
CHITRADURGA NEWS | 19 JANUARY 2026
ಚಿತ್ರದುರ್ಗ: ಕಬೀರಾನಂದಾಶ್ರಮದಲ್ಲಿ ಫೆಬ್ರವರಿ 9 ರಿಂದ 15ರವರೆಗೆ ನಡೆಯಲಿರುವ 96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯ ಭಾಸ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ಶ್ರೀ ಕಬೀರಾನಂದಾಶ್ರಮದ ಆವರಣದಲ್ಲಿ ನಡೆದ ಸಭೆಯಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹಾಗೂ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಭಾಸ್ಕರ್ ಆಯ್ಕೆಯಾದರು.
ಇದನ್ನೂ ಓದಿ: ಮನೆಗೆ ಬಂದ ವೀರೇಂದ್ರ ಪಪ್ಪಿ ಕಂಡು ವಾಚ್‌ಮೆನ್ ಮಾಡಿದ್ದೇನು ನೋಡಿ..
ಈ ವೇಳೆ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಬಹಳ ಹಿಂದಿನಿಂದ ಸಣ್ಣದಾಗಿ ನಡೆಯುತ್ತಾ ಬಂದಿದ್ದ ಶಿವನಾಮ ಸಪ್ತಾಹ ಇಂದು ಅದ್ದೂರಿ ಹಾಗೂ ವಿಜೃಂಭಣೆಯಿಂದ ನಡೆಯುತ್ತಿದೆ. ಆದರೆ, ಇದು ಮಠಕ್ಕೆ ಹೊರೆಯಾಗುತ್ತಿದ್ದು, ಭಕ್ತರು ಗಮನಹರಿಸಬೇಕು. ಸಾಧ್ಯವಾದಷ್ಟು ಮಠಕ್ಕೆ ಆಗುವ ಹೊರೆ ತಪ್ಪಿಸಬೇಕು ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ವಿವಿಧ ಮಠಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತಿದೆ ಆದರೆ ಶಿವರಾತ್ರಿಯನ್ನು ಕಬೀರಾನಂದಾಶ್ರಮದಲ್ಲಿ ಮಾತ್ರವೇ ಮಾಡಲಾಗುತ್ತಿದೆ ಮುಂದಿನ ದಿನದಲ್ಲಿ ಶಿವನಾಮ ಸಪ್ತಾಹ ಮಧ್ಯ ಕರ್ನಾಟಕದ ನಾಡ ಹಬ್ಬವಾಗಿ ಪರಿಣಮಿಸಬೇಕಿದೆ ಎಂದರು.
ಇದನ್ನೂ ಓದಿ: 6 ಕೋಟಿ ವೆಚ್ಚದ ಶಿವನಾರದ ಮುನಿ ದೇವಾಲಯ..! | ಸಿರಿಗೆರೆಯಲ್ಲಿ ಭೂಮಿ ಪೂಜೆ
ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಪುಟ್ಟ ಕಾರ್ಯಕ್ರಮವಾಗಿ ಆರಂಭವಾಗಿದ್ದ ಶಿವರಾತ್ರಿ ಮಹೋತ್ಸವ ಈಗ ದೊಡ್ಡದಾಗಿ ಬೆಳೆದಿದೆ. ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ನಡೆಯುತ್ತಿದೆ. ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದೆ. ಹೊಸಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವುದರ ಮೂಲಕ ಶಿವನಾಮ ಸಪ್ತಾಹಕ್ಕೆ ಹೊಸ ಸ್ವರೂಪ ಕೊಡಲಾಗಿದೆ. ಇದಕ್ಕೆ ಎಲ್ಲ ಭಕ್ತರು ತನು, ಮನ, ಧನ ಸಹಾಯ ಮಾಡಬೇಕು ಎಂದು ಕೋರಿದರು.
96ನೇ ಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷರಾಗಿ ನೇಮಕವಾದ ಭಾಸ್ಕರ್ ಮಾತನಾಡಿ ಈ ವರ್ಷದ ಶಿವರಾತ್ರಿ ಸಪ್ತಾಹವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಇದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದರು.
ಇದನ್ನೂ ಓದಿ: ದಿನ ಭವಿಷ್ಯ | ಜನವರಿ 19 | ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ, ಆರ್ಥಿಕ ಲಾಭದ ಸೂಚನೆ
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ನರಸಿಂಹರಾಜು, ನಗರಸಭೆ ಮಾಜಿ ಸದಸ್ಯ ವೆಂಕಟೇಶ್, 95ನೇಶಿವನಾಮ ಸಪ್ತಾಹದ ಕಾರ್ಯಾಧ್ಯಕ್ಷ ವಿಜಯಕುಮಾರ್, ಪರಮೇಶ್, ಕಾರ್ಯದರ್ಶಿ ಪ್ರಶಾಂತ್‍ಕುಮಾರ್, ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಯೋಗೀಶ್, ರಮೇಶ್, ಮಂಜುನಾಥ್ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

