CHITRADURGA NEWS | 24 MAY 2026
ಚಿತ್ರದುರ್ಗ: ನಗರದ ಎಸ್.ಜೆ.ಎಂ.ತಾ0ತ್ರಿಕ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ (ಅಲ್ಯೂಮಿನಿ ಮೀಟ್ 2026) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಮಹಾಂತೇಶ್ ಆಯ್ಕೆ
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಎಸ್.ಜೆ.ಎಂ.ವಿದ್ಯಾಪೀಠ ಮತ್ತು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಸದ್ಗುಣ, ಸತ್ಕಾರ್ಯ, ಪ್ರೇರಣೆಗಳೆಲ್ಲ ಪ್ರಶಂಸೆಗಾಗಿ ಅಲ್ಲ. ಅವು ನಮ್ಮ ಮನಕ್ಕೆ ನೆಮ್ಮದಿ ನೀಡಲಿಕ್ಕೆ ಮಾತ್ರ. ನಾವು ಬೆಳೆದ ಬಂದ ದಾರಿಯನ್ನು ಮರೆಯಬಾರದು. ಮನುಷ್ಯನಲ್ಲಿ ಯಾವುದು ಕೊರತೆಯಾದರೂ, ಕೃತಜ್ಞತಾಭಾವ ಕಡಿಮೆಯಾಗಬಾರದು.
ಒಂದು ವ್ಯವಸ್ಥೆ ಹುಟ್ಟು ಹಾಕಲು ಬಂಡವಾಳ ಬೇಕು. ಶಿಕ್ಷಣ ಸಂಸ್ಥೆಗಳನ್ನು ಉದ್ಯಮಿಗಳು, ರಾಜಕಾರಣಿಗಳು, ಬಂಡವಾಳಶಾಹಿಗಳು ತೆರೆಯಬಹುದು. ಆದರೆ ಅದು ವ್ಯಾಪರೀಕರಣವಾಗುತ್ತದೆ. ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು 1966ರಲ್ಲಿ ಮಧ್ಯ ಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಎಸ್.ಜೆ.ಎಂ.ವಿದ್ಯಾಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.
1980ರಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿ ಅದರ ಕಟ್ಟಡವನ್ನು ತಾವೇ ಮುಂದೆ ನಿಂತು ನಿರ್ಮಾಣ ಮಾಡಿಸಿದರು. ಈ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಜಯದೇವ ಶ್ರೀಗಳು ಅನ್ನ ದಾಸೋಹಿಗಳಾಗಿದ್ದರೆ, ಮಲ್ಲಿಕಾರ್ಜುನ ಶ್ರೀಗಳು ಶಿಕ್ಷಣ ದಾಸೋಹಿಗಳು. ಜಯದೇವ ಶ್ರೀಗಳು ವಿದ್ಯಾರ್ಥಿ ನಿಲಯಗಳನ್ನು ದೇಶದಾಂತ್ಯ ಸ್ಥಾಪಿಸಿ ಅನೇಕ ಬಡವಿದ್ಯಾರ್ಥಿಗಳಿಗೆ ಆಸರೆಯಾದರು.
ಇದನ್ನೂ ಓದಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ | ನಿಗಮ ಅಧ್ಯಕ್ಷ ಡಾ.ಎಂ.ರಾಮಪ್ಪ
ಜಯದೇವ ವಿದ್ಯಾರ್ಥಿನಿಲಯಗಳಲ್ಲಿ ಎಸ್.ನಿಜಲಿಂಗಪ್ಪ, ಜಿ ಎಸ್. ಶಿವರುದ್ರಪ್ಪರವರಂತಹ ಮಹನೀಯರು ಆಶ್ರಯ ಪಡೆದು ವ್ಯಾಸಂಗ ಮಾಡಿದ್ದಾರೆ. ಈ ಕಾಲೇಜನ್ನು ಪೂಜ್ಯರು ಹಣ ಮಾಡಲಿಕ್ಕೆ ಕಟ್ಟಲಿಲ್ಲ. ಬಡ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸ್ಥಾಪಿಸಿದರು. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಲ್ಲಿದ್ದು ಸಮಾಜಮುಖಿ ಕಾರ್ಯ ಮಾಡುತ್ತಿದ್ದೀರಿ. ವಿದ್ಯೆ ನೀಡಿದ ಶಾಲೆಯನ್ನು ಸ್ಮರಿಸುವುದು ಪುಣ್ಯದ ಕೆಲಸ. ನಾವು ಋಣ ಸಂಬಂಧ ಮರೆಯಬಾರದು. ಜನ್ಮ ನೀಡಿದ ತಂದೆ ತಾಯಿ ಋಣ ಸಂಬಂಧ, ವಿದ್ಯೆ ನೀಡಿದ ಗುರು-ಶಾಲೆಯ ಋಣ ಸಂಬಂಧ ಮರೆಯಬಾರದು. ಹಳೆಯ ವಿದ್ಯಾರ್ಥಿಗಳ ಸಮಾಗಮ ಹಳೆಯ ನೆನಪುಗಳ ಮೆಲುಕು ಹಾಕುವ ಸಮ್ಮಿಲನ ಎಂದು ತಿಳಿಸಿದರು.
