CHITRADURGA NEWS | 06 JANUARY 2026
ಚಳ್ಳಕೆರೆ: ದಿನಸಿ ಖರೀದಿಸುವವರಂತೆ ಅಂಗಡಿಗೆ ಬಂದು, ಅಲ್ಲಿದ್ದ ಮಹಿಳೆಯ ಕೊರಳಿನಲ್ಲಿದ್ದ ಬಂಗಾರದ ಸರ ಕದ್ದು ಪರಾರಿಯಾಗಿದ್ದ ಕಳ್ಳರನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.
09-12-2025 ರಂದು ಮಧ್ಯಾಹ್ನ ಸುಮಾರು 1-40ರ ವೇಳೆ ಚಳ್ಳಕೆರೆಯ ಹಳೇಟೌನ್ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಎ.ಎಸ್ ಮಾರುತಿ ದಿನಸಿ ಅಂಗಡಿಗೆ ಸಾಮಾಗ್ರಿ ಖರೀದಿಸುವ ಸೋಗಿನಲ್ಲಿ ಬಂದು ಎ.ಎಂ.ಲಕ್ಷ್ಮೀ ಎಂಬುವರ ಕೊರಳಿನಲ್ಲಿದ್ದ 65 ಗ್ರಾಂ ತೂಕದ ಬಂಗಾರದ ಸರವನ್ನು ಕಳುವು ಮಾಡಲಾಗಿತ್ತು.
ಇದನ್ನೂ ಓದಿ: ಅಡಿಕೆ ಧಾರಣೆ ಜ.5| ಮತ್ತೆ ಏರಿಕೆ ಕಂಡ ಅಡಿಕೆ ಮಾರುಕಟ್ಟೆ
ಒಬ್ಬ ವ್ಯಕ್ತಿ ಸರ ಕದ್ದಿದ್ದು, ಇನ್ನೊಬ್ಬ ಮೋಟಾರ್ ಬೈಕ್‌ನಲ್ಲಿದ್ದು ಆತನೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸದರಿ ಪ್ರಕರಣದ ಬೆನ್ನತ್ತಿದ ಪೊಲೀಸರು ಜನವರಿ ೫ ರಂದು ಬೆಳಿಗ್ಗೆ 8 ಗಂಟೆಗೆ ಪಿಎಸ್‌ಐ ಈರೇಶ್ ಅವರು ಚಳ್ಳಕೆರೆ ಟೌನ್ ಹೊರವಲಯದ ಅಜ್ಜನಗುಡಿ ಬಳಿ ಆರೋಪಿತರಾದ ಚಳ್ಳಕೆರೆ ಗಾಂಧಿ ನಗರದ ಶ್ಯಾಮ್ @ ಶ್ಯಾಮ್ ಸುಂದರ್ ಹಾಗೂ ದುರ್ಗಾವರ ಗ್ರಾಮದ ಮಂಜುನಾಥ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅಮ್ಮ ದುಡ್ಡು ಕೊಡಲಿಲ್ಲ ಅಂತಾ ಬೆಂಕಿ ಹಚ್ಚಿಕೊಂಡ ಮಗ
ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದ 65 ಗ್ರಾಂ ತೂಕದ ಮಾಂಗಲ್ಯ ಸರ, ಅಂದಾಜು ಬೆಲೆ 07 ಲಕ್ಷ ಮತ್ತು 01 ಮೋಟಾರ್ ಸೈಕಲ್ ಬೆಲೆ 15,000 ಸೇರಿ ಒಟ್ಟು 07.15 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆಗಾಗಿ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶಿವಕುಮಾರ್ ಆರ್ ಹಾಗೂ ಚಳ್ಳಕೆರೆ ಡಿವೈಎಸ್‌ಪಿ ಸತ್ಯನಾರಾಯಣರಾವ್ ಎಂ.ಜಿ ಮಾರ್ಗದರ್ಶನ ಹಾಗೂ ಸಿಪಿಐ ಕುಮಾರ್ ಕೆ ನೇತೃತ್ವದಲ್ಲಿ ಪಿಎಸ್‌ಐಗಳಾದ ಈರೇಶ್, ಶಿವರಾಜ್.ಜೆ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.
ಇದನ್ನೂ ಓದಿ: ಚಿತ್ರದುರ್ಗ – ಮೈಸೂರು ರೈಲ್ವೇ ಮಾರ್ಗಕ್ಕೆ ಬೇಡಿಕೆ | ಸಾರಿಗೆ ಸಂಪರ್ಕಕ್ಕೆ ಕೋಟೆನಾಡು ಕೇಂದ್ರಬಿಂದು
ಕಾರ್ಯಾಚರಣೆಯಲ್ಲಿ ರವಿಕುಮಾರ್.ಬಿ.ವಿ. ಎಎಸ್‌ಐ, ರಾಘವರೆಡ್ಡಿ ಎಎಸ್‌ಐ ಹಾಗೂ ಸಿಬ್ಬಂದಿಗಳಾದ ವಸಂತಕುಮಾರ್, ಶಿವಕುಮಾರ್ , ವೆಂಕಟೇಶ್, ಪರಶುರಾಮ, ಶ್ರೀಧರ ವಸಂತ ಧರಣವರ, ರಮೇಶ್ ಬಾರ್ಕಿ, ಮಂಜುನಾಥ ಎನ್. ಇವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
