ಹೊಸದುರ್ಗ
Vedavati; ವೇದಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ | ಪೊಲೀಸರು, ಸ್ಥಳೀಯರಿಂದ ಹುಡುಕಾಟ


CHITRADURGA NEWS | 20 AUGUST 2024
ಹೊಸದುರ್ಗ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿದ್ದು ಹಲವು ಹಳ್ಳಕೊಳ್ಳಗಳಿಗೆ ಜೀವಕಳೆ ಬಂದಿದೆ.
ಭದ್ರಾ ಜಲಾಶಯದಿಂದ ವೇದಾವತಿ(Vedavati) ನದಿ ಮೂಲಕ ವಿವಿ ಸಾಗರಕ್ಕೆ ನೀರನ್ನೂ ಬಿಡಲಾಗಿದೆ. ಇದರೊಟ್ಟಿಗೆ ಮಳೆ ನೀರು ಸೇರಿ ರಭಸದಿಂದ ಹರಿಯುತ್ತಿದೆ.

ಕ್ಲಿಕ್ ಮಾಡಿ ಓದಿ: Sri Raghavendra Swamy; ಚಿತ್ರದುರ್ಗದಲ್ಲಿ 3 ದಿನ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಪಂಚರಾತ್ರೋತ್ಸವ
ನದಿ ಹರಿಯುತ್ತಿರುವುದರಿಂದ ಮೀನು ಹಿಡಿಯಲು ವೇದಾವತಿ ನದಿಗೆ ತೆರಳಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿರುವ ಘಟನೆ ಜರುಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಸಮೀಪ ಈ ಘಟನೆ ನಡೆದಿದೆ.
ಬಾರಿ ಮಳೆಯಿಂದ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಈ ವೇಳೆ ವೇದಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕ್ಲಿಕ್ ಮಾಡಿ ಓದಿ: T.Raghumurthy; ತಾಲೂಕು ಮಟ್ಟದಲ್ಲಿ ಗ್ಯಾರೆಂಟಿ ಅನುಷ್ಠಾನ ಯೋಜನಾ ಸಮಿತಿ | ಟಿ.ರಘುಮೂರ್ತಿ
ನಾಪತ್ತೆಯಾಗಿರುವ ಯುವಕನನ್ನು ಹೊಸದುರ್ಗ ತಾಲೂಕು ಜಾನಕಲ್ ಗ್ರಾಮದ ಶಿವು (35) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಶಿವು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
