
CHITRADURGA NEWS | 16 OCTOBER 2024
ಚಿತ್ರದುರ್ಗ: ವಿವಿ ಸಾಗರ(VV sagara) ಜಲಾಶಯದ ನೀರಿನ ಹರಿವು ಯಥಾ ಸ್ಥಿತಿ ಮುಂದುವರೆದಿದ್ದು, ಬುಧವಾರ ಕೂಡಾ ಜಲಾಶಯಕ್ಕೆ 2426 ಕ್ಯೂಸೆಕ್ ನೀರು ಬಂದು ಸೇರಿದೆ.
ಕ್ಲಿಕ್ ಮಾಡಿ ಓದಿ: DC Venkatesh: ನಿಮ್ಮ ರಾಸುಗಳಿಗೆ ಇನ್ನೂ ಕಾಲುಬಾಯಿ ಲಸಿಕೆ ಹಾಕಿಸಿಲ್ಲವೇ | ಹಾಗಿದ್ದರೆ ಮತ್ತೊಂದು ಅವಕಾಶ ಮನೆ ಬಾಗಿಲಿಗೆ


ಇದರಿಂದಾಗಿ ಇಂದಿನ ಜಲಾಶಯ ಮಟ್ಟ 122.85 ಅಡಿಗೆ ತಲುಪಿದ್ದು, ಜಲಾಶಯದಲ್ಲಿರುವ ನೀರಿನ ಸಂಗ್ರಹ 24.43 ಟಿಎಂಸಿಗೆ ಮುಟ್ಟಿದೆ.
ಕಳೆದ ವರ್ಷದ ದಾಖಲೆ ನೋಡಿದಾಗ, ಇದೇ ದಿನ 122.15 ಅಡಿವರೆಗೆ ನೀರಿದ್ದು, 23.82 ಟಿಎಂಸಿ ನೀರು ಸಂಗ್ರಹವಾಗಿತ್ತು.
ಚಿತ್ತಾ ಮಳೆ ಜಿಲ್ಲೆಯಲ್ಲಿ ಮ್ಯಾಜಿಕ್ ಮಾಡಿದ್ದು, ಎಲ್ಲೆಲ್ಲೂ ಮಳೆ ಮಳೆ ಎನ್ನುವಂತಾಗಿದೆ. ಬೆಳ್ಳಂ ಬೆಳಗ್ಗೆ ಮಳೆ ಶುರುವಾಗಿದೆ. ಇದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.
ಕ್ಲಿಕ್ ಮಾಡಿ ಓದಿ: Adike: ಅಡಿಕೆ ಧಾರಣೆ | ಅ.15 ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ರೇಟ್
ಮಳೆ ಹೀಗೆ ಮುಂದುವರೆದು, ಭದ್ರಾ ಜಲಾಶಯದಿಂದಲೂ ಸತತ ನೀರು ಹರಿದರೆ ಈ ವರ್ಷ ವಿವಿಸಾಗರ ಕೋಡಿ ಬೀಳುವುದು ಪಕ್ಕಾ ಎನ್ನಬಹುದು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
