CHITRADURGA NEWS | 07 DECEMBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಇಂದು ಮತ್ತೆ ನೀರು ಹರಿದು ಬಂದಿದೆ. ಭದ್ರಾ ಜಲಾಶಯದಿಂದ ಹರಿಯುವ ನೀರು ನಿಂತಿದ್ದು, ಮಳೆಯಾದ ನೀರು ಜಲಾಶಯಕ್ಕೆ ಬಂದು ಸೇರುತ್ತಿದೆ.
ಡಿಸೆಂಬರ್ 7 ಶನಿವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 462 ಕ್ಯೂಸೆಕ್ ನೀರು ಹರಿದು ಬಂದಿದೆ.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಗುಡ್‌ನ್ಯೂಸ್‌ಕೊಟ್ಟ ನರೇಂದ್ರ ಮೋದಿ | ದಶಕಗಳ ಕಾಯುವಿಕೆಗೆ ಸಿಕ್ಕ ಕೆವಿ
135 ಅಡಿ ಎತ್ತರದ ಜಲಾಶಯದಲ್ಲಿ 130 ಅಡಿಗೆ ನೀರು ಬಂದರೆ ಕೋಡಿ ಬೀಳಲಿದೆ. ಸದ್ಯ ಜಲಾಶಯದಲ್ಲಿ 128.75 ಅಡಿವರೆಗೆ ನೀರು ಬಂದಿದೆ. ಇನ್ನು ಒಂದೂ ಕಾಲು ಅಡಿ ನೀರು ಬಂದರೆ ಜಲಾಶಯ ಕೋಡಿ ಬೀಳಲಿದೆ.
30 ಟಿಎಂಸಿ ಅಡಿ ಸಾಮಥ್ರ್ಯದ ವಿವಿ ಸಾಗರ ಜಲಾಶಯದಲ್ಲಿ ಸದ್ಯ, 29.34 ಟಿಎಂಸಿ ಅಡಿ ನೀರು ಜಲಾವಣೆ ಆಗಿದೆ.
ಇದನ್ನೂ ಓದಿ: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ
ಮುಂದೆ ಯಾವುದಾದರೂ ಮಳೆ ಚೆನ್ನಾಗಿ ಬಂದರೆ ಅಥವಾ ಭದ್ರಾದಿಂದ ನೀರು ಹರಿದರೆ ಈ ವರ್ಷ ಜಲಾಶಯ ಕೋಡಿ ಬೀಳಬಹುದು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
