿಕೆಯಲ್ಲಿದ್ದರು.
ಇದನ್ನೂ ಓದಿ: ಅಯೋಧ್ಯೆ ಭವ್ಯ ಮಂದಿರದಲ್ಲಿ ಬಾಲರಾಮ ವಿರಾಜಮಾನ
ಈ ಜೀವನ ಚರಿತ್ರೆ ಬರೆದಿರುವ ಲೇಖಕಿ ಸುಮಾ ಮಹೇಶ್ ಗೌಡ ಕತಾರ್‍ನಲ್ಲಿ ಸಮುದಾಯದ ನಾಯಕರಾಗಿದ್ದಾರೆ. ಮತ್ತು ಪ್ರಸ್ತುತ ಭಾರತೀಯ ಸಾಂಸ್ಕøತಿಕ ಕೇಂದ್ರದಲ್ಲಿ ಸಾಂಸ್ಕøತಿಕ ಮುಖ್ಯಸ್ಥರಾಗಿದ್ದು, ಪ್ರಸಿದ್ಧ ಮಿಡ್‍ಫೀಲ್ಡರ್ ಒಲಿಂಪಿಯನ್ ಎಂ.ಕೆಂಪಯ್ಯ ಅವರ ದ್ವಿತೀಯ ಪುತ್ರಿಯೂ ಆಗಿದ್ದಾರೆ.
ಸ್ವಾಗತ ಸಮಾರಂಭದಲ್ಲಿ ಬ್ಲೂ ಟೈಗರ್ಸ್ ತಂಡವು ಭಾರತೀಯ ಕ್ರೀಡಾ ಕೇಂದ್ರದ ಅಧ್ಯಕ್ಷ ಇ.ಪಿ.ಅಬ್ದುಲ್ ರೆಹಮಾನ್ ಅವರೊಂದಿಗೆ ವೇದಿಕೆಯಲ್ಲಿದ್ದ ರಾಯಭಾರ ಕಚೇರಿಯ ಅಧಿಕಾರಿಗಳು ಹಾಗೂ ಗೌರವಾನ್ವಿತ ಅತಿಥಿ ವಿಪುಲ್ ಅವರಿಗೆ ಭಾರತೀಯ ಫುಟ್ಬಾಲ್ ಜೆರ್ಸಿಗಳನ್ನು ನೀಡಿದರು.
((ಕತಾರ್ ದೇಶದಲ್ಲಿರುವ ಚಿತ್ರದುರ್ಗ ನ್ಯೂಸ್ ಓದುಗರಿಗಾಗಿ ಈ ಸುದ್ದಿ))