ಎಸ್.ಜೆ.ಎಂ.ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಬಿ.ಗುಡಸಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಕಾಲೇಜಿನ ರಾಯಭಾರಿಗಳಿದ್ದಂತೆ. ಸಂಸ್ಥೆಯ ಜೊತೆಗೆ ನೀವು ಸಹ ಬೆಳೆದಿರುತ್ತೀರಿ. ಈ ಶಿಕ್ಷಣ ಸಂಸ್ಥೆಯನ್ನು ಈ ಸ್ಥಾನಕ್ಕೆ ತರಲು ಅನೇಕ ಅಧ್ಯಾಪಕ ವರ್ಗ ಶ್ರಮಿಸಿದೆ. ಹಳೆಯ ವಿದ್ಯಾರ್ಥಿಗಳು ಈ ಸಂಸ್ಥೆಯೊಂದಿಗೆ, ವಿದ್ಯಾರ್ಥಿಗಳೊಂದಿಗೆ, ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
ಇದನ್ನೂ ಓದಿ: ದುರ್ಗಕ್ಕೆ ನೀರು ಹರಿಸಲು ಭರದ ಸಿದ್ದತೆ | ಭದ್ರಾ ಕಾಮಗಾರಿ ವೀಕ್ಷಿಸಿದ ಶಾಸಕರು
ಹಿರಿಯ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಸಮಿತಿಗಳಲ್ಲಿ ಸ್ಥಾನ ಕಲ್ಪಿಸಿ ಅವರ ಮಾರ್ಗದರ್ಶನ ಪಡೆದುಕೊಳ್ಳಲಾಗುವುದು. ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಹಿರಿಯ ವಿದ್ಯಾರ್ಥಿಗಳ ಅನುಭವ, ಯಶೋಗಾಥೆ ಸಹಕಾರಿಯಾಗಲಿದೆ. ಪ್ರಸ್ತುತ ಕೈಗಾರಿಕೆ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ವಿಶ್ವವಿದ್ಯಾಲಯದ ಪಠ್ಯಕ್ರಮವನ್ನು ರೂಪಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ, ಕೌಶಲ್ಯಗಳ ಕುರಿತು ಉಪನ್ಯಾಸ, ತರಬೇತಿ ನೀಡಲು ಸಂಸ್ಥೆಯು ಸದಾ ನಿಮಗೆ ಮುಕ್ತವಾಗಿರುತ್ತದೆ ಎಂದು ತಿಳಿಸಿದರು.
ಎಸ್.ಜೆ.ಎಂ.ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎಂ.ಎಸ್.ಗಣಾಚಾರಿ ಮಾತನಾಡಿ, ಈ ಕ್ಯಾಂಪಸ್ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹೈ ಟೆಕ್ ಸ್ಪರ್ಶ ಪಡೆಯಲಿದೆ. ಅಂತರಾಷ್ಟ್ರೀಯ ಮಟ್ಟದ ಒಡಂಬಡಿಕೆ, ಸಂಶೋಧನಾ ಸೌಲಭ್ಯವನ್ನು ಒದಗಿಸಲು ವಿಶ್ವವಿದ್ಯಾಲಯ ಬದ್ಧವಾಗಿರುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಸಂಶೋದನೆ, ಕೈಗಾರಿಕೆ ಸಹ ಭಾಗಿತ್ವ, ವಿದ್ಯಾರ್ಥಿ ವಿನಿಮಯ ಮುಂತಾದ ಕಾರ್ಯಕ್ರಮಗಳಿಗೆ ಹಳೆಯ ವಿದ್ಯಾರ್ಥಿಗಳು ಪ್ರಾಯೋಜಕತ್ವ ವಹಿಸಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯರಾದ ಡಾ.ಪಿ.ಬಿ ಭರತ್ ಮಾತನಾಡಿದರು. ಎಸ್.ಜೆ.ಎಂ.ವಿದ್ಯಾಪೀಠ ಮತ್ತು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದ್, ಆಡಳಿತಮಂಡಳಿಯ ಸದಸ್ಯರುಗಳಾದ ಡಾ.ಪಿ.ಎಸ್.ಶಂಕರ್, ಎಸ್.ಎನ್.ಚಂದ್ರಶೇಖರ್ ವಿಡಿಯೋ ಸಂದೇಶದ ಮೂಲಕ ಕಾರ್ಯಕ್ರಮಕ್ಕೆ ಶುಭಾಷಯ ಕೋರಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.23 | ಹತ್ತಿ ರೇಟ್….
1980ರ ದಶಕದ ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಗೋಯಲ್, ಅರುಣ್ ಕುಮಾರ್, ವಿವೇಕ್ ಎಸ್, ತಿರುಮಲೇಶ್ ಭಟ್, ಶಿವರಾಜ್, ಬಾಬುರಾವ್, ಶ್ರೀಧರ್ ರಾಮಕೃಷ್ಣ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಕೆ.ಬಿ.ಸಿದ್ದೇಶ್, ಡಾ.ಕೆ.ಆರ್.ಕೃಷ್ಣಾರೆಡ್ಡಿ, ಡಾ.ಎಸ್.ಪಿ.ಶಿವಕುಮಾರ್, ಡಾ.ಟಿ.ವಿ.ಅರವಿಂದ್, ಡಾ.ಜೆ.ಎಂ.ಶ್ರೀಶೈಲ, ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಡಾ.ಜೆ.ಸತೀಶ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರ್ಷಾ ಪ್ರಾರ್ಥಿಸಿ, ಡಾ.ಜೆ.ಸತೀಶ್ ಸ್ವಾಗತಿಸಿ, ಪ್ರೊ.ಸುಷ್ಮಿತಾದೇಬ್ ನಿರೂಪಿಸಿ, ಡಾ.ಎಸ್.ಚೇತನ್ ವಂದಿಸಿ, ಡಾ.ಕೆ.ಕುಮಾರಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
