ಮುಖ್ಯ ಸುದ್ದಿ
Vani Vilasa Sagar Dam inflow : ಏರಿಕೆಯಾಗುತ್ತಿದೆ ವಿವಿ ಸಾಗರ ಜಲಾಶಯ ಮಟ್ಟ | ಹೆಚ್ಚುತ್ತಿದೆ ಒಳಹರಿವು

Published on
CHITRADURGA NEWS | 20 AUGUST 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ (Vani Vilasa Sagar Dam inflow ) ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಕೆರೆ, ಕಟ್ಟೆ, ಚೆಕ್ ಡ್ಯಾಂ ಭರ್ತಿಯಾಗಿವೆ. ಕೆಲವೆಡೆ ಕೆರೆಗಳು ಕೋಡಿಬಿದ್ದಿವೆ.
ಕ್ಲಿಕ್ ಮಾಡಿ ಓದಿ: ಸರ್ಕಾರಿ ಕೆಲಸಕ್ಕೆ ನೇಮಕಾತಿ ಪ್ರಾರಂಭ | ಅರ್ಜಿ ಸಲ್ಲಿಕೆಗೆ ಕೇವಲ 6 ದಿನ ಬಾಕಿ

ಆಗಸ್ಟ್ 20 ರ ಮಂಗಳವಾರ ಬೆಳಗ್ಗೆ ನಡೆಸಿದ ಮಾಪನದ ಪ್ರಕಾರ ವಿವಿ ಸಾಗರಕ್ಕೆ ಬರೋಬ್ಬರಿ 1,456 ಕ್ಯೂಸೆಕ್ ನೀರು ಹರಿದು ಬಂದಿದೆ. 30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 20.21 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟಾರೆ 135 ಅಡಿ ಎತ್ತರದ ಜಲಾಶಯದಲ್ಲಿ ಇಂದಿಗೆ 117.10 ಅಡಿ ನೀರು ಬಂದಿದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 122.95 ಅಡಿವರೆಗೆ ತುಂಬಿದ್ದ ಜಲಾಶಯದಲ್ಲಿ 24.53 ಟಿಎಂಸಿ ನೀರಿತ್ತು.
Continue Reading
Related Topics:cusec, Inflow, Reservoir, Rise, VV Sagar, ಏರಿಕೆ, ಒಳಹರಿವು, ಕ್ಯೂಸೆಕ್, ಜಲಾಶಯ, ವಿವಿ ಸಾಗರ

Click to comment