ಮುಖ್ಯ ಸುದ್ದಿ
ಅಗ್ನಿವೀರ್ ಆಯ್ಕೆ ಪರೀಕ್ಷೆಗೆ ಅರ್ಜಿ ಆಹ್ವಾನ

Published on
CHITRADURGA NEWS | 25 JANUARY 2024
ಚಿತ್ರದುರ್ಗ: ಭಾರತೀಯ ವಾಯು ಪಡೆಯಿಂದ ಅಗ್ನಿಪಥ್ ಯೋಜನೆಯಡಿ ವಾಯುಸೇವೆಯ ಅಗ್ನಿವೀರ್ ಆಯ್ಕೆ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
10+2 ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ, 02 ಜನವರಿ 2004 ಮತ್ತು 02 ಜುಲೈ 2007ರ ಒಳಗೆ ಜನಿಸಿರುವ, 21 ವರ್ಷ ವಯೋಮಿತಿ ಒಳಗಿರುವ ಅವಿವಾಹಿತ ಪುರುಷ ಮತ್ತು ಮಹಿಳೆ ಅಭ್ಯರ್ಥಿಗಳು ಆನ್ ಮೂಲಕ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 06 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮಾಚ್ 17 ರಂದು ಆನ್‍ಲೈನ್ ಮೂಲಕವೇ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಅಣಬೆ ಬೇಸಾಯ ಹಾಗೂ ಮೌಲ್ಯವರ್ಧನೆ ತರಬೇತಿ
ಹೆಚ್ಚಿನ ಮಾಹಿತಿಗಾಗಿ http://careerindianairforce.cdac.in ಮತ್ತು http://agnipathvayu.cdac.in, ದೂರವಾಣಿ ಸಂಖ್ಯೆ 9945587060,7022459064 ಸಂಪರ್ಕಿಸಬಹುದ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading
Related Topics:Agniveer, Army, Central Govt, Chitradurga, Udyog, ಅಗ್ನಿವೀರ್, ಉದ್ಯೋಗ, ಕೇಂದ್ರ ಸರ್ಕಾರ, ಚಿತ್ರದುರ್ಗ, ಸೇನೆ

Click to comment